More

    ಮಾದಕ ದ್ರವ್ಯಕ್ಕೆ ಆಸ್ಪದ ಕೊಡಬೇಡಿ

    ಗೋಕರ್ಣ: ಮಾದಕ ದ್ರವ್ಯ ಬಳಸುವವರು ತಾವು ಹಾಳಾಗುವ ಜೊತೆಗೆ ಸಮಾಜ ಮತ್ತು ಪೀಳಿಗೆಯ ನಾಶಕ್ಕೆ ಕಾರಣರಾಗುತ್ತಾರೆ. ಇಂತಹ ಪ್ರವಾಸೋದ್ಯಮ ಸ್ಥಳದಲ್ಲಿ ವಿವಿಧ ಪ್ರಕಾರದ ಉದ್ಯೋಗ ನಡೆಸಿ ಪ್ರವಾಸಿಗರ ಸಂಪರ್ಕಕ್ಕೆ ಬರುವವರು ಯಾವುದೇ ರೀತಿಯಲ್ಲಿ ಡ್ರಗ್ಸ್​ಗಳಿಗೆ ಆಸ್ಪದ ಕೊಡಬಾರದು ಎಂದು ಎಸ್ಪಿ ಶಿವಪ್ರಕಾಶ ದೇವರಾಜು ಹೇಳಿದರು.

    ಪೊಲೀಸ್ ಇಲಾಖೆ ವತಿಯಿಂದ ಇಲ್ಲಿ ಜರುಗಿದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಇಲ್ಲಿನ ಹೋಮ್್ಟೇ, ಹೋಟೆಲ್, ರೆಸಾರ್ಟ್ ಮತ್ತು ವಸತಿ ಗೃಹಗಳನ್ನು ನಡೆಸುತ್ತಿರುವವರು ಮಾದಕ ದ್ರವ್ಯದ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಬೇಕು. ಈ ವ್ಯವಹಾರದಲ್ಲಿರುವವರು ಯಾರಾದರೂ ಡ್ರಗ್ಸ್​ಗೆ ಉತ್ತೇಜನ ನೀಡುತ್ತಿರುವುದು ಪೊಲೀಸರ ಗಮನಕ್ಕೆ ಬಂದರೆ ಅಂಥವರ ಲೈಸೆನ್ಸ್ ರದ್ದುಪಡಿಸಿ ವ್ಯವಹಾರ ನಿರ್ಬಂಧಿಸಲಾಗುವುದು ಎಂದು ಎಚ್ಚರಿಸಿದರು.

    ಕುರಿಗದ್ದೆಯಲ್ಲಿ ಒಂದು ಸಮಾಜದವರು ಒಂದೆಡೆ ಸೇರಿ ಸಾರ್ವಜನಿಕ ಪ್ರಾರ್ಥನೆ ನಡೆಸುತ್ತಿರುವ ಬಗ್ಗೆ ಸಭೆಯಲ್ಲಿ ದೂರು ಕೇಳಿ ಬಂದಿತು. ಈ ಬಗ್ಗೆ ಮಾತನಾಡಿದ ಎಸ್ಪಿ ಶಿವಪ್ರಕಾಶ, ಸಾರ್ವಜನಿಕವಾಗಿ ಜನ ಸೇರುವುದಕ್ಕೆ ನಿರ್ಬಂಧವಿದೆ. ಅದು ಮಂದಿರ ಇರಬಹುದು ಅಥವಾ ಪ್ರಾರ್ಥನಾ ಸ್ಥಳ ಆಗಿರಬಹುದು. ಇದಕ್ಕೆ ಕಾನೂನಿನ ಪ್ರಕಾರ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಕಡ್ಡಾಯ. ಕಾರಣ ಈ ಬಗೆಯಲ್ಲಿ ಪ್ರಾರ್ಥನಾ ಕಾರ್ಯಕ್ರಮ ನಡೆಸುವವರು ಅನುಮತಿ ಪಡೆಯದೆ ನಡೆಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಸೂಚಿಸಿದರು.

    ಇದೇ ವೇಳೆ ಪ್ರವಾಸಿಗರ ಜೀವ ರಕ್ಷಣೆಯಲ್ಲಿ ಸಹಾಯ ನೀಡುತ್ತಿರುವ ಈ ಭಾಗದ ಮೀನುಗಾರರನ್ನು ಮತ್ತು ಲೈಫ್​ಗಾರ್ಡ್​ಗಳನ್ನು ಸನ್ಮಾನಿಸಿದರು. ಸಭೆಯಲ್ಲಿ ತದಡಿ ಮೀನುಗಾರರ ಸಂಘದ ಅಧ್ಯಕ್ಷ ಉಮಾಕಾಂತ ಹೊಸ್ಕಟ್ಟ, ಗಂಗಾವಳಿ ಗಂಗಾಮಾತಾ ಮಂದಿರ ವತಿಯಿಂದ ಗಣೇಶ ಅಂಬಿಗ ಮತ್ತು ಮುಸ್ಲಿಂ ಸಮಾಜದ ಕೆಲವರು ಮಾತನಾಡಿದರು. ಸಭೆಯಲ್ಲಿ ಎಎಸ್​ಪಿ ನಿಖಿಲ್ ಬಿ., ಸಿಪಿಐ ಪರಮೇಶ್ವರ ಗುನಗ ಇತರರಿದ್ದರು. ಪಿಎಸ್​ಐ ನವೀನ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts