More

    ಮಾತೃಭಾಷೆ ಉಳಿಸುವ ಕೆಲಸ ಅಗತ್ಯ


    ಯಾದಗಿರಿ: ಪಂಪ, ಕುಮಾರವ್ಯಾಸ, ಕುವೆಂಪು, ದ.ರಾ.ಬೇಂದ್ರೆ ಸೇರಿ ಅನೇಕ ಮಹಾಕವಿಗಳು ಕನ್ನಡ ಸಾಹಿತ್ಯವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಅದನ್ನು ಉಳಿಸಿ, ಬೆಳೆಸುವ ಭರವಸೆ ಯುವ ಶಕ್ತಿಯಲ್ಲಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.

    ನಗರದ ವಿದ್ಯಾಮಂಗಲ ಕಾಯರ್ಾಲಯದಲ್ಲಿ ನಮ್ಮ ಕರುನಾಡ ರಕ್ಷಣಾ ವೇದಿಕೆಯಿಂದ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾತೃಭಾಷೆಯ ಬಗ್ಗೆ ನಮ್ಮಲ್ಲಿ ಎಷ್ಟು ಅಭಿಮಾನವಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಯುವ ಸಮುದಾಯವು ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯ ಮಾಡಬೇಕು ಎಂದರು.

    ಸಾನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಗುರು ಮರುಘಾರಾಜೇಂದ್ರ ಸ್ವಾಮಿಗಳು, ಯಾದಗಿರಿ ಗಡಿಗೆ ಅಂಟಿಕೊಂಡ ಜಿಲ್ಲೆ. ಇಲ್ಲಿ ಕನ್ನಡಪರ ಚಟುವಟಿಕೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಸುವ ಅಗತ್ಯವಿದೆ. ತಂತ್ರಜ್ಞಾನ ಮತ್ತು ಆಧುನೀಕರಣದ ಭರಾಟೆಯಲ್ಲಿ ಮಾತೃಭಾಷೆ ಮರೆಯಾಗುತ್ತಿದೆ. ಅದನ್ನು ಉಳಿಸುವುದು ಯುವ ಜನರ ಮೇಲಿದೆ ಎಂದು ಸಲಹೆ ನೀಡಿದರು.

    ವೇದಿಕೆ ಜಿಲ್ಲಾಧ್ಯಕ್ಷ ರವಿ ಕೆ.ರಾಠೋಡ್ ಪ್ರಾಸ್ತಾವಿಕ ಮಾತನಾಡಿ, ವರ್ಷದ 12 ತಿಂಗಳು ಕನ್ನಡಪರ ಸಂಘಟನೆಗಳು ನಾಡಿನ ನೆಲ, ಜಲ, ಭಾಷೆಯ ವಿಷಯದಲ್ಲಿ ಸಾಕಷ್ಟು ಹೋರಾಟ ಮಾಡುತ್ತಿವೆ. ನಮ್ಮ ಪಾಲಿಗೆ ಕನ್ನಡ ರಾಜ್ಯೋತ ದೀಪಾವಳಿ, ದಸರಾ ಹಾಗೂ ಸಂಕ್ರಾಂತಿ ಹಬ್ಬವಿದ್ದಂತೆ ಎಂದರು.

    ಇದೇ ವೇಳೆ ಜಿಲ್ಲಾ ಆರ್ಸಿಎಚ್ಒ ಡಾ.ಮಲ್ಲಪ್ಪ ನಾಯ್ಕಲ್, ಶರಿಸ್ತೇದಾರ ಅನುಸೂಯಾ ಬಾಯಿ, ನಿವೃತ್ತ ಶಿಕ್ಷಕಿ ಅನ್ನಪೂರ್ಣಮ್ಮ ಹಿರೇಮಠ ಅವರಿಗೆ ಕರುನಾಡ ಸೇವಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts