More

    ಮಾಜಿ ಸಿಎಂ ಕುಮಾರಣ್ಣನಿಂದ ಟೆಂಪಲ್ ರನ್


    ಯಾದಗಿರಿ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭಗೊಂಡಿದ್ದು, ಗುರುವಾರ ಯರಗೋಳದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾವೇಶಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾತ್ರಿ ಗುರುಮಠಕಲ್ನಲ್ಲಿ ವಾಸ್ತವ್ಯ ಹೂಡಿದರು.

    ಶುಕ್ರವಾರ ಬೆಳಗ್ಗೆ ಸೇಡಂ ತಾಲೂಕಿನ ಯಾನಾಗುಂದಿಯ ಸರ್ಯನಂದಿ ಬೆಟ್ಟಕ್ಕೆ ಭೇಟಿ ನೀಡಿದ ಅವರು, ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಗದ್ದುಗೆ ದರ್ಶನ ಪಡೆದರು. ನಂತರ ಯಾದಗಿರಿ ತಾಲೂಕಿನ ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ, ಮಲ್ಲಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದರು.

    ನಂತರ ಸುದ್ದಿಗಾರರೊಡನೆ ಮಾತನಾಡಿ, ಬಿಜೆಪಿಯವರು ಚುನಾವಣೆ ನಂತರ ಆಪರೇಷನ್ ಕಮಲ ಮಾಡಿದರೆ, ಕಾಂಗ್ರೆಸ್ನವರು ಅದಕ್ಕೂ ಮುಂಚೆಯೇ ಆಪರೆಷನ್ ಹಸ್ತ ಆರಂಭಿಸಿದ್ದಾರೆ. ಗುಮಠಕಲ್ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯನ್ನು ಕೈಪಕ್ಷದವರು ವಾಪಸ್ ಪಡೆದಿದ್ದಾರೆ. ಎಐಸಿಸಿ ಅಧ್ಯಕ್ಷ ವಿರುದ್ಧ ತೊಡೆ ತಟ್ಟಿದವರನ್ನು ಸೇರ್ಪಡೆ ಮಾಡಿಕೊಂಡಿದ್ದಾರೆ. ಇಂಥ ಸ್ಥಿತಿ ಆ ಪಕ್ಷಕ್ಕೆ ಬರಬಾರದಾಗಿತ್ತು ಎಂದು ಲೇವಡಿ ಮಾಡಿದರು.

    ಬಾಬುರಾವ್ ಚಿಂಚನಸೂರ ದೊಡ್ಡ ವ್ಯಕ್ತಿಯೇನಲ್ಲ. ಅವರ ಹಿನ್ನೆಲೆ ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಂದ ನಮ್ಮ ಅಭ್ಯಥರ್ಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ. ಕೈ ಪಕ್ಷದಲ್ಲಿ ಸಧ್ಯ ಅಭ್ಯಥರ್ಿಗಳ ಬರ ಕಾಡುತ್ತಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷರನ್ನೇ ಚುನಾವಣೆಯಲ್ಲಿ ಸೋಲಿಸಿದವರನ್ನು ಮತ್ತೆ ಪಕ್ಷಕ್ಕೆ ಕರೆದುಕೊಂಡಿದ್ದಾರೆ ಎಂದರು.
    ಕೋಲಿ ಸಮಾಜಕ್ಕೆ ಚಿಂಚನಸೂರ್ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಲು ಬಿಜೆಪಿಗೆ ಹೋಗಿದ್ದವರು. ಈಗ ಖಾಲಿ ಕೈಯಲ್ಲಿ ವಾಪಸ್ ಬಂದಿದ್ದಾರೆ. ಖಗರ್ೆ ಅವರನ್ನು ಮುಗಿಸಲು ಬಿಜೆಪಿಗೆ ಹೋಗಿದ್ದವರು, ಇದೀಗ ತಮ್ಮ ಸಮಾಜಕ್ಕೆ ಯಾವ ಸಂದೇಶ ಕೊಡುತ್ತಾರೆ ಎಂದು ಕಿಡಿಕಾರಿದರು.

    ಬಿಜೆಪಿ ಅಪರೇಷನ್ ಕಮಲ ಪ್ರಕ್ರಿಯೆ ಗಿನ್ನಿಸ್ ರೆಕಾಡರ್್ ಆಗುತ್ತದೆ. ನಾನು ಸೋಲಿನ ಭೀತಿ ಅಂತ ಹೇಳಲ್ಲ. ರಾಜಕಾರಣಿಗಳಿಗೆ ಸೋಲು-ಗೆಲುವ ಎನ್ನುವುದು ಎಲ್ಲರಿಗೂ ಆಗಿದೆ. ಸಿದ್ದರಾಮಯ್ಯ ಕೂಡ ಎರಡ್ಮೂರು ಬಾರಿ ಸೋತಿದ್ದಾರೆ. ನಾನೂ ಪರಾಭವಗೊಂಡಿದ್ದೇನೆ. ಸೋಲು-ಗೆಲುವ ಜನರ ಕೈಯಲ್ಲಿದೆ. ಹಾಗಾಗಿ ಇಲ್ಲಿ ಭೀತಿ ಪಡುವುದು ಏನು ಇಲ್ಲ. ಜನ ಬೇಕಾದಾಗ ಆಯ್ಕೆ ಮಾಡ್ತಾರೆ, ಬೇಡವಾದಾಗ ತಿರಸ್ಕಾರ ಮಾಡುತ್ತಾರೆ ಎಂದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts