More

    ಮಾಜಾಳಿ ತೀರದಲ್ಲಿ ಮಿಣಿ ಮಿಣಿ ಮಿಂಚು

    ಕಾರವಾರ : ಮಾಜಾಳಿ ಕಡಲ ತೀರದಲ್ಲಿ ಸಮುದ್ರದ ನೀರು ರೇಡಿಯಂನಂತೆ ‘ಮಿಣಿ ಮಿಣಿ’ ಹೊಳೆಯಲಾರಂಭಿಸಿದೆ. ಮಾಜಾಳಿ ದಾಂಡೆಬಾಗದಿಂದ ತಿಳಮಾತಿ ಕಡಲ ತೀರದವರೆಗೆ ಸುಮಾರು 2 ಕಿಮೀ ಅಗಲ ಸಮುದ್ರದಲ್ಲಿ 8 ನಾಟಿಕಲ್ ಮೈಲ್​ವರೆಗೆ ಈ ಪರಿಸ್ಥಿತಿ ಕಂಡುಬಂದಿದೆ. ರಾತ್ರಿ ವೇಳೆ ನೀರಿನಿಂದ ನೀಲಿ ಬಣ್ಣದ ಬೆಳಕು ಹೊರ ಬರುತ್ತಿರುವುದನ್ನು ಕರ್ನಾಟಕ ವಿಶ್ವ ವಿದ್ಯಾಲಯದ ಕಡಲ ಜೀವಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಗುರುತಿಸಿದ್ದಾರೆ.

    ಏಕೆ ಹೀಗೆ?: ‘ಆಳ ಸಮುದ್ರದಲ್ಲಿರುವ ಡೈನೋಫ್ಲಾಗೆಲೆಟ್ ನಾಕ್ಟಿಲುಕ್ ಸಿಂಟಿಲನ್ಸ್ ಎಂಬ ಏಕಕೋಶೀಯ ಸಮುದ್ರ ಪಾಚಿ ಅಥವಾ ಅಲ್ಗೆಗಳು ಹೇರಳವಾಗಿ ದಂಡೆಗೆ ತೇಲಿ ಬಂದಿವೆ. ಇವು ರಾತ್ರಿಯ ವೇಳೆಯಲ್ಲಿ ನೀಲಿಯಾಗಿಯೂ, ಬೆಳಗಿನ ಅವಧಿಯಲ್ಲಿ ಹಸಿರಾಗಿಯೂ ಗೋಚರಿಸುತ್ತವೆ’ ಎಂದು ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕಡಲ ಜೀವಶಾಸ್ತ್ರ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

    ‘2017ರಲ್ಲೂ ಒಮ್ಮೆ ಈ ಭಾಗದಲ್ಲಿ ಈ ರೀತಿ ಗೋಚರವಾಗಿತ್ತು. ಲ್ಯೂಸಿಫೆರೆನ್ ಎಂಬ ಕಿಣ್ವ ಆಮ್ಲಜನಕದೊಂದಿಗೆ ಪ್ರತಿಕ್ರಿಯಿಸಿದಾಗ ಈ ರೀತಿಯ ಬೆಳಕು ಉತ್ಪತ್ತಿಯಾಗುತ್ತದೆ’ ಎಂದು ಅವರು ವಿವರಿಸಿದ್ದಾರೆ.

    ಮತ್ಸ್ಯ ಕ್ಷಾಮವೇ?: ಆಳ ಸಮುದ್ರದಲ್ಲಿ ಬೆಳೆಯುವ ಪಾಚಿಗಳು ಮತ್ತೆ ಮತ್ತೆ ಕಾರವಾರ ಹಾಗೂ ಸುತ್ತಲಿನ ಕಡಲ ತೀರದಲ್ಲಿ ಗೋಚರಿಸುತ್ತಿರುವುದು ಒಳ್ಳೆಯ ಸೂಚನೆಯಲ್ಲ. ಈ ರೀತಿ ಉಂಟಾದರೆ ಆಹಾರ ಸರಪಳಿಗೆ ಧಕ್ಕೆ ಉಂಟಾಗುತ್ತದೆ. ಒಂದೇ ಥರದ ಜೀವಿಗಳು ಹೆಚ್ಚು ಬೆಳೆದಾಗ ಬೇರೆ ಜೀವಿಗಳು ದೂರ ಹೋಗಿ ಬಿಡುತ್ತವೆ. ಇವು ಹೆಚ್ಚಾಗಿ ಬೆಳೆದಾಗ ಸಮುದ್ರದಲ್ಲಿ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದರಿಂದ ದಡದ ಭಾಗದಲ್ಲಿರುವ ಕೆಲವು ಮೀನುಗಳು ಆಳ ಸಮುದ್ರದತ್ತ ವಲಸೆ ಹೋಗಬಹುದು ಎನ್ನುತ್ತಾರೆ ಡಾ.ಹರಗಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts