More

    ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶಿಕ್ಷಣ ಅವಶ್ಯ

    ರಟ್ಟಿಹಳ್ಳಿ: ಗ್ರಾಮೀಣ ಪ್ರದೇಶದಲ್ಲಿ ಯವತಿಯರ ಉನ್ನತ ಶಿಕ್ಷಣಕ್ಕೆ ನಿರ್ಲಕ್ಷ್ಯ ವಹಿಸಿ, ಅವರನ್ನು ವೈವಾಹಿಕ ಜೀವನಕ್ಕೆ ಕಳುಹಿಸಲಾಗುತ್ತಿದೆ. ಪಾಲಕರು ತಮ್ಮ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಉತ್ತಮ ಶಿಕ್ಷಣ ಪಡೆದಲ್ಲಿ ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಲು ಸಾಧ್ಯ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ತಾಲೂಕಿನ ತಿಪ್ಪಾಯಿಕೊಪ್ಪದ ಶ್ರೀ ಮೂಕಪ್ಪ ಶಿವಯೋಗಿಗಳ ಮಠದ ಆವರಣದಲ್ಲಿ ಮಾಸೂರು-ತಿಪ್ಪಾಯಿಕೊಪ್ಪ ಕೇಸರಿ ಮಹಿಳಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

    ಮಹಿಳೆಯರು ತಮ್ಮ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ನೀರು, ಶಿಕ್ಷಣ, ಸ್ವಚ್ಛತೆ ಬಗ್ಗೆ ಮನವಿ ಮಾಡಿದ್ದು ಶ್ಲಾಘನೀಯ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿದ್ದಾರೆ. ಸಂಘಟನೆ ಒಂದು ಶಕ್ತಿ. ಇದರಿಂದ ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

    ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಸರ್ಕಾರ ಮಹಿಳಾ ಸಂಘಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗದೆ ಆರ್ಥಿಕವಾಗಿ ಸಬಲರಾಗಬೇಕು ಎಂದರು.

    ಜಿ.ಪಂ. ಸದಸ್ಯೆ ಸುಮಿತ್ರಾ ಪಾಟೀಲ, ಸೃಷ್ಟಿ ಪಾಟೀಲ, ಕೇಸರಿ ಪಡೆಯ ಅಧ್ಯಕ್ಷೆ ಆಶಾ ಕೋರಿ ಮಾತನಾಡಿದರು. ತಿಪ್ಪಾಯಿಕೊಪ್ಪ ಗ್ರಾಮದ ಮೂಕಪ್ಪ ಶಿವಯೋಗಿಗಳ ಮಠದ ವಿರೂಪಾಕ್ಷ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾ.ಪಂ. ಅಧ್ಯಕ್ಷ ದಿಳ್ಳೆಪ್ಪ ಹಳ್ಳಳ್ಳಿ, ರಾಜು ಬಣಕಾರ, ಉಪಾಧ್ಯಕ್ಷ ಭರಮಪ್ಪ ಎಲದಹಳ್ಳಿ, ರಟ್ಟಿಹಳ್ಳಿ ಕೇಸರಿ ಮಹಿಳಾ ಪಡೆಯ ಅಧ್ಯಕ್ಷೆ ರೂಪಾ ಅಂಬ್ಲೇರ, ರುದ್ರಗೌಡ ಹಳ್ಳಪ್ಪಗೌಡ್ರ, ಆರ್.ಎನ್. ಗಂಗೋಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ಸಿ. ಪಾಟೀಲ, ವಾಮನ ನಲವಾಡಿ, ನಿಂಗರಾಜ ಹಳ್ಳಪ್ಪಗೌಡ್ರ, ಡಾ. ಪ್ರಕಾಶ ದೇವಾಂಗದ, ನಾಗರಾಜ ಹಿರೇಮಠ, ಬಂಗಾರಪ್ಪ ಇಕ್ಕೇರಿ, ನಿಂಗಪ್ಪ ಚಳಗೇರಿ, ಧ.ಗ್ರಾ.ಯೋ. ಗಣೇಶ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts