More

    ಮಹಿಳೆಯರು ಸಂಘಟಿತರಾಗಿ ಹೋರಾಡಿ

    ಗೋಕಾಕ: ಮಹಿಳೆಯರ ಶ್ರೇಯೋಭಿವೃದ್ಧಿಗೆ ಸಂವಿಧಾನದಲ್ಲಿ ಪ್ರಥಮ ಪ್ರಾಶಸ್ತ್ಯ ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಡಾ.ಬಿ.ಆರ್. ಅಂಬೇಡ್ಕರ್ ಅವರು ಅವಕಾಶ ಕಲ್ಪಿಸಿದ್ದಾರೆ ಎಂದು ಡಿಎಸ್‌ಎಸ್‌ನ ಸಂಘಟನಾ ರಾಜ್ಯ ಸಂಚಾಲಕ ಸತ್ಯಪ್ಪ ಕರವಾಡಿ ಹೇಳಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮಿತಿಯ ಮಹಿಳಾ ಪದಾಧಿಕಾರಿಗಳ ಆಯ್ಕೆ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಮಹಿಳೆಯರ ಮೇಲೆ ಮೋಸ, ದೌರ್ಜನ್ಯ-ಅತ್ಯಾಚಾರದಂತಹ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅವುಗಳನ್ನು ಹತ್ತಿಕ್ಕುವ ಕಾರ್ಯವಾಗಬೇಕು. ಆದ್ದರಿಂದ ಮಹಿಳೆಯರು ಸಂಘಟಿತರಾಗಿ ಹೋರಾಟ ಮಾಡಬೇಕೆಂದರು.

    ಮಹಿಳಾ ಘಟಕದ ಜಿಲ್ಲಾ ಸಂಘಟನಾ ಸಂಚಾಲಕಿಯಾಗಿ ಸಂಗೀತಾ ನಿಂಗಪ್ಪ ಕಾಂಬಳೆ, ತಾಲೂಕು ಸಂಘಟನಾ ಸಂಚಾಲಕಿಯನ್ನಾಗಿ ಮುತ್ತವ್ವ ಅರ್ಜುನ ಗಾದ್ಯಾಗೋಳ, ಉದಗಟ್ಟಿ ಗ್ರಾಮ ಸಂಚಾಲಕಿಯನ್ನಾಗಿ ಲಗಮವ್ವ ಲಕ್ಷ್ಮಣ ದಳವಾಯಿ ಅವರನ್ನು ಆಯ್ಕೆ ಮಾಡಲಾಯಿತು. ಡಿಎಸ್‌ಎಸ್‌ನ ಮಹಿಳಾ ಘಟಕದ ಬೆಳಗಾವಿ ವಿಭಾಗೀಯ ಸಂಚಾಲಕಿ ಸುಧಾ ಮುರಕುಂಬಿ, ಜಿಲ್ಲಾ ಸಂಚಾಲಕ ಬಾಳೇಶ ಬನಹಟ್ಟಿ, ಅಲ್ಪ ಸಂಖ್ಯಾತರ ಘಟಕದ ಅಲ್ಲಾಭಕ್ಷ ಮುಲ್ಲಾ, ಮಂಜುಳಾ ರಾಮಗಾನಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts