More

    ಮಹಿಳೆಯನ್ನು ಬಲಿಪಡೆದ ಮಳೆ

    ಜೇವರ್ಗಿ: ಕಳೆದ ನಾಲೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಬಿರಾಳ (ಬಿ) ಗ್ರಾಮದಲ್ಲಿ ಎರಡು ಅಂತಸ್ಥಿನ ಮನೆಯೊಂದು ಕುಸಿದು, ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಸೋಮವಾರ ಜರುಗಿದೆ.

    ಬಸಮ್ಮ ಬಸವರಾಜ (35) ಮೃತ ದುರ್ದೈವಿ. ತಾಯಿ ಹಾಗೂ ಮಗಳು ಅಶ್ವಿನಿ ಮನೆಯಲ್ಲಿದ್ದರು. ಸಂಜೆ 5 ಗಂಟೆ ಸುಮಾರಿಗೆ ಭಾರೀ ಶಬ್ದ ಕೇಳಿಬಂದಿದ್ದರಿಂದ ಮಗಳು ಹೊರಗೆ ಓಡಿಬಂದಿದ್ದಾಳೆ. ಆದರೆ ನಿದ್ದೆಯಲ್ಲಿದ್ದ ಬಸಮ್ಮ ಮನೆಯಲ್ಲಿಯೇ ಉಳಿದಿದ್ದು, ಬೃಹತ್​ ಗಾತ್ರದ ಕಲ್ಲು ಹಾಗೂ ಕಟ್ಟಿಗೆಗಳು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು.

    ತಹಸೀಲ್ದಾರ್​ ರಾಜೇಶ್ವರಿ ಪಿ.ಎಸ್ಸೇ. ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts