More

    ಮಹಾರಾಷ್ಟ್ರದ ಅಕ್ಕಲಕೋಟದಲ್ಲಿ ಕನ್ನಡ ನುಡಿ ಜಾತ್ರೆ ನಾಳೆಯಿಂದ

    ಸೊಲ್ಲಾಪುರ: ಮಹಾರಾಷ್ಟ್ರ ರಾಜ್ಯ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಬುಧವಾರ ಮತ್ತು ಗುರುವಾರ ಅಕ್ಕಲಕೋಟದಲ್ಲಿ ಆಯೋಜಿಸಲಾಗಿದ್ದು, ಸಿದ್ಧತೆ ಪೂರ್ಣಗೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಗಡಿನಾಡು ಘಟಕ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ ತಿಳಿಸಿದರು.

    ಮಹಾರಾಷ್ಟ್ರ ಮತ್ತು ಕನರ್ಾಟಕ ಗಡಿಭಾಗದ ಅಕ್ಕಲಕೋಟದ ಪ್ರಿಯದರ್ಶಿನಿ ಮಂಗಲ ಕಾರ್ಯಾಲಯದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಬುಧವಾರ ಬೆಳಗ್ಗೆ 8ಕ್ಕೆ ತಹಸೀಲ್ದಾರ್ ಬಾಳಾಸಾಹೇಬ್ ಸಿರಸಟ್ ಧ್ವಜಾರೋಹಣ ಮಾಡುವರು. 9ಕ್ಕೆ ಶ್ರೀ ಮಲ್ಲಿಕಾರ್ಜುನ ಮಂದಿರದಿಂದ ಸರ್ವಾಧ್ಯಕ್ಷೆ ಡಾ.ಮಧುಮಾಲಾ ಲಿಗಾಡೆ ಅವರ ಮೆರವಣಿಗೆಗೆ ನಗರಾಧ್ಯಕ್ಷೆ ಶೋಭಾ ಖೇಡಗಿ ಚಾಲನೆ ನೀಡುವರು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಬೆಳಗ್ಗೆ 11ಕ್ಕೆ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ಹಾಗೂ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅಧ್ಯಕ್ಷತೆಯಲ್ಲಿ ಶಾಸಕ ಸಚಿನ್ ಕಲ್ಯಾಣಶೆಟ್ಟಿ ಸಮ್ಮೇಳನ ಉದ್ಘಾಟಿಸುವರು. ಸಮ್ಮೇಳಾಧ್ಯಕ್ಷರ ಭಾಷಣದ ನಂತರ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ, ಮಧ್ಯಾಹ್ನ 12.30ಕ್ಕೆ ಕನ್ನಡ-ಮರಾಠಿ-ಭಾಷಾ ಬಾಂಧವ್ಯ ಗೋಷ್ಠಿ, 2.30ಕ್ಕೆ ಮಹಾನೆಲದ ಸಾಹಿತಿಗಳ ತಲ್ಲಣಗಳು, ಸಂಜೆ 4.30ಕ್ಕೆ ಕವಿಗೋಷ್ಠಿ, 7ಕ್ಕೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದರು.

    31ರಂದು ಬೆಳಗ್ಗೆ 10.30ಕ್ಕೆ ಮಹಾನೆಲದ ಕನ್ನಡ ಶಾಲೆಗಳ ಸ್ಥಿತಿಗತಿ, ಮಧ್ಯಾಹ್ನ 12.30ಕ್ಕೆ ಮಹಾರಾಷ್ಟ್ರ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಪರಂಪರೆ, 2.30ಕ್ಕೆ ಮಹಿಳಾ ಸಬಲೀಕರಣ ಮತ್ತು ಸಾಧಕ ಮಹಿಳೆಯರಿಗೆ ಸನ್ಮಾನ, ಸಂಜೆ 4ಕ್ಕೆ ಬಹಿರಂಗ ಅಧಿವೇಶನ ನಂತರ ಸನ್ಮಾನ ಮತ್ತು ಸಮಾರೋಪ ನಡೆಯಲಿದೆ. ಮೈಂದಗರ್ಿ ವಿರಕ್ತ ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕನರ್ಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದಶರ್ಿ ಶಂಕರ ಹಲಗತ್ತಿ ಸಮಾರೋಪ ನುಡಿ ಹೇಳುವರು ಎಂದು ಜಮಶೆಟ್ಟಿ ವಿವರಿಸಿದರು.

    ಕಸಾಪ ಮಹಾರಾಷ್ಟ್ರ ಗಡಿನಾಡು ಘಟಕ ಗೌರವ ಕಾರ್ಯದಶರ್ಿಗಳಾದ ಶರಣಪ್ಪ ಫುಲಾರಿ, ಗುರುಬಸು ವಗ್ಗೋಲಿ, ಕೋಶಾಧ್ಯಕ್ಷ ಮಹೇಶ ಮೇತ್ರಿ, ಯುವ ಸಾಹಿತಿ ಗಿರೀಶ ಜಕಾಪುರೆ, ಆದರ್ಶ ಕನ್ನಡ ಬಳಗ ಅಧ್ಯಕ್ಷ ಮಲಿಕ್ಜಾನ್ ಶೇಖ್, ಉಪಾಧ್ಯಕ್ಷ ಬಸವರಾಜ ಧನಶೆಟ್ಟಿ, ಚಿದಾನಂದ ಮಠಪತಿ, ರಾಜಶೇಖರ ಉಮರಾಣಿಕರ, ವಿದ್ಯಾಧರ ಗುರವ, ಶರಣು ಕೋಳಿ, ಯಲ್ಲಪ್ಪ ಇಟೆನವರ, ಕಲ್ಮೇಶ ಅಡಳಟ್ಟಿ, ಸಂತೋಷ ಪರೀಟ, ರಾಜು ಗೊಬ್ಬೂರ ಇತರರಿದ್ದರು.

    ಮಹಾರಾಷ್ಟ್ರ ಮತ್ತು ಕನರ್ಾಟಕ ಗಡಿ ಭಾಗದಲ್ಲಿ ಮರಾಠಿಗರು ಮತ್ತು ಕನ್ನಡಿಗರು ಎರಡು ರಾಜ್ಯಗಳ ಸೇತುವೆಯಂತೆ ಜೀವನ ನಡೆಸುತ್ತಿದ್ದು, ಸಮ್ಮೇಳನ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ. ಇಂಥ ಕಾರ್ಯಕ್ರಮಗಳ ಮೂಲಕ ಕನ್ನಡ ಮತ್ತು ಮರಾಠಿ ಭಾಷಾ ಬಾಂಧವ್ಯ ವೃದ್ಧಿಸಲಿದೆ.
    | ಸೋಮಶೇಖರ ಜಮಶೆಟ್ಟಿ, ಕಸಾಪ ಮಹಾರಾಷ್ಟ್ರ ಗಡಿನಾಡು ಘಟಕ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts