More

    ಮಹಾರಾಷ್ಟ್ರದಿಂದ ನೀರು ಯಥೇಚ್ಛ ಬಿಡುಗಡೆ, ಹೆಚ್ಚಿದ ಪ್ರವಾಹ ಭೀತಿ, ಕೃಷ್ಣಾ-ಭೀಮಾತೀರದಲ್ಲಿ ಅಧಿಕಾರಿಗಳ ಲಂಗರು !

    ವಿಜಯಪುರ: ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಹರಿಬಿಡುತ್ತಿರುವ ಹಿನ್ನೆಲೆ ಕೃಷ್ಣಾ ಹಾಗೂ ಭೀಮಾತೀರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ನದಿಪಾತ್ರದಲ್ಲಿ ಅಧಿಕಾರಿಗಳು ಲಂಗರು ಹಾಕಿದ್ದಾರೆ !

    ಹೌದು, ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಆಲಮಟ್ಟಿ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಿದೆ. ಶನಿವಾರ 1.86 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 2.25 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಪ್ರಸ್ತುತ 104.518 ಟಿಎಂಸಿ ನೀರಿನ ಸಂಗ್ರಹವಿದೆ. ಶೇ.84.96 ರಷ್ಟು ಜಲಾಶಯ ಭರ್ತಿಯಾಗಿದೆ.

    ಇನ್ನು ಭೀಮಾ ನದಿಗೆ ಉಜನಿ ಜಲಾಶಯದಿಂದ ನೀರು ಹರಿಸಲಾಗುತ್ತಿದ್ದು ಬ್ಯಾರೇಜ್‌ಗಳು ಭರ್ತಿಯಾಗಿವೆ. ಕಳೆದ 13 ಗಂಟೆಯ ಅವಧಿಯಲ್ಲಿ 60 ಸಾವಿರ ಕ್ಯೂಸೆಕ್ ನೀರು ಉಜನಿ ಜಲಾಶಯದಿಂದ ಹರಿಬಿಡಲಾಗಿದೆ. ಸೊನ್ನ ಬ್ಯಾರೇಜ್‌ನಲ್ಲಿ ಕಳೆದ 24 ಗಂಟೆಯಲ್ಲಿ 23828 ಕ್ಯೂಸೆಕ್ ನೀರು ಹರಿದು ಬಂದಿದೆ. ಪ್ರಸ್ತುತ 1.31 ಟಿಎಂಸಿ ನೀರು ಸಂಗ್ರಹವಿದ್ದು ಶೇ.62.85 ರಷ್ಟು ಬ್ಯಾರೇಜ್ ಭರ್ತಿಯಾಗಿದೆ.

    ಇಂಡಿ ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆ ನೇತೃತ್ವದ ಅಧಿಕಾರಿಗಳ ತಂಡ ಭೀಮಾನದಿಯ ಗುಬ್ಬೇವಾಡ ಬ್ಯಾರೇಜ್‌ಗೆ ಭೇಟಿ ನೀಡಿ ಪರಿಶೀಲಿಸಿದೆ. ಇನ್ನು ಆಲಮೇಲ್ ಅಧಿಕಾರಿಗಳ ತಂಡ ತಾರಾಪುರಕ್ಕೆ ಭೇಟಿ ನೀಡಿ ಕಟ್ಟೆಚ್ಚರ ವಹಿಸಿದ್ದಾರೆ. ಮುಂಜಾಗೃತ ಕ್ರಮವಾಗಿ ಬೋಟ್‌ಗಳನ್ನು ಕಾಯ್ದಿರಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts