More

    ಮಹಾಮಾರಿಗೆ ಇಬ್ಬರು ಮಹಿಳೆಯರು ಬಲಿ

    ಗದಗ: ಜಿಲ್ಲೆಯಲ್ಲಿ ಕರೊನಾ ವೈರಸ್ ಆರ್ಭಟ ಮುಂದುವರಿದಿದ್ದು, ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಇಬ್ಬರು ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಗರದ 58 ವರ್ಷದ ಮಹಿಳೆಯನ್ನು ಜು. 7ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಅದೇ ದಿನ ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಯಿತು. ಜು. 9ರಂದು ಈ ಮಹಿಳೆಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟ ನಂತರ ಅವರನ್ನು ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ನಸುಕಿನಜಾವ ಮೃತಪಟ್ಟಿದ್ದಾರೆ.

    ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಗರದ 75 ವರ್ಷದ ಮಹಿಳೆಯನ್ನು ಜು. 4ರಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಕರೊನಾ ವೈರಸ್ ಸೋಂಕು ಶಂಕೆಯ ಹಿನ್ನೆಲೆಯಲ್ಲಿ ಅದೇ ದಿನ ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಯಿತು. ಜು. 7ರಂದು ಅವರಿಗೆ ಸೋಂಕು ಇರುವುದು ಧೃಢಪಟ್ಟ ಮೇಲೆ ಅವರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಯಿತು. ಆದರೆ, ಶನಿವಾರ ಬೆಳಗಿನಜಾವ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಗದಗ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಶುಕ್ರವಾರ 40 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಬೆಟಗೇರಿಯ ಶರಣಬಸವೇಶ್ವರ ನಗರದ ನಿವಾಸಿ 20 ವರ್ಷದ ಪುರುಷ, ಗದಗ ನಗರದ ಚಾವಡಿ ಕೂಟದ ನಿವಾಸಿ 49 ವರ್ಷದ ಪುರುಷ, ಕೇಶವನಗರದ ಪ್ರದೇಶದ ನಿವಾಸಿ 27 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ವಿಜಯಪುರ ಜಿಲ್ಲೆಯಿಂದ ಆಗಮಿಸಿದ ಗದಗ ನಗರದ ರಾಜೀವಗಾಂಧಿ ನಗರದ ನಿವಾಸಿ 45 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಬೆಳಗಾವಿ ಜಿಲ್ಲೆಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 54 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಬೆಳಗಾವಿಯಿಂದ ಆಗಮಿಸಿದ ರಾಮದುರ್ಗ ತಾಲೂಕಿನ ಗುಟ್ಟಿಗೊಳಿ ಗ್ರಾಮದ ನಿವಾಸಿ 33 ವರ್ಷದ ಪುರುಷನಿಗೆ, ಬೆಂಗಳೂರಿನಿಂದ ಆಗಮಿಸಿದ ಗಜೇಂದ್ರಗಡ ನಿವಾಸಿ 52 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಗೋವಾದಿಂದ ಜಿಲ್ಲೆಗೆ ಆಗಮಿಸಿದ ಗಜೇಂದ್ರಗಡದ ತಾಜ್ ಗಲ್ಲಿ ನಿವಾಸಿ 27 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಗದಗ-ಬೆಟಗೇರಿ ನಗರದ ಸಿದ್ದರಾಮೇಶ್ವರ ನಗರದ ನಿವಾಸಿ 35 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಗದಗ ನಗರದ ಮಾಬುಸಾಬ ಕಟ್ಟಿ ಪ್ರದೇಶದ ನಿವಾಸಿ 33 ವರ್ಷದ ಪುರುಷ, ರೆಹಮತ್ ನಗರ ನಿವಾಸಿ 21 ವರ್ಷದ ಪುರುಷ, ಬೆಟಗೇರಿಯ ಟರ್ನಲ್ ಪೇಟಿ ನಿವಾಸಿ 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ.

    ಬೆಟಗೇರಿಯ ಮಂಜುನಾಥ ನಗರದ ನಿವಾಸಿ 50 ವರ್ಷದ ಪುರುಷ, ಗದಗ ತಾಲೂಕಿನ ಕಣವಿ ಗ್ರಾಮದ ನಿವಾಸಿ 42 ವರ್ಷದ ಮಹಿಳೆ, ಗದಗ ನಗರದ ಖಾನತೋಟ ನಿವಾಸಿ 28 ವರ್ಷದ ಮಹಿಳೆ, ಗದಗ ನಗರದ ಎಸ್.ಎಂ.ಕೆ. ನಗರದ ನಿವಾಸಿ 24 ವರ್ಷದ ಪುರುಷ, ಬೆಟಗೇರಿಯ ವಕ್ಕಲಗೇರಿ ಓಣಿಯ ನಿವಾಸಿ 29 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

    ಗದಗಿನ ಕನ್ಯಾಳ ಅಗಸಿ ನಿವಾಸಿ 58 ವರ್ಷದ ಪುರುಷ, ಚಾಪೇಕರ ಆಸ್ಪತ್ರೆಯ ಹತ್ತಿರದ ನಿವಾಸಿ 59 ವರ್ಷದ ಪುರುಷ ನಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ.

    ಬೆಟಗೇರಿಯ ಎಸ್.ಎಂ.ಕೆ. ನಗರದ ನಿವಾಸಿ 44 ವರ್ಷದ ಪುರುಷ, ಗದಗ ನಗರದ ಖಾನತೋಟ ನಿವಾಸಿ 42 ವರ್ಷದ ಮಹಿಳೆ, ಜನತಾ ಬಜಾರ ನಿವಾಸಿ 38 ವರ್ಷದ ಪುರುಷ, ತ್ರಿಕೂಟೇಶ್ವರ ಮಂದಿರ ಹತ್ತಿರದ ನಿವಾಸಿ 73 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

    ನರಗುಂದ ಗಾಡಿ ಓಣಿ ನಿವಾಸಿ 42 ವರ್ಷದ ಪುರುಷನ ಸಂಪರ್ಕದಿಂದ ಅದೇ ಪ್ರದೇಶದ 23 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಸೋಂಕಿತ ಮಹಿಳೆಯ ಸಂಪರ್ಕದಿಂದ ಅದೇ ಪ್ರದೇಶದ 37 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಿಂದ ಜಿಲ್ಲೆಗೆ ಆಗಮಿಸಿದ ನರಗುಂದದ ನಿವಾಸಿ 30 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಸೋಂಕಿತ ಮಹಿಳೆಯ ಸಂಪರ್ಕದಿಂದ ಚಿಕ್ಕ ನರಗುಂದದ ನಿವಾಸಿ 43 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ರೋಣ ತಾಲೂಕಿನ ಯಾವಗಲ್ ಗ್ರಾಮದ ನಿವಾಸಿ 34 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ. ನರಗುಂದದ ಹೊರಕೇರಿ ಓಣಿ ನಿವಾಸಿ 26 ವರ್ಷದ ಸೋಂಕಿತ ಮಹಿಳೆಯ ಸಂಪರ್ಕದಿಂದಾಗಿ ನರಗುಂದ ತಾಲೂಕಿನ ಸಂಕದಾಳ ಗ್ರಾಮದ ನಿವಾಸಿ 44 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಗದಗ ನಗರದ ದಾಸರ ಓಣಿ ನಗರದ ನಿವಾಸಿ 58 ವರ್ಷದ ಮಹಿಳೆಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

    ಗದಗ ನಗರದ ಹುಡ್ಕೋ ಕಾಲನಿ ಮೊದಲ ತಿರುವು ನಿವಾಸಿ 25 ವರ್ಷದ ಪುರುಷ, ಹಾತಲಗೇರಿ ನಾಕಾ ಪ್ರದೇಶದ ನಿವಾಸಿ 34 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಗದಗ ನಗರದ ವಡ್ಡರಗೇರಿ ನಗರದ ನಿವಾಸಿ 38 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಲಕ್ಷ್ಮೇಶ್ವರದ ಇಂದಿರಾ ನಗರ ನಿವಾಸಿ 40 ವರ್ಷದ ಸೋಂಕಿತ ಮಹಿಳೆಯ ಸಂಪರ್ಕದಿಂದ ಗದಗ ತಾಲೂಕಿನ ನಾಗಾವಿ ಗ್ರಾಮದ 70 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಗದಗ ನಗರದ ವಕ್ಕಲಗೇರಿ ನಿವಾಸಿ 38 ವರ್ಷದ ಮಹಿಳೆಗೆ ಕೆಮ್ಮು ಹಾಗೂ ಜ್ವರದ ಲಕ್ಷಣಗಳಿಂದಾಗಿ ಸೋಂಕು ದೃಢಪಟ್ಟಿದೆ.

    ಕೋಟೆ ನಾಡಿಗೂ ಕಾಲಿಟ್ಟ ಕರೊನಾ

    ಗಜೇಂದ್ರಗಡ: ಇದುವರೆಗೆ ಕರೊನಾ ಕಾಟವಿಲ್ಲದೆ ಇದ್ದ ತಾಲೂಕಿಗೂ ಶುಕ್ರವಾರ ಮಹಾಮಾರಿ ಒಕ್ಕರಿಸಿದೆ. ದೆಹಲಿಯಿಂದ ಪಟ್ಟಣಕ್ಕೆ ಆಗಮಿಸಿದ ವಾಣಿಪೇಟ ನಿವಾಸಿ 28 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.

    ಪಟ್ಟಣದ 6ನೇ ವಾರ್ಡ್​ನ ಷರೀಫಜ್ಜನ ಮಠದ ಹತ್ತಿರವಿರದ ನಿವಾಸಿಗೆ ಸೋಮವಾರ ಕರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ರೋಣ ಪಟ್ಟಣದಲ್ಲಿ ಗಂಟಲ ದ್ರವ ತಪಾಸಣೆ ಮಾಡಿಸಲಾಗಿತ್ತು. ಶುಕ್ರವಾರ ಸೋಂಕು ದೃಢಪಟ್ಟಿದೆ.

    ದೆಹಲಿಯಿಂದ ಆಗಮಿಸಿದ್ದ ವ್ಯಕ್ತಿಯು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದರಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಸೇರಿ 25 ಜನರನ್ನು ದ್ವಿತೀಯ ಸಂರ್ಪತರೆಂದು ಗುರುತಿಸಲಾಗಿದೆ. ಸರ್ಕಾರಿ ಆಸ್ಪತ್ರೆ ವೈದ್ಯ ಹಾಗೂ ಕುಟುಂಬದ ನಾಲ್ವರನ್ನು ಪ್ರಥಮ ಸಂರ್ಪತರೆಂದು ಗುರುತಿಸಲಾಗಿದೆ.

    ಪಟ್ಟಣದ ಪೂಜಾರ ಪ್ಲಾಟ್ ನಿವಾಸಿಗೆ ಕರೊನಾ ಸೋಂಕಿನ ಶಂಕೆ ಹಿನ್ನೆಲೆಯಲ್ಲಿ ನಿವಾಸಿ ಮನೆಯ ಸುತ್ತಲಿನ ಪ್ರದೇಶದಲ್ಲಿ ಪುರಸಭೆ ಅಧಿಕಾರಿಗಳು ಸ್ಯಾನಿೖಟೈಸ್ ಮಾಡುವ ಮೂಲಕ ಮುಂಜಾಗ್ರತೆ ಕ್ರಮ ಕೈಗೊಂಡರು. ಶಂಕಿತ ವ್ಯಕ್ತಿಯು ಬೆಂಗಳೂರಿನಲ್ಲಿ ಬಸ್ ಚಾಲಕನಾಗಿದ್ದು, ಜೂ.24 ರಂದು ಪಟ್ಟಣಕ್ಕೆ ಬಂದಿದ್ದರು. ಆಗ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯ 2 ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ. ಆದರೆ, ಎರಡೂ ಆಸ್ಪತ್ರೆಯ ವೈದ್ಯರು ಕರೊನಾ ತಪಾಸಣೆಗೆ ಶಿಫಾರಸು ಮಾಡಿದ್ದರಿಂದ ರೋಣ ಪಟ್ಟಣದಲ್ಲಿ ಗಂಟಲ ದ್ರವ ತಪಾಸಣೆ ಮಾಡಿಸಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಶಂಕಿತನ ನಿವಾಸಕ್ಕೆ ಭೇಟಿ ನೀಡಿ ಪ್ರಥಮ ಸಂರ್ಪತ 14 ಜನರನ್ನು ರೋಣದ ಬಾಲಕರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಿದ್ದಾರೆ. ಜತೆಗೆ 29 ದ್ವಿತೀಯ ಸಂರ್ಪತರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. 2 ಖಾಸಗಿ ಆಸ್ಪತ್ರೆಗಳನ್ನು 48 ತಾಸುಗಳ ಕಾಲ ಬಂದ್ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ.

    ವ್ಯಾಪಾರದ ಸಮಯ ಕಡಿತ: ಗಜೇಂದ್ರಗಡದ ವಾಣಿಪೇಟ ನಿವಾಸಿ 28 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಾಸಕ ಕಳಕಪ್ಪ ಬಂಡಿ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಚೇಂಬರ್ ಆಫ್ ಕಾಮರ್ಸ್​ನಲ್ಲಿ ಸಭೆ ನಡೆಸಲಾಯಿತು. ಜೂ.13ರಿಂದ ಪಟ್ಟಣದಲ್ಲಿ ಬೆಳಗ್ಗೆ 6 ರಿಂದ 2 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ತೆರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಮೆಡಿಕಲ್, ಆಸ್ಪತ್ರೆ, ಹಾಲು ಹಾಗೂ ಗ್ಯಾಸ್ ಏಜನ್ಸಿ ಅಂಗಡಿಗಳು ತೆರೆದಿರುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts