More

    ಮಹಾಬಲೇಶ್ವರ ದೇವರಿಗೆ ಬೆಳ್ಳಿ ರಥ

    ಗೋಕರ್ಣ: ಪುರಾಣ ಖ್ಯಾತ ಶ್ರೀಮಹಾಬಲೇಶ್ವರ ಉತ್ಸವಕ್ಕಾಗಿ ನೂತನವಾಗಿ ನಿರ್ವಿುಸಲಾದ ರಜತ ರಥವನ್ನು ಶ್ರೀರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಭಾನುವಾರ ಸಂಜೆ ಶ್ರೀದೇವರಿಗೆ ಸಮರ್ಪಿಸಿದರು. ಮಂದಿರ ಅರ್ಚಕರಿಂದ ಮಹಾಬಲೇಶ್ವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ನಂತರ ಶ್ರೀಗಳು ರಥದಲ್ಲಿ ವಿರಾಜಮಾನವಾದ ಮಹಾಬಲೇಶ್ವರ ಮೂರ್ತಿಯನ್ನು ರ್ಸ³ಸುವ ಮೂಲಕ ಅಧಿಕೃತವಾಗಿ ಸಮರ್ಪಣೆ ಮಾಡಲಾಯಿತು.

    ಈ ರಥ ಮಹಾಬಲೇಶ್ವರ ಮಂದಿರದ ಪ್ರಥಮ ಬೆಳ್ಳಿ ರಥವಾಗಿದೆ. ಈ ವೇಳೆ ಶ್ರೀಗಳು ಉಪಾಧಿವಂತ ಮಂಡಳದ ಸರ್ವರನ್ನು ಮತ್ತು ಸಹಾಯ ನೀಡಿದವರನ್ನು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಮಂದಿರದ ಅರ್ಚಕ ವೇ.ಕೃಷ್ಣ ಭಟ್ಟ ಷಡಕ್ಷರಿ, ಉಪಾಧಿವಂತ ಮಂಡಳ ಕಾರ್ಯದರ್ಶಿ ವೇ. ಬಾಲಕೃಷ್ಣ ಜಂಭೆ, ಸಹ ಕಾರ್ಯದರ್ಶಿ ವೇ.ಪರಮೇಶ್ವರ ಮಾರ್ಕಾಂಡೆ, ಮಂದಿರದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ವೇ.ಗಣೇಶ ಜಂಭೆ, ದತ್ತಾತ್ರೇಯ ಹಿರೇಗಂಗೆ, ವೇ.ಅಮೃತೇಶ ಹಿರೇ, ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ, ತಾಪಂ ಸದಸ್ಯ ಮಹೇಶ ಶೆಟ್ಟಿ, ಶ್ರೀಮಠದ ಗುರುಕುಲ ಆಡಳಿತ ಸಮಿತಿಯ ನಾಗರಾಜ ಹಿತ್ತಲಮಕ್ಕಿ, ವಾಸುದೇವ ಶ್ರೀಧರ ಕಾಮತ ಇದ್ದರು.

    110 ಕೆ.ಜಿ. ಬೆಳ್ಳಿ ಬಳಕೆ
    ಉಪಾಧಿವಂತ ಮಂಡಳ, ಬೆಂಗಳೂರಿನ ಉದ್ಯಮಿ ಕೆ.ಶಿವರಾಂ ಮತ್ತು ಭಕ್ತರ ಸಹಾಯದಿಂದ ನಿರ್ವಿುಸಲಾದ ರಥಕ್ಕೆ 110 ಕೆ.ಜಿ. ಬೆಳ್ಳಿಯನ್ನು ಬಳಸಲಾಗಿದೆ. ಇದಕ್ಕಾಗಿ 77 ಲಕ್ಷ ರೂ.ಗೂ ಹೆಚ್ಚಿನ ಹಣ ತಗುಲಿದೆ. ಇದರ ಕಾಷ್ಠರಥಕ್ಕೆ 7 ಲಕ್ಷ ರೂ. ವ್ಯಯಿಸಲಾಗಿದೆ. ಕಾಷ್ಠ ರಥದ ತಯಾರಿಕೆಗೆ ವಿಶೇಷ ಬಕುಳ ವೃಕ್ಷ ಉಪಯೋಗಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts