More

    ಮಹದಾಯಿಗಾಗಿ ಬಜೆಟ್​ನಲ್ಲಿ ಪ್ರತ್ಯೇಕ ಅನುದಾನ

    ನರಗುಂದ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ರಾಜ್ಯ ಬಜೆಟ್​ನಲ್ಲಿ ಪ್ರತ್ಯೇಕ ಅನುದಾನ ನೀಡುವಂತೆ ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಿದ್ದು, ಸಹಕರಿಸುವ ವಿಶ್ವಾಸವಿದೆ ಎಂದು ಗಣಿ, ಭೂ ವಿಜ್ಞಾನ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

    ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ರೈತರ ಹಿತದೃಷ್ಟಿಯಿಂದ ಮಹದಾಯಿ ಯೋಜನೆ ಯಶಸ್ವಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ನಾನು, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಈ ಭಾಗದ ಅನೇಕ ಶಾಸಕರು, ಸಂಸದರೆಲ್ಲರೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಲ್ಲಿ ಮನವಿ ಮಾಡಿದ್ದೆವು. ಅಮಿತ್ ಷಾ ಅವರು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳಿಂದ ಸುಪ್ರೀಂಕೋರ್ಟ್​ಗೆ ಯಾವುದೇ ತಕರಾರು ಅರ್ಜಿ ಬರದಂತೆ ಅಲ್ಲಿನ ರಾಜಕೀಯ ನಾಯಕರ ಮನವೊಲಿಸಿ ಬಹು ದಿನಗಳ ಈ ಮಹತ್ವದ ಯೋಜನೆಗೆ ಶ್ರಮಿಸಿದ್ದಾರೆ ಎಂದರು.

    ಮಹದಾಯಿ ಸಮಸ್ಯೆ ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ ಅನಿವಾರ್ಯವಾಗಿತ್ತು. ಆದರೆ, ಈ ಮಹತ್ವದ ಯೋಜನೆಗೆ ಆಗ್ರಹಿಸಿ ಬಿಜೆಪಿ ವಿರುದ್ಧ ಕೆಲ ಹೋರಾಟಗಾರರು ಪ್ರತಿಭಟನೆ ನಡೆಸಿರುವುದು ಅತ್ಯಂತ ದುರ್ದೈವದ ಸಂಗತಿ. ಆದರೂ, ಈ ಯೋಜನೆಗಾಗಿ ನಿರಂತರ ಹೋರಾಡಿದವರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಕಳಸಾ, ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಪ್ರಥಮ ಬಾರಿಗೆ ನರಗುಂದದಲ್ಲಿ ಹೋರಾಟ ಆರಂಭಿಸಿದ್ದೇ ಬಿಜೆಪಿ. 69 ದಿನಗಳ ಕಾಲ ಹೋರಾಟ ಮಾಡಿ ರಾಜ್ಯಪಾಲರಿಗೆ ರಕ್ತದಲ್ಲಿ ಪತ್ರವನ್ನು ಬರೆದು ಕೊಟ್ಟಿದ್ದೇವೆ. 2015ರಲ್ಲಿ ಹೋರಾಟ ಆರಂಭಿಸಿದ ಕೆಲ ಮಹದಾಯಿ ಹೋರಾಟಗಾರರು ಕೇವಲ ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಎ.ಎಂ. ಹುಡೇದ, ಎನ್.ವಿ. ಮೇಟಿ, ನಿವೃತ್ತ ಶಿಕ್ಷಕ ಎಸ್.ಆರ್. ಹಿರೇಮಠ, ಉಮೇಶಗೌಡ ಪಾಟೀಲ, ಮಂಜು ಮೆಣಸಗಿ, ರಾಜೂಗೌಡ ಪಾಟೀಲ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts