More

    ಮಳೆ ಹಾನಿ ಬಗ್ಗೆ ಕೂಡಲೇ ಸಮೀಕ್ಷೆ ಆರಂಭಿಸಿ

    ಜೇವರ್ಗಿ: ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ಸಾಕಷ್ಟು ಮನೆಗಳು ಬಿದ್ದಿದ್ದು, ಬೆಳೆಯೂ ಹಾಳಾಗಿದೆ. ಈ ಬಗ್ಗೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಆರಂಭಿಸಿ, ಸಕರ್ಾರಕ್ಕೆ ವರದಿ ಸಲ್ಲಿಸುವಂತೆ ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕರೂ ಆದ ಶಾಸಕ ಡಾ.ಅಜಯಸಿಂಗ್ ಸೂಚನೆ ನೀಡಿದರು.

    ಮಿನಿವಿಧಾನ ಸೌಧದಲ್ಲಿ ಮಳೆ ಹಾನಿ ಬಗ್ಗೆ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಕಳೆದ ಸಾಲಿನಲ್ಲಿಯೂ ಅತಿವೃಷ್ಟಿಯಿಂದ ತೊಗರಿ, ಹತ್ತಿ ನೆಲ ಕಚ್ಚಿ ರೈತರು ಕಂಗಾಲಾಗಿದ್ದರು. ಈ ಬಾರಿಯೂ ಧಾರಾಕಾರ ಮಳೆಯಿಂದ ಬೆಳಗಳು ಹಾಳಾಗಿದ್ದು, ಅನ್ನದಾತರು ಸಂಕಷ್ಟದಲ್ಲಿದ್ದಾರೆ ಎಂದರು.

    ಮಳೆಗೆ ತಾಲೂಕಿನಲ್ಲಿ 42 ಮನೆಗಳು ಬಿದ್ದಿದ್ದು, ಪರಿಹಾರ ವಿತರಣೆ ಕಾರ್ಯ ಆಗಬೇಕು. ಅಲ್ಲದೆ ಗ್ರಾಮ ಲೆಕ್ಕಾಧಿಕಾರಿಗಳು ಹಾಗು ಪಿಡಿಒ, ಕೃಷಿ ಇಲಾಖೆ ಅಧಿಕಾರಿಗಳು ಎಲ್ಲೆಡೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸರ್ಕಾರ ವರದಿ ಸಲ್ಲಿಸಬೇಕು. ಡಿಎಪಿ ಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.

    ತಹಸೀಲ್ದಾರ್​ರಾದ ಸಂಜೀವಕುಮಾರ ದಾಸರ (ಜೇವರ್ಗಿ), ಶಾಂತಗೌಡ ಬಿರಾದಾರ (ಯಡ್ರಾಮಿ), ತಾಪಂ ಇಒ ಅಬ್ದುಲ್ ನಬಿ, ಸಿಪಿಐ ಶಿವಪ್ರಸಾದ ಮಠದ, ಕೃಷಿ ಇಲಾಖೆ ಅಧಿಕಾರಿ ಶರಣಗೌಡ, ಗ್ರಾಮೀಣ ಕುಡಿವ ನೀರು ಸರಬುರಾಜು ಇಲಾಖೆಯ ಮಲ್ಲಿನಾಥ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯಾಸ್ವಾಮಿ ಹಿರೇಮಠ, ಸಮಾಜ ಕಲ್ಯಾಣ ಇಲಾಖ್ಯೆ ಅಧಿಕಾರಿ ಅಶೋಕ ನಾಯಕ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದು ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts