More

    ಮಳೆ ನಡುವೆ ಗಾಳಿ ಸುದ್ದಿ ಆತಂಕ

    ಭಟ್ಕಳ: ಒಂದೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆ, ಇನ್ನೊಂದೆಡೆ ಪ್ರವಾಹಕ್ಕೆ ಸಿಲುಕಿದ ಜನರ ಸಂಕಷ್ಟದ ಮಧ್ಯೆ ತಾಲೂಕಿನ ಪ್ರಸಿದ್ಧ ಕಡವಿನಕಟ್ಟಾ ಡ್ಯಾಂ ಒಡೆದು ನೀರು ನುಗ್ಗಿರುವುದೆ ಈ ಅವಾಂತರಕ್ಕೆ ಕಾರಣ ಎಂದು ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ ತಮ್ಮ ವಿಕೃತಿ ಮರೆದಿದ್ದಾರೆ.

    ಭಟ್ಕಳ ತಾಲೂಕು ಮಂಗಳವಾರ ಅಕ್ಷರಶಃ ಜಲಾವೃತವಾಗಿತ್ತು. ಅದರಲ್ಲಿ ಒಂದು ಕುಟುಂಬದ ನಾಲ್ವರು ಸಮಾಧಿಯಾಗಿದ್ದರೆ, ಹಲವರು ವಿವಿಧ ಬಗೆಗಳಲ್ಲಿ ಹಾನಿ ಅನುಭವಿಸಿದ್ದಾರೆ. ಅಂಗಡಿಗಳಲ್ಲಿ ನೀರು ನುಗ್ಗಿ ಕೆಲವರು ಲಕ್ಷಾಂತರ ರೂ., ಬಟ್ಟೆ, ಸಾಮಗ್ರಿ, ಪೀಠೋಪಕರಣಗಳು, ಇಲೆಕ್ಟ್ರಾನಿಕ್ ಉಪಕರಣಗಳನ್ನು ಕಳೆದುಕೊಂಡಿದ್ದಾರೆ. ಇವೆಲ್ಲದರ ನಡುವೆ ಬೆಳಗ್ಗೆ ಕಡವಿನ ಕಟ್ಟಾ ಡ್ಯಾಂ ಒಡೆದು ಭಟ್ಕಳ ಮತ್ತು ಶಿರಾಲಿಯಲ್ಲಿ ನೀರು ಪ್ರವಾಹೋಪಾದಿಯಲ್ಲಿ ನೀರು ಬರುತ್ತಿದೆ. ಇದು ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ ಎನ್ನುವ ಸುಳ್ಳು ಸುದ್ದಿ ಊರ ತುಂಬಾ ಹರಡಿದೆ. ಇದನ್ನು ಕೇಳುತ್ತಿದ್ದಂತೆ ಜನರು ಮತ್ತಷ್ಟು ಆತಂಕಗೊಂಡಿದ್ದು, ಈ ಕುರಿತು ಸ್ಪಷ್ಟನೆ ಪಡೆಯುವಷ್ಟರಲ್ಲಿ ಸುಸ್ತಾಗಿ ಹೋದರು. ಇಂತಹ ಅನಾಹುತಗಳು, ಅವಘಡಗಳು ಸಂಭವಿಸಿದಾಗ ಸುಳ್ಳು ಸುದ್ದಿ ಹಬ್ಬಿಸಿ ವಿಕೃತ ಆನಂದ ಪಡುವವರು ಇರುತ್ತಾರೆ. ಉಹಾಪೋಹಗಳಿಗೆ ಕಿವಿಗೊಡದೆ ಸ್ಪಷ್ಟ ಮಾಹಿತಿ ಪಡೆಯದೇ ಯಾರೂ ಭಯಬೀತರಾಗಬಾರದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts