More

    ಮಳೆಗೆ ಉದ್ದು ಬೆಳೆ ಹಾಳು

    ಜಗದೀಶ ಖೊಬ್ರಿ ತೆಲಸಂಗ: ಪ್ರಸಕ್ತ ವರ್ಷದಲ್ಲಿ ಬೆಂಬಿಡದೆ ಕಾಡಿದ ಮಳೆಯಿಂದಾಗಿ ತೆಲಸಂಗ ಹೋಬಳಿಯ ಮಡ್ಡಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಉದ್ದು ಬೆಳೆ ಹಳದಿ ಬಣ್ಣಕ್ಕೆ ತಿರುಗಿ ರೋಗ ಬಂದು ನಾಶವಾಗುತ್ತಿದ್ದರೂ ಸರ್ಕಾರ ಮಾತ್ರ ಬೆಳೆ ಹಾನಿ ಬಗ್ಗೆ ಮಾತನಾಡದಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.

    ಅಥಣಿ ತಾಲೂಕಿನ ಒಂದು ಭಾಗದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಬಂದರೆ, ಇನ್ನೊಂದು ಭಾಗದಲ್ಲಿ ಮಳೆಯಾಗುತ್ತಿಲ್ಲ. ಅದರಂತೆ, ತಾಲೂಕಿನ ಕೆಲ ಭಾಗದಲ್ಲಿ ಬೆಳೆ ಹಾನಿ ಸರ್ವೇ ಕಾರ್ಯ ನಡೆದಿದೆ. ಆದರೆ, ತೆಲಸಂಗ ಹೋಬಳಿಯಲ್ಲಿ ಮಾತ್ರ ಈ ವರೆಗೆ ಯಾವುದೇ ಸರ್ವೇ ಕಾರ್ಯ ನಡೆಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

    ಕಳೆದ ವರ್ಷ ತೊಗರಿ ಬೆಳೆ ಹಾನಿಯಾಯಿತು. ಆಗಲೂ ಪರಿಹಾರ ದೊರೆಯಲಿಲ್ಲ. ಪ್ರಸಕ್ತ ವರ್ಷ ಉದ್ದು ಬೆಳೆ ಕಮರಿ ಹೋಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈಗಾಗಲೇ ಸರ್ವೇ ಮಾಡಿ ಉದ್ದು ಬೆಳೆಗಾರರಿಗೆ ಪರಿಹಾರ ಕೊಟ್ಟಿದ್ದರೆ, ಹಿಂಗಾರಿ ಬಿತ್ತನೆಗೆ ಸಾಲ ಮಾಡುವುದು ತಪ್ಪುತ್ತಿತ್ತು. ತೆಲಸಂಗ ಗ್ರಾಮವೊಂದರಲ್ಲಿಯೇ 23,195 ಹೆಕ್ಟೇರ್‌ಗಿಂತ ಹೆಚ್ಚು ಉದ್ದು ಬಿತ್ತನೆ ಆಗಿದೆ. ಈಗಲಾದರೂ ಸರ್ಕಾರ ಸೂಕ್ತ ಮಾಹಿತಿ ಪಡೆದು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಉದ್ದು ಬೆಳೆಗಾರರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts