More

    ಮಲೆನಾಡಿನ ಪ್ರಕೃತಿ ಆರಾಧಕರಾಗಿದ್ದ ತೇಜಸ್ವಿ

    ಸಕಲೇಶಪುರ: ಸಾಹಿತಿ ಪೂರ್ಣಚಂದ್ರ ತೇಜಸ್ವಿ ಮಲೆನಾಡಿನ ಪ್ರಕೃತಿಯ ಆರಾಧಕರಾಗಿದ್ದರು ಎಂದು ಉಪನ್ಯಾಸಕ ರೋಹಿತ್ ಹೇಳಿದರು.

    ತಾಲೂಕಿನ ಹೆತ್ತೂರು ಗ್ರಾಮದಲ್ಲಿ ಹೆತ್ತೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಹಮ್ಮಿಕೊಂಡಿದ್ದ ಪೂರ್ಣಚಂದ್ರ ತೇಜಸ್ವಿ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮಲೆನಾಡಿನ ಪ್ರಕೃತಿಯನ್ನು ಹತ್ತಿರದಿಂದ ಆಸ್ವಾದಿಸಿ, ಅಧ್ಯಯನ ನಡೆಸಿ ಪುಸ್ತಕಗಳ ರೂಪದಲ್ಲಿ ಹೊರತಂದ ಮೊದಲಿಗರು ಪೂರ್ಣಚಂದ್ರ ತೇಜಸ್ವಿ. ಇವರ ಬರಹದ ವಿಶೇಷತೆಯಿಂದಾಗಿ ಎಲ್ಲ ವರ್ಗದ, ವಯೋಮಾನದ ಜನತೆಯು ಓದಬಹುದಾಗಿದ್ದರಿಂದಲೇ ಅವರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ತೇಜಸ್ವಿ ಅವರ ಆರಂಭದ ಜೀವನದಲ್ಲಿ ರೈತಸಂಘದಂತಹ ಹಲವು ಸಂಘಟನೆಗಳಲ್ಲಿ ತೊಡಗಿಕೊಂಡಿದ್ದರು. ಆದರೆ, ಬದಲಾದ ಬದುಕಿನಲ್ಲಿ ಪ್ರಕೃತಿ, ಪ್ರಾಣಿ, ಪಕ್ಷಿಗಳೊಂದಿಗೆ ಮೂಕವಾಗಿ ಸಂವಾದ ನಡೆಸಲು ಆರಂಭಿಸಿದ ನಂತರ ಪ್ರಬುದ್ಧ ಬರಹಗಾರರಾಗಿ ಬದಲಾದರು. ಆದ್ದರಿಂದ, ತೇಜಸ್ವಿ ಅವರ ಬರಹಗಳನ್ನು ಹೆಚ್ಚಾಗಿ ಒದುವ ಮೂಲಕ ಬದುಕನ್ನು ಸಾರ್ಥಕಗೊಳಿಸಬೇಕು ಎಂದರು.

    ಹೆತ್ತೂರು ಹೋಬಳಿ ಕಸಾಪ ಅಧ್ಯಕ್ಷ ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೃಷ್ಣಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts