More

    ಮರಕ್ಕೆ ಕಚ್ಚು ಹಾಕುವ ಶಾಸ್ತ್ರ

    ಶಿರಸಿ: ಮಾರಿಕಾಂಬಾ ಜಾತ್ರೆ ವಿಧಿ ವಿಧಾನ ಹಾಗೂ ಸಂಪ್ರದಾಯದಂತೆ ಇಲ್ಲಿನ ಬಿಕ್ಕನಳ್ಳಿ ಮಾಲ್ಕಿ ಜಮೀನಿನಲ್ಲಿ ಕಾನೂನು ಬದ್ಧವಾಗಿ ಮರಕ್ಕೆ ಕಚ್ಚು ಹಾಕುವ ಪದ್ಧತಿ ಶುಕ್ರವಾರ ನೆರವೇರಿತು.

    ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಂದರ್ಭದಲ್ಲಿ ದೇವಿಯ ರಥ ಕಟ್ಟಲು ಕಾಡಿನ ಮರ ಕಡಿದು ತಂದು ರಥ ಕಟ್ಟಲಾಗುತ್ತಿತ್ತು. ಆದರೆ, 2018ರಲ್ಲಿ ನಡೆದ ಜಾತ್ರೆಯಲ್ಲಿ, ತಾಲೂಕಿನ ಬಿಕ್ಕನಳ್ಳಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅನಧಿಕೃತ ಪ್ರವೇಶ ಮಾಡಿ ತಾರೆ, ನಂದಿ, ಮತ್ತಿ, ಕಿಂದಳ ಮರಗಳನ್ನು ಕಡಿದು ನಾಟಾ ಹಾಗೂ ಜಲಾವು ಮಾಡಿದ ಸಂಬಂಧ ಶಿರಸಿ ವಲಯ ಅರಣ್ಯಾಧಿಕಾರಿ, ದೇವಾಲಯದ ಧರ್ಮದರ್ಶಿ ಮಂಡಳಿಯ ಮೇಲೆ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದರು. ಅಲ್ಲದೆ, ಇನ್ನು ಮುಂದೆ ಜಾತ್ರೆ ಅಥವಾ ಇನ್ನಾವುದೇ ಸಂಪ್ರದಾಯದ ಹೆಸರಿನಲ್ಲಿ ಕಾಯ್ದಿಟ್ಟ ಅರಣ್ಯದಲ್ಲಿ ಅನಧಿಕೃತ ಪ್ರವೇಶ ಮಾಡಬಾರದು ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿತ್ತು.

    ಸಂಪ್ರದಾಯದ ಹೆಸರಲ್ಲಿ ಅರಣ್ಯದಲ್ಲಿನ ಹಸಿ ಮರ ಕಡಿಯದಂತೆ ಜಿಲ್ಲಾ ನ್ಯಾಯಾಧೀಶರ ತೀರ್ಪಿನನ್ವಯ ಅರಣ್ಯ ಇಲಾಖೆಯ ಪರವಾನಗಿ ಪಡೆದು ಮಾಲ್ಕಿ ಜಮೀನಿನಲ್ಲಿರುವ ತಾರೆ ಮರವೊಂದನ್ನು ಗುರುತಿಸಿ 12.33 ಗಂಟೆಗೆ ಕಚ್ಚು ಹಾಕಲಾಯಿತು. ಬಾಬುದಾರರು, ಸಹಾಯಕ ಬಾಬುದಾರರು, ದೇವಾಲಯದ ಆಡಳಿತ ಮಂಡಳಿ ಸದಸ್ಯರು, ಭಕ್ತರ ಸಮಕ್ಷಮ ಮರಕ್ಕೆ ಪೂಜೆ ನೆರವೇರಿಸಿ ಕಡಿಯಲಾಯಿತು. ಜಾತ್ರಾ ಮಹೋತ್ಸವದ ದಿನದಂದು ದೇವಿ ವಿರಾಜಮಾನವಾಗುವ ರಥ ನಿರ್ವಿುಸುವ ಉದ್ದೇಶದಿಂದ ಸಾಂಪ್ರದಾಯಿಕವಾಗಿ ಮರ ಕಡಿಯುವ ಪದ್ಧತಿ ಚಾಲ್ತಿಯಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts