More

    ಮಮತೆಯ ತೊಟ್ಟಿನಲ್ಲಿ ಹೆಣ್ಣು ಮಗು

    ಕಲಬುರಗಿ: ನವಜಾತ ಹೆಣ್ಣು ಶಿಶುವೊಂದನ್ನು ನಗರದಲ್ಲಿರುವ ಮಮತೆಯ ತೊಟ್ಟಿಲಿನಲ್ಲಿ ಹೆತ್ತವರು ಹಾಕಿ ಹೋದ ಘಟನೆ ಗುರುವಾರ ನಡೆದಿದೆ. ಆಗ ತಾನೆ ಜನಿಸಿದ ಮಗುವಾಗಿದ್ದು, ಸಂಪೂರ್ಣ ಆರೋಗ್ಯವಾಗಿದೆ. ತುಮಕೂರು ನಂತರ ಕಲಬುರಗಿಯಲ್ಲಿ ಮಮತೆ ತೊಟ್ಟಿನಲ್ಲಿನ ಮಗು ಪತ್ತೆಯಾಗಿದೆ. ಇದು ಎರಡನೇ ಪ್ರಕರಣವಾಗಿದೆ.
    ನಗರದ ಕೋರಂಟಿ ಹನುಮಾನ ದೇವಸ್ಥಾನದ ಸಮೀಪದ ಡಾನ್ ಬಾಸ್ಕೋ ಸಂಸ್ಥೆಯ ಕಚೇರಿ ಬಳಿ ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಮಕ್ಕಳ ರಕ್ಷಣಾ ಘಟಕದಿಂದ `ಮಮತೆಯ ತೊಟ್ಟಿಲು’ ಇರಿಸಲಾಗಿದೆ. ಬುಧವಾರ ತಡರಾತ್ರಿಯಷ್ಟೇ ಹೆರಿಗೆಯಾದ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬೆಳಗಿನ ಜಾವದ ಹೊತ್ತಿಗೆ ತೊಟ್ಟಿಲಲ್ಲಿ ಹಾಕಿ ಹೋಗಿದ್ದಾರೆ., 6 ಗಂಟೆ ಸುಮಾರಿಗೆ ಸಾರ್ವಜನಿಕರು ಮಗು ಅಳುವುದು ಕೇಳಿ ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕ ಸರ್ಜಿತ್​ ಜಾರ್ಜ್​ಗೆ ಮಾಹಿತಿ ನೀಡಿದ್ದಾರೆ.
    ನಿರ್ದೇಶಕ ಸರ್ಜಿತ್​ ಜಾರ್ಜ್​ಗೆ ಮಕ್ಕಳ ಹೆಲ್ಪ್ ಲೈನ್ನ ಮಲ್ಲಯ್ಯ ಗುತ್ತೇದಾರ ಹಾಗೂ ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠ್ಠಲ ಚಿಕಣಿ ಅವರು ಸ್ಥಳಕ್ಕೆ ಬಂದ ಮಗುವನ್ನು ರಕ್ಷಣೆ ಮಾಡಿ, ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
    ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಅಮೂಲ್ಯ ಶಿಶು ಗೃಹಕ್ಕೆ ರವಾನಿಸಿ ಆಶ್ರಯ ನೀಡಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭೀಮರಾಯ ಕಣ್ಣೂರ ತಿಳಿಸಿದರು.
    ಮಕ್ಕಳ ರಕ್ಷಣೆ ಉದ್ದೇಶದಿಂದ ಜಿಲ್ಲೆಯಲ್ಲಿ ಐದು ಕಡೆಗಳಲ್ಲಿ ಮಮತೆಯ ತೊಟ್ಟಿಲಗಳನ್ನು ಇರಿಸಲಾಗಿದೆ. ನಗರದ ರೈಲ್ವೆ ನಿಲ್ದಾಣ, ಜಿಲ್ಲಾಸ್ಪತ್ರೆ, ರಾಜ್ಯ ಮಹಿಳಾ ನಿಲಯ, ಡಾನ್ ಬಾಸ್ಕೋ ಸಂಸ್ಥೆ ಹಾಗೂ ಚಿಂಚೋಳಿ ತಾಲೂಕಿನ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಮತೆಯ ತೊಟ್ಟಿಲುಗಳಿವೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts