More

    ಮನೋವಿಕಾಸವೇ ಸಾಹಿತ್ಯದ ಗುರಿಯಾಗಲಿ

     ಶೃಂಗೇರಿ: ಕರ್ನಾಟಕವೆಂಬುದು ಬರೀ ಮಣ್ಣಲ್ಲ. ಮಂತ್ರತನ, ಶಕ್ತಿತನ ಎಂದು ರಾಷ್ಟ್ರ ಕವಿ ಕುವೆಂಪು ತಿಳಿಸಿರುವಂತೆ ಸಾಹಿತ್ಯದಲ್ಲಿ ಮನರಂಜನೆಯ ಹಲವು ಪ್ರಕಾರಗಳಿದ್ದು ಮನೋವಿಕಾಸ, ಸಮಾಜದ ಹಿತವೇ ಅದರ ಗುರಿಯಾಗಬೇಕು ಎಂದು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ವಾಗೀಶ್ವರೀ ಶಿವರಾಮ್ ಅಭಿಪ್ರಾಯಪಟ್ಟರು.

    ಕನ್ನಡ ಸಾಹಿತ್ಯ ಪರಿಷತ್ ಜ್ಞಾನಭಾರತೀ ವಿದ್ಯಾಕೇಂದ್ರದಲ್ಲಿ ಶನಿವಾರ ತಾಲೂಕು ಐದನೇ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಆರೂವರೆ ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ಸುಭದ್ರ ನಾಡಿನಲ್ಲಿ ಕನ್ನಡ ಮಾತೃಭಾಷೆಯಾಗಿದ್ದರೂ 174ಕ್ಕಿಂತ ಹೆಚ್ಚಿನ ಇತರ ಭಾಷೆಗಳನ್ನು ಮಾತನಾಡುವರು ಇಲ್ಲಿದ್ದಾರೆ. ಕನ್ನಡ ಸಾಹಿತ್ಯದ ಆಳ-ವಿಸ್ತಾರ ತಿಳಿಯಬಯಸುವವರು ಕನ್ನಡ ಸಾಹಿತ್ಯ ಚರಿತ್ರೆ ಓದಬೇಕಿದೆ. ಹಳಗನ್ನಡ, ನಡುಗನ್ನಡ, ಹೊಸಗನ್ನಡ ಎಂಬ ಮೂರು ಹಂತಗಳಲ್ಲಿ ಸಾಹಿತ್ಯಗಳನ್ನು ವಿಂಗಡಿಸಲಾಗಿದೆ. ಸರ್ವಜ್ಞನ ವಚನಗಳು, ದಾಸ ಸಾಹಿತ್ಯ, ಮಂಕುತಿಮ್ಮನ ಕಗ್ಗ ಇತ್ಯಾದಿ ಸಾಹಿತ್ಯ ಪ್ರಕಾರಗಳು ಸಾರ್ವತ್ರಿಕವಾಗಿವೆ. ಕೃಷಿ, ಋಷಿ ಸಂಸ್ಕೃತಿಯ ನಾಡಿನಲ್ಲಿ ಆಗಿರುವ ಮಹಾಭಾರತ, ರಾಮಾಯಣ, ಭಾಗವತಗಳು ಇಂದಿಗೂ ಬೆಳಕನ್ನು ನೀಡುವ ಅಮೃತ ಸಾಹಿತ್ಯಗಳು. ಸಮಾಜವನ್ನು ಒಡೆಯುವ, ಭೇದಭಾವ ಸೃಷ್ಟಿಸುವ, ಮನಸ್ಸನ್ನು ಉದ್ರೇಕಿಸುವ, ವಿಕಾರಗೊಳಿಸುವ ಸಾಹಿತ್ಯಗಳು ಅಮಲು ಸಾಹಿತ್ಯ. ರಾಷ್ಟ್ರೀಯ ಭಾವ ಉದ್ದೀಪನಗೊಳಿಸುವ ಸಾಹಿತ್ಯ ಸೃಷ್ಟಿಯಾದಾಗ ಭಾರತಮಾತೆ, ಕನ್ನಡಾಂಬೆ ಲೋಕಪೂಜ್ಯಳಾಗುತ್ತಾಳೆ ಎಂದು ಹೇಳಿದರು.

    ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶೃಂಗೇರಿ ರಾಮಣ್ಣ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಎಲ್.ತ್ಯಾಗರಾಜ್, ಪಪಂ ಉಪಾಧ್ಯಕ್ಷ ಎಂ.ಎಲ್.ಪ್ರಕಾಶ್, ಜಿಲ್ಲಾ ಕಸಾಪ ಸಂಚಾಲಕಿ ಪುಷ್ಪಾ ಲಕ್ಷ್ಮೀನಾರಾಯಣ್, ಗೌರವ ಕಾರ್ಯದರ್ಶಿಗಳಾದ ಹೆಗ್ಗದ್ದೆ ಶಿವಾನಂದ ರಾವ್, ಸುನೀತಾ ನವೀನ್ ಗೌಡ, ಕಸಬಾ ಹೋಬಳಿ ಘಟಕ ಅಧ್ಯಕ್ಷ ಅಂಗುರ್ಡಿ ದಿನೇಶ್, ಕಿಗ್ಗಾ ಹೋಬಳಿ ಘಟಕ ಅಧ್ಯಕ್ಷ ಎಚ್.ಟಿ.ಮಂಜುನಾಥ್ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts