More

    ಮನೆ ಮನೆಗೆ ಪಂಚರತ್ನ ಯೋಜನೆ ತಲುಪಿಸಿ

    ಕಿಕ್ಕೇರಿ: ಜೆಡಿಎಸ್ ಕೈಗೊಂಡಿರುವ ಪಂಚರತ್ನ ಯೋಜನೆಯ ಉದ್ದೇಶವನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಮುಂಬರುವ ವಿಧಾನಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಎಚ್.ಟಿ. ಮಂಜು ತಿಳಿಸಿದರು.

    ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮನೆಮನೆಗೆ ಪಂಚರತ್ನ ಯೋಜನೆ ಮಾಹಿತಿ ರಥ ಸ್ವಾಗತಿಸಿ ಅವರು ಮಾತನಾಡಿದರು. ರೈತರು, ದುರ್ಬಲ ಸಮುದಾಯದಕ್ಕೆ ಶಿಕ್ಷಣ, ರೈತರಿಗೆ ಸಾಲಮನ್ನಾ, ಅತ್ಯಲ್ಪ ಬಡ್ಡಿ ದರದಲ್ಲಿ ಸಾಲ, ಯುವಕರಿಗೆ ಉದ್ಯೋಗದಂತಹ ಹಲವು ಕಾರ್ಯಕ್ರಮಗಳು ಯೋಜನೆಯ ಉದ್ದೇಶವಾಗಿದೆ. ಪಕ್ಷಕ್ಕೆ ಆಶೀರ್ವದಿಸಿ ಪ್ರಗತಿಗೆ ಯೋಚಿಸಿದಿರಿ ಎಂದು ಹೇಳಿದರು.

    ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್ ಮಾತನಾಡಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ದೂರದೃಷ್ಟಿಯಿಂದ ರೈತರ ಬದುಕು ಹಸನಾಗಲು ಪಣತೊಟ್ಟಿದ್ದಾರೆ. ಪಕ್ಷದಲ್ಲಿ ಒಗ್ಗಟ್ಟಿದ್ದು, ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿ. ಪಂಚರತ್ನ ಅನುಷ್ಠಾನಕ್ಕೆ ಪಕ್ಷಕ್ಕೆ ಅಧಿಕಾರ ಅವಶ್ಯ ಎಂದರು.

    ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಜಾನಕೀರಾಂ, ಹೋಬಳಿ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ಗ್ರಾಪಂ ಸದಸ್ಯ ಎಸ್.ಕೆ.ಬಾಲಕೃಷ್ಣ, ಮುಖಂಡರಾದ ಶೇಖರ್, ಮರೀಗೌಡ, ಬಲರಾಮೇಗೌಡ, ಜವರೇಗೌಡ, ನಾಗೇಶ್, ಲೋಕೇಶ್, ಪ್ರತಾಪ್, ಅನಿಲ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts