More

    ಶರಣರ ವಚನಗಳಿಂದ ಮನುಕುಲದ ಉದ್ಧಾರ

    ಕಿಕ್ಕೇರಿ: ಬಸವಣ್ಣ ಜಗದ ಬೆಳಕಾಗಿದ್ದು, ಅವರ ವಚನಗಳಿಂದ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಪಿಡಿಒ ಬಿ.ಎಸ್. ವಿಜಯ್ ತಿಳಿಸಿದರು.

    ಹೋಬಳಿಯ ಗಡಿಯಂಚಿನ ಐಕನಹಳ್ಳಿ ಗ್ರಾಪಂ.ನಲ್ಲಿ ಶನಿವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಪ್ರಭುತ್ವದಲ್ಲಿ ಲಿಂಗ ಸಮಾನತೆಗೆ ಧ್ವನಿ ಎತ್ತಿದವರು ಬಸವಣ್ಣ. ಅಂತರ್ಜಾತಿ ವಿವಾಹ, ಸರಳ ವಿವಾಹದ ಮಂತ್ರವನ್ನು ಪ್ರತಿಪಾದಿಸಿದರು. ಆಸೆ ಎನ್ನುವುದು ಅರಸರಿಗೆ ವಿನಃ ಶರಣರಿಗಲ್ಲ ಎಂದು ಅನುಭವಮಂಟಪಕ್ಕೆ ಅಲ್ಲಮಪ್ರಭುವನ್ನು ಅಧ್ಯಕ್ಷರನ್ನಾಗಿಸಿದರು. ಜಾತಿ ಸಂಕೋಲೆಗೆ ಬೆಲೆ ನೀಡದೆ ಜ್ಞಾನಕ್ಕೆ ಮಹತ್ವ ಸಾರಿದರು ಎಂದು ಸ್ಮರಿಸಿದರು.

    12ನೇ ಶತಮಾನ ವಚನ ಚಳವಳಿಯ ಪರ್ವಕಾಲ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಇತಿಹಾಸದಿಂದ ಹೊಸ ಕ್ರಾಂತಿ ಉದಯವಾಯಿತು. ಶರಣರ ವಚನಗಳು ಮನುಕುಲದ ಉದ್ಧಾರಕ್ಕೆ ಎಂದು ಅರಿತು ಬಾಳಿದರೆ ನಾಡು ಸಮೃದ್ಧವಾಗಲಿದೆ ಎಂದು ಹೇಳಿದರು.

    ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯದರ್ಶಿ ಪ್ರಭುನಂದ, ಸಿಬ್ಬಂದಿ ಮಂಜೇಗೌಡ, ಶಿವು, ಹರೀಶ್, ಉಮೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts