More

    ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ

    ಸೇಡಂ: ಮಳೆಯಿಂದ ಭಾಗಶಃ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕಾಗಿ 3 ಲಕ್ಷ ರೂ. ನೀಡಲಾಗುವುದು. ಸದ್ಯ ಪ್ರತಿಯೊಬ್ಬರಿಗೂ ತಾತ್ಕಾಲಿಕವಾಗಿ 10 ಸಾವಿರ ರೂ. ನೀಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರೂ ಆದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.

    ಕುಕ್ಕುಂದಾ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಮಳೆಯಿಂದಾದ ಹಾನಿ ಪರಿಶೀಲನೆ ಹಾಗೂ ಮನೆ ಕುಸಿದಿರುವ ಸಂತ್ರಸ್ತರಿಗೆ ಪರಿಹಾರ ವಿತರಿಸಿ ಮಾತನಾಡಿ, ಸಮಗ್ರ ಪರಿಶೀಲನೆ ಹಾಗೂ ಸಮೀಕ್ಷೆ ನಂತರ ಉಳಿದ ಹಣ ನೇರವಾಗಿ ಮನೆ ಮಾಲೀಕರ ಖಾತೆಗೆ ಜಮೆ ಆಗಲಿದೆ. ಸತತ ಮಳೆಯಿಂದ ಗೋಡೆ ಕುಸಿದು ಕೆಲ ಮನೆಗಳು ಧರೆಗೆ ಉರುಳಿವೆ. ಮನೆ ಹಾನಿಯಾದ ಕುಟುಂಬದವರು ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಹಾನಿಯ ಪ್ರಮಾಣ ಅರಿತು ನ್ಯಾಯ ಸಮ್ಮತವಾಗಿ ಪರಿಹಾರ ಕಲ್ಪಿಸುವ ಕೆಲಸ ಮಾಡಲಾಗುತ್ತದೆ ಎಂದರು.

    ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಕಬ್ಬು ನಿಯಂತ್ರಣ ಮಂಡಳಿ ಸದಸ್ಯ ಬಸವರಾಜ ರೇವಗೊಂಡ, ಕಂದಾಯ ನಿರೀಕ್ಷಕ ರವಿ, ಗ್ರಾಮ ಲೇಖಪಾಲಕ ಸಾಯಿನಾಥ ನರೋಣಾ, ಪ್ರಮುಖರಾದ ನಾಗೇಂದ್ರಪ್ಪ ಸಾಹುಕಾರ, ಓಂಪ್ರಕಾಶ ಪಾಟೀಲ್, ಮಲ್ಲಿಕಾರ್ಜುನಸ್ವಾಮಿ ಬಿಬ್ಬಳ್ಳಿ, ಸಂಬಣ್ಣ, ವೀರಭದ್ರಯ್ಯಸ್ವಾಮಿ, ಶಿವಯೋಗಿ, ಶರಣು ಇತರರಿದ್ದರು.

    ಹಾನಿಗೊಳಗಾದ ಎಲ್ಲರಿಗೂ ಪರಿಹಾರ ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಮನೆ ಕಳೆದುಕೊಂಡು ನೋವಿನಲ್ಲಿ ಇರುವವರಿಗೆ ಯಾವುದೇ ರೀತಿಯ ತೊಂದರೆ ನೀಡದೆ, ಅಗತ್ಯ ದಾಖಲೆಗಳನ್ನು ಪಡೆದು ತಕ್ಷಣಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
    | ರಾಜಕುಮಾರ ಪಾಟೀಲ್ ತೆಲ್ಕೂರ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts