More

    ಮನೆಹಾನಿಗೆ 183.75 ಕೋಟಿ ರೂ. ಪರಿಹಾರ ಮಂಜೂರು

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ 2019ರಲ್ಲಿ ಉಂಟಾದ ಪ್ರವಾಹದಿಂದ ಹಾನಿಗೊಳಗಾದ 7,600 ಮನೆಗಳಿಗೆ 183.75 ಕೋಟಿ ರೂ.ಪರಿಹಾರವನ್ನು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಪಾವತಿಸಲು ಮಂಜೂರಾತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

    ಪಟ್ಟಣದ ತಮ್ಮ ಫಾರ್ಮ್ ಹೌಸ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2019 ರಲ್ಲಿ ಕೃಷ್ಣಾ ನದಿಗೆ ಉಂಟಾದ ಪ್ರವಾಹದಿಂದ ಚಿಕ್ಕೋಡಿ ತಾಲೂಕಿನ ಇಂಗಳಿ, ಮಾಂಜರಿ, ಯಡೂರ ಹಾಗೂ ನದಿ ತೀರದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿ ಸೂಕ್ತ ದಾಖಲೆ ಇಲ್ಲದಿರುವ ಮನೆಗಳ ವಿವರವನ್ನು ಆರ್‌ಜಿಆರ್‌ಎಚ್‌ಸಿಎಲ್ ತಂತ್ರಾಂಶದಲ್ಲಿ ಅಳವಡಿಸಲು ಸಾಧ್ಯವಾಗದಿದ್ದಲ್ಲಿ ತಂತ್ರಾಂಶದಲ್ಲಿ ಮರು ಅಳವಡಿಸಿ ಅನುಮೋದನೆ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿ, ಬಾಕಿ ಮನೆಗಳಿಗೆ ಪರಿಹಾರ ಪಾವತಿಸಲು ಕೋರಲಾಗಿತ್ತು.

    ತಮ್ಮ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆಗೊಳಿಸಿದ್ದಾರೆ ಎಂದರು. ಬೆಳಗಾವಿ ಜಿಲ್ಲೆಯಲ್ಲಿ ಸಂಪೂರ್ಣ ಹಾನಿಯಾದ ಎ ವರ್ಗದ 1,314 ಮನೆಗಳಿಗೆ ತಲಾ 5 ಲಕ್ಷ ರೂ.ನಂತೆ 65.70 ಕೋಟಿ ರೂ., ಬಿ ವರ್ಗದ 1925 ಮನೆಗಳಿಗೆ ತಲಾ 5 ಲಕ್ಷ ರೂ.ನಂತೆ 96.25 ಕೋಟಿ ರೂ. ಹಾಗೂ ಸಿ ವರ್ಗದ 4,361 ಮನೆಗಳಿಗೆ 21.80 ಕೋಟಿ ರೂ. ಸೇರಿ ಒಟ್ಟು 7,600 ಮನೆಗಳಿಗೆ 183.75 ಕೋಟಿ ರೂ.ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು. ಚಿಕ್ಕೋಡಿ ಪುರಸಭೆ ಉಪಾಧ್ಯಕ್ಷ ಸಂಜಯ ಕವಟಗಿಮಠ ಇತರರು ಇದ್ದರು.

    ಪಕ್ಷ ಬಯಸಿದರೆ ವಿಧಾನಸಭೆಗೆ ಸ್ಪರ್ಧೆ: ವಿಧಾನ ಪರಿಷತ್ ಸದಸ್ಯರಾಗಿ 12 ವರ್ಷ ಅಧಿಕಾರ ನಡೆಸಿದ ತಮ್ಮ ಮುಂದಿನ ನಿಲುವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷ ಸಂಘಟನೆ ಜತೆಗೆ ಕೈಲಾದ ಕೆಲಸ ಮಾಡುವೆ ಎಂದರು. 2023ರಲ್ಲಿ ವಿಧಾನಸಭೆ ಚುನಾವಣೆಗೆ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಬಯಸಿದರೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧನಿದ್ದು, ವಿಧಾನ ಪರಿಷತ್ ಸದಸ್ಯನಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ನನಗೆ ಚಿಕ್ಕೋಡಿ ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸುವುದು ಕಷ್ಟವಲ್ಲ ಎಂದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts