More

    ರೈತರೊಂದಿಗೆ ನಾವಿದ್ದೇವೆ ಅಭಿಯಾನ

    ಧಾರವಾಡ: ಬರ ಪರಿಹಾರ ಕಾರ್ಯಕ್ರಮಗಳ ಕುರಿತು ಪೋಸ್ಟರ್, ಬ್ಯಾನರ್, ಧ್ವನಿವರ್ಧಕಗಳ ಮೂಲಕ ರೈತರೊಂದಿಗೆ ನಾವಿದ್ದೇವೆ ಎಂಬ ಜಿಲ್ಲಾಡಳಿತದಿಂದ ವಿನೂತನ ಅಭಿಯಾನವನ್ನು ಮಂಗಳವಾರ ಆರಂಭಿಸಲಾಯಿತು.
    ರಾಜ್ಯ ಸರ್ಕಾರ ಜಿಲ್ಲೆಯನ್ನು ಬರಪಡಿತ ಎಂದು ಘೋಷಿಸಿದೆ. ಕುಡಿಯುವ ನೀರಿನ ಸಮಸ್ಯೆ ಕಂಡುಬAದ ಗ್ರಾಮಗಳಿಗೆ ಈಗಾಗಲೇ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಾನುವಾರುಗಳಿಗೆ ಅಗತ್ಯ ಮೇವು ಸರಬರಾಜು ಮಾಡಲು ೭ ಕಡೆ ಮೇವು ಬ್ಯಾಂಕ್‌ಗಳನ್ನು ತರೆಯಲಾಗಿದ್ದು, ರೈತರು ಮೇವು ಖರೀದಿ ಮಾಡುತ್ತಿದ್ದಾರೆ. ಮೇವು ಬ್ಯಾಂಕ್, ಮೇವು ಮಾರಾಟದ ಬಗ್ಗೆ ಮಾಹಿತಿ ನೀಡಲು ಮತ್ತು ಬರ ಪರಿಸ್ಥಿತಿಯಲ್ಲಿ ರೈತರಿಗೆ ದೈರ್ಯ ತುಂಬಲು ಜಿಲ್ಲಾಡಳಿತವು `ರೈತರೊಂದಿಗೆ ನಾವಿದ್ದೇವೆ’ ಎಂಬ ವಿನೂತನ ಅಭಿಯಾನ ಆರಂಭಿಸಿದೆ.
    ನಗರದ ಹಳೇ ಎಪಿಎಂಸಿಯ ಜಾನುವಾರು ಮಾರುಕಟ್ಟೆಯಲ್ಲಿ ಉಪ ವಿಭಾಗಾಽಕಾರಿ ಶಾಲಂ ಹುಸೇನ್, ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ಹಾಗೂ ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ, ಎಪಿಎಂಸಿ ಕಾರ್ಯದರ್ಶಿ ವಿ.ಎಂ. ಹಿರೇಮಠ ನೇತೃತ್ವದಲ್ಲಿ ಧ್ವನಿವರ್ಧಕ ಬಳಸಿ ರೈತರಲ್ಲಿ ಜಾಗೃತಿ ಮೂಡಿಸಲಾಯಿತು.
    ರೈತರು ಧೃತಿಗೆಡದೆ ಜಾನುವಾರುಗಳನ್ನು ಜೋಪಾನ ಮಾಡಬೇಕು. ಮೇವಿನ ಕೊರತೆಯಾದರೆ ಮೇವು ಬ್ಯಾಂಕ್‌ಗಳಲ್ಲಿ ಲಭ್ಯವಿರುವ ಮೇವನ್ನು ಯೋಗ್ಯ ದರದಲ್ಲಿ ಖರೀದಿಸಬೇಕು. ರೈತರ ಕಷ್ಟಗಳಿಗೆ ಜಿಲ್ಲಾಡಳಿತ, ತಾಲೂಕು ಆಡಳಿತ ಸದಾ ಸ್ಪಂದಿಸಲಿದೆ ಎಂದು ತಹಸೀಲ್ದಾರ್ ಡಾ. ಹೂಗಾರ ರೈತರಿಗೆ ತಿಳಿಸಿದರು.
    ಜಾನುವಾರು ಮಾರುಕಟ್ಟೆಯಲ್ಲಿ ದನಗಳಿಗೆ ಕುಡಿಯುವ ನೀರಿನ ತೊಟ್ಟಿ, ರೈತರು ಕುಳಿತುಕೊಳ್ಳಲು ನೆರಳಿನ ವ್ಯವಸ್ಥೆ, ಕುಡಿಯಲು ನೀರಿನ ವ್ಯವಸ್ಥೆ ಮಾಡಬೇಕು. ಇನ್ನಷ್ಟು ಗಿಡಗಳನ್ನು ನೆಟ್ಟು ದನಗಳಿಗೆ ನೆರಳು ಮಾಡÀಬೇಕು ಎಂದು ರೈತರಾದ ನಕುಲ ಉಳ್ಳಿಗೇರಿ, ಬಸವರಾಜ ಜಾಧವ, ಇತರರು ಅಽಕಾರಿಗಳಲ್ಲಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts