More

    ಮನೆಯಿಂದಲೇ ಮುಷ್ಕರ ಆರಂಭ

    ಹುಬ್ಬಳ್ಳಿ: ರಾಜ್ಯ ಸರ್ಕಾರ ಶಾಲೆ- ಕಾಲೇಜುಗಳ ನೌಕರರಿಗೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಪಿಂಚಣಿ ವಂಚಿತ ನೌಕರರು ರಾಜ್ಯಾದ್ಯಂತ ಸ್ಟ್ರೈಕ್ ಫ್ರಾಂ ಹೋಂ (ಮನೆಯಿಂದಲೇ ಪ್ರತಿಭಟನೆ) ಹೋರಾಟ ನಡೆಸಿದ್ದು, ನಗರದಲ್ಲೂ ಶಿಕ್ಷಕರು ಸಾಥ್ ನೀಡಿದ್ದಾರೆ.

    ಶಿಕ್ಷಕ ರಾಜನಗೌಡ ಪಾಟೀಲ, ರುದ್ರಯ್ಯ ಯಲ್ಬುರ್ಗಿಮಠ, ರಮೇಶ ಬಡಪ್ಪನವರ, ಅನುಸೂಯಾ ಸಜ್ಜನಶೆಟ್ಟಿ, ಜ್ಯೋತಿ ಕದಂ, ಬಸವರಾಜ ದೇವರಮನಿ ಹಾಗೂ ಇತರ ಶಿಕ್ಷಕರು ತಮ್ಮ ಕುಟುಂಬ ಸಮೇತರಾಗಿ ಪ್ರತಿಭಟನೆ ನಡೆಸಿದ್ದಾರೆ.

    ಅನೇಕರು ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಬಿಡಿಗಾಸು ಪಿಂಚಣಿ ಇಲ್ಲದೆ ಕಷ್ಟದ ಜೀವನ ನಡೆಸುತ್ತಿದ್ದಾರೆ. ಸೇವೆಯಲ್ಲಿದ್ದಾಗಲೇ ಕೆಲವರು ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ನಿವೃತ್ತಿ ನಂತರ ಮೃತರಾಗಿದ್ದಾರೆ. ಇಂತಹ ಕುಟುಂಬಗಳಿಗೆ ಸರ್ಕಾರ ಪಿಂಚಣಿ ನೀಡುತ್ತಿದ್ದರೆ ಅವರ ಸ್ಥಿತಿ ಉತ್ತಮವಾಗಿರುತ್ತಿತ್ತು.

    ಅನೇಕ ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದರೂ ಕುಂಟು ನೆಪ, ಸುಳ್ಳು ಭರವಸೆಗಳನ್ನು ನೀಡುತ್ತ ಬರಲಾಗಿದೆ. ಸರ್ಕಾರ ಬೇಡಿಕೆ ಈಡೇರಿಸುವವರೆಗೆ ಹೋರಾಟ ನಿರಂತರವಾಗಿರುತ್ತದೆ ಎಂದು ಶಿಕ್ಷಕ ಬಸವರಾಜ ದೇವರಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts