More

    ಮನೆಗಳಿಗೆ ನುಗ್ಗಿದ ಮಳೆ ನೀರು

    ಬ್ಯಾಡಗಿ: ತಾಲೂಕಿನಾದ್ಯಂತ ಭಾನುವಾರ ಸಂಜೆ ಒಂದು ಗಂಟೆ ಕಾಲ ಭಾರಿ ಮಳೆ ಸುರಿಯಿತು.

    ಒಂದೆಡೆ ಮಳೆ ರೈತರಲ್ಲಿ ಹರ್ಷ ತಂದರೆ, ಇನ್ನೊಂದೆಡೆ ಪಟ್ಟಣದ ನಿವಾಸಿಗಳು ಪರದಾಡುವಂತೆ ಮಾಡಿತು. ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಗಳ ಹಲವು ಮನೆಗಳಿಗೆ ನೀರು ನುಗ್ಗಿತು. ಪಟ್ಟಣದ ಮುಖ್ಯರಸ್ತೆ ಕಾಲುವೆಗಳ ದುಸ್ಥಿತಿಯಿಂದ ಮಳೆ ನೀರು ರಸ್ತೆ ಮೇಲೆ ಹರಿದು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

    ಮುಖ್ಯ ರಸ್ತೆಯಲ್ಲಿ ಕೊಳೆ: ಪ್ರತಿ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆ ಕೊಳಚೆ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ತೊಂದರೆ ನೀಡುವುದು ಸಾಮಾನ್ಯವಾಗಿದೆ. ಇದರಿಂದ ಪಟ್ಟಣದ ಮುಖ್ಯರಸ್ತೆ ಗಬ್ಬೆದ್ದು ನಾರುತ್ತದೆ. ಮೂರು ವರ್ಷಗಳ ಹಿಂದೆ ಮುಖ್ಯರಸ್ತೆ ವಿಸ್ತರಣೆ ಮಾಡುವ ಸಲುವಾಗಿ ತಾಲೂಕಾಡಳಿತ ಒತ್ತುವರಿ ಕಾರ್ಯ ನಡೆಸಿತ್ತು. ಆ ವೇಳೆ ಕಾಲುವೆಗಳು ಕಿತ್ತುಹೋಗಿದ್ದವು. ಅವುಗಳ ಮರುನಿರ್ವಣ ಅಥವಾ ದುರಸ್ತಿ ಕಾರ್ಯ ಇಂದಿಗೂ ನಡೆದಿಲ್ಲ. ಹೀಗಾಗಿ ಮಳೆ ಬರುತ್ತಿದ್ದಂತೆ ರಸ್ತೆಯಲ್ಲಿ ಕೊಳಚೆ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ.

    ಅಧಿಕಾರಿಗಳ ನಿರ್ಲಕ್ಷ್ಯ: ಕಳೆದ ಮೂರ್ನಾಲ್ಕು ವರ್ಷಗಳಿಂದ ಮುಖ್ಯ ರಸ್ತೆ ಬದಿಯ ಕಾಲುವೆಗಳ ದುರಸ್ತಿಗೆ ತಹಸೀಲ್ದಾರ್, ಜಿಲ್ಲಾಧಿಕಾರಿಗಳು, ಕಂದಾಯ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದೇವೆ. ಈ ಹಿಂದೆ ಸಮಸ್ಯೆ ಸರಿಪಡಿಸಲು ಜಿಲ್ಲಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಈವರೆಗೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಇದರಿಂದ ಮಳೆಗಾಲ ಆರಂಭವಾಗುತ್ತಿದ್ದಂತೆ ಸ್ಥಳೀಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಕೂಡಲೆ ಮುಖ್ಯರಸ್ತೆ ಕಾಲುವೆಗಳನ್ನು ಸರಿಪಡಿಸಬೇಕು ಎಂದು ಸ್ಥಳೀಯ ನಿವಾಸಿ ವಕೀಲ ಎಸ್.ಎಸ್. ಶೆಟ್ಟರ್ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts