More

    ಮಧ್ಯಾಹ್ನ 1 ಗಂಟೆಗೆ ಅಂಗಡಿ ಮುಂಗಟ್ಟು ಬಂದ್

    ರಾಣೆಬೆನ್ನೂರ: ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ನಗರದಾದ್ಯಂತ ಸಂಜೆ 7ರವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಜಿಲ್ಲಾಡಳಿತ ಈ ಹಿಂದೆ ಆದೇಶ ಹೊರಡಿಸಿತ್ತು. ಅದರಂತೆ ನಗರದಲ್ಲಿ ಇಷ್ಟು ದಿನಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಸಂಜೆ 7ರವರೆಗೆ ತೆರೆದು ನಂತರ ಬಂದ್ ಮಾಡಲಾಗುತ್ತಿತ್ತು. ಆದರೆ, ಸೋಮವಾರ ಪೊಲೀಸರು ಮಧ್ಯಾಹ್ನ 1 ಗಂಟೆಗೆ ಏಕಾಏಕಿ ನಗರದಲ್ಲಿನ ಅಂಗಡಿ ಮುಂಗಟ್ಟು ಬಂದ್ ಮಾಡಿಸಲು ಮುಂದಾಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

    ನಗರದ ಪಿ.ಬಿ. ರಸ್ತೆ, ಎಂ.ಜಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಪೊಲೀಸರು ಜೀಪ್​ನಲ್ಲಿ ಸೈರನ್ ಹೊರಡಿಸುತ್ತ ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನ 1 ಗಂಟೆಯೊಳಗೆ ಬಂದ್ ಮಾಡಬೇಕು ಎಂದು ಹೇಳುತ್ತಿದ್ದಂತೆ, ಜನತೆ ಗಾಬರಿಯಿಂದ ಅಂಗಡಿಗಳಿಂದ ಹೊರಗೆ ಬಂದರು.

    ಅಂಗಡಿಗಳನ್ನು ಬಂದ್ ಮಾಡಬೇಕು ಎಂದು ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಯಾವುದೇ ಸೂಚನೆ ನೀಡಿಲ್ಲ. ಒಂದುವೇಳೆ ಬಂದ್ ಮಾಡಿಸುವುದಾದರೆ ಮುಂಚಿತವಾಗಿಯೇ ಪ್ರಕಟಣೆ ಹೊರಡಿಸಿ ಸೂಕ್ತ ಸಮಯ ನಿಗದಿ ಪಡಿಸಬೇಕು ಎಂದು ಸಾರ್ವಜನಿಕರು ತಕರಾರು ವ್ಯಕ್ತಪಡಿಸಿದರು.

    ಬಟ್ಟೆ, ಚಿನ್ನಾಭರಣ ಬಂದ್ ಮಾಡಿಸಲಿ: ದಾವಣಗೆರೆಯಿಂದ ಜನತೆ ಬಟ್ಟೆ, ಚಿನ್ನಾಭರಣ ಖರೀದಿಸಲು ನಗರಕ್ಕೆ ಬರುತ್ತಿರುವ ಕಾರಣ ಇಂಥ ಅಂಗಡಿಗಳನ್ನು ಬಂದ್ ಮಾಡಿಸಲಿ. ಆದರೆ, ತರಕಾರಿ, ದಿನಸಿ ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವುದು ಸರಿಯಲ್ಲ. ಸರ್ಕಾರ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ. ಇಂಥದ್ದರಲ್ಲಿ ತರಕಾರಿ ಮಾರಾಟ ಮಾಡುವುದರಿಂದ ಏನು ತೊಂದರೆ ಆಗುತ್ತದೆ. ಆದ್ದರಿಂದ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಭೇಕು ಎಂದು ತರಕಾರಿ, ದಿನಸಿ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.

    ವರ್ತಕರು ಬಂದ್ ಮಾಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ದರಿಂದ ಮಧ್ಯಾಹ್ನ 1 ಗಂಟೆಯೊಳಗೆ ಎಲ್ಲರೂ ಬಂದ್ ಮಾಡುತ್ತಿದ್ದಾರೆ. ನಾವೇನೂ ಒತ್ತಾಯಪೂರ್ವಕ ಬಂದ್ ಮಾಡಿಸುತ್ತಿಲ್ಲ. ಈ ಕುರಿತು ನಾವು ಯಾವುದೇ ಪ್ರಕಟಣೆ ಹೊರಡಿಸಿಲ್ಲ.
    | ಬಸನಗೌಡ ಕೋಟೂರ, ತಹಸೀಲ್ದಾರ್ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts