More

    ಮದ್ಯ ವ್ಯಸನಮುಕ್ತಿಗೆ ಕೌನ್ಸೆಲಿಂಗ್ ಪರಿಹಾರ

    ದಾವಣಗೆರೆ: ಆಪ್ತ ಸಮಾಲೋಚನೆ ಮತ್ತು ಮನೋವೈದ್ಯರ ಸಲಹೆ, ಚಿಕಿತ್ಸೆ ಪಡೆದು ಮದ್ಯ ವ್ಯಸನ ದೂರ ಮಾಡಬಹುದು ಎಂದು ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ. ಗಂಗಂ ಸಿದ್ದಾರೆಡ್ಡಿ ಹೇಳಿದರು.

    ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಗುರುವಾರ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದರು.
    ಭಾರತದಲ್ಲಿ ಸುಮಾರು 2.90 ಕೋಟಿ ಮದ್ಯ ವ್ಯಸನಿಗಳಿದ್ದು, ಶೇ.10 ರಿಂದ 15 ರಷ್ಟು ಮಂದಿ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಪ್ರತಿ ಸಮಸೆಯಯಂತೆ ಮದ್ಯ ವ್ಯಸನಕ್ಕೂ ಪರಿಹಾರವಿದೆ. ವ್ಯಸನಿಯು ತನಗಿರುವ ಸಮಸ್ಯೆ ಅರ್ಥ ಮಾಡಿಕೊಂಡಲ್ಲಿ ಚಿಕಿತ್ಸೆ ನೀಡಬಹುದು. ವ್ಯಸನ ಮುಕ್ತ ಸಮಾಜಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
    ಕಕ್ಕರಗೊಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ ಜನಜಂಗುಳಿ ಇರುವ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡಲಿವೆ. ಎಲ್ಲರೂ ಸ್ವಚ್ಛತೆ ಕಾಪಾಡಬೇಕೆಂದರು.
    ವಿಪರೀತ ಮಳೆ, ಶೀತ ವಾತಾವರಣದಲ್ಲಿ ಡೆಂೆ ಜ್ವರ, ಚಿಕುನ್‌ಗುನ್ಯಾ, ವೈರಲ್ ಜ್ವರ ಕಾಣಿಸಿಕೊಳ್ಳುತ್ತಿದ್ದು, ಇವುಗಳ ನಿಯಂತ್ರಣ ಕ್ರಮವಾಗಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಮನೆಗಳಿಗೆ ತೆರಳಿ ಲಾರ್ವಾ ಸರ್ವೇ ಮಾಡುತ್ತಿದ್ದಾರೆ. ಸಾರ್ವಜನಿಕರು ಲಾರ್ವಾ ಕಂಡುಬಂದಲ್ಲಿ ಲಾರ್ವನಾಶಕ ದ್ರಾವಣ ಸಿಂಪಡಿಸಬೇಕು. ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕೆಂದು ಹೇಳಿದರು.
    ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಹಿರಿಯ ಜಿಲ್ಲಾ ನಿರ್ದೇಶಕ ವಿ. ವಿಜಯಕುಮಾರ ನಾಗನಾಳ, ಯೋಜನಾಧಿಕಾರಿ ಬಿ.ಶ್ರೀನಿವಾಸ, ಕಕ್ಕರಗೊಳ್ಳ ಗ್ರಾಪಂ ಅಧ್ಯಕ್ಷ ಜಿ.ಟಿ.ವೀರೇಶ್, ಮಂಡಲ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಜಿ.ಬಸವನಗೌಡ್ರು, ಮನಶಾಸ್ತ್ರಜ್ಞ ವಿಜಯಕುಮಾರ್, ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಸಂತೋಷ್‌ಕುಮಾರ್, ಗೌಡ್ರು ಚನ್ನಬಸಪ್ಪ, ಎಸ್.ಟಿ.ಕುಸುಮಶೆಟ್ಟಿ, ಮಂಜುಳಾಬಾಯಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts