More

    ಮದ್ಯ ಮಾರಾಟ, ಜೂಜಾಟ ತಡೆಯಿರಿ

    ಹಳಿಯಾಳ: ಪಟ್ಟಣದಲ್ಲಿ ರಾತ್ರಿ 8ರಿಂದ ಜಾರಿಯಿರುವ ಕರ್ಫ್ಯೂ ನಿಯಮ ಉಲ್ಲಂಘಿಸಿ ಮದ್ಯ ಮಾರಾಟ ಹಾಗೂ ರಿಕ್ರೆಷನ್ ಕ್ಲಬ್ ಹೆಸರಿನಲ್ಲಿ ಜೂಜಾಟ ನಡೆಯುತ್ತಿದೆ. ಅದನ್ನು ನಿಯಂತ್ರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಸದಸ್ಯರು ಪುರಸಭೆಯ ಕಂದಾಯ ವಿಭಾಗದ ಅಧಿಕಾರಿ ಅಶೋಕ ಸಾಳೆಣ್ಣನವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ತಾಲೂಕಿನಲ್ಲಿ ದಿನೇ ದಿನೆ ಕರೊನಾ ಪ್ರಕರಣಗಳು ಹೆಚ್ಚುತ್ತಿವೆ. ರಾತ್ರಿ 8 ರಿಂದ ಬೆಳಗ್ಗೆ 5 ರವರೆಗೆ ಕರ್ಪ್ಯೂ ಜಾರಿಯಲ್ಲಿದೆ. ಅದನ್ನು ಉಲ್ಲಂಘಿಸಿ ಹಳಿಯಾಳದಲ್ಲಿ ರಿಕ್ರೆಷನ್ ಕ್ಲಬ್, ಬಾರ್ ಆಂಡ್ ರೆಸ್ಟೋರೆಂಟ್ ಮತ್ತು ಮಾಂಸಹಾರಿ ಹೋಟೆಲ್​ಗಳು, ವೈನ್​ಶಾಪ್​ಗಳು ನಿಯಮ ಮಿರಿ ರಾತ್ರಿ ಕಾರ್ಯನಿರ್ವಹಿಸುತ್ತಿವೆ. ಪರಸ್ಪರ ಅಂತರ ಕಾಪಾಡುತ್ತಿಲ್ಲ, ಸ್ಯಾನಿಟೈಸರ್ ಬಳಸುತ್ತಿಲ್ಲ, ಜನರು ಮಾಸ್ಕ್ ಇಲ್ಲದೆ ವ್ಯಾಪಾರ ವಹಿವಾಟು ಮಾಡುತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕರೊನಾ ಹರಡುವಿಕೆಯನ್ನು ತಡೆಯಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಉಪಾಧ್ಯಕ್ಷ ಚಂದ್ರಕಾಂತ ದುರ್ವೆ, ವಿನೋದ ದೊಡ್ಮನಿ, ಪದಾಧಿಕಾರಿಗಳಾದ ಸುಧಾಕರ ಕುಂಬಾರ, ಮಹೇಶ ಆನೆಗುಂದಿ, ಈರಯ್ಯಾ ಹಿರೇಮಠ, ಮಂಜುನಾಥ ಮಾದರ, ಶಿವಾನಂದ ಢಮಣಗಿಮಠ, ನಾಗೇಶ ಹೆಗಡೆ, ಶಿವು ಶೆಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts