More

    ಧಾರ್ವಿುಕ ಮೌಲ್ಯಗಳ ಪುನರುತ್ಥಾನದಿಂದ ನೆಮ್ಮದಿ

    ಹುಬ್ಬಳ್ಳಿ : ಸರ್ವ ಸಮುದಾಯದ ಎಲ್ಲ ರಂಗಗಳಲ್ಲಿ ಧಾರ್ವಿುಕ ಮತು ಸಾಮಾಜಿಕ ಮೌಲ್ಯಗಳು ಕಲುಷಿತಗೊಳ್ಳುತ್ತಿವೆ. ಬೆಳೆಯುವ ಯುವ ಸಮುದಾಯದಲ್ಲಿ ಧಾರ್ವಿುಕ ಶ್ರದ್ಧೆ ಕಡಿಮೆಯಾಗಿ, ಗುರು ಹಿರಿಯರ ಬಗೆಗೆ ಅನಾದರ ಭಾವನೆಗಳು ಬೆಳೆಯುತ್ತಿರುವ ಕಾರಣ ಬದುಕಿನಲ್ಲಿ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಕಳವಳ ವ್ಯಕ್ತಪಡಿಸಿದರು.

    ತಾಲೂಕಿನ ಬಿಡನಾಳ-ಹಳ್ಳಿಯಾಳ ಗ್ರಾಮದ ಗಡಿ ಭಾಗದಲ್ಲಿ ನಿರ್ವಿುಸಿದ ಶ್ರೀ ಅಂಚಡಿ ಬಸವಣ್ಣ ನೂತನ ದೇವಸ್ಥಾನ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧಾರ್ವಿುಕ ಮೌಲ್ಯಗಳ ಸಂರಕ್ಷಣೆ ಮತ್ತು ಪುನರುತ್ಥಾನದಿಂದ ಜೀವನದಲ್ಲಿ ಶಾಂತಿ, ಸಂತೃಪ್ತಿ ಪಡೆಯಲು ಸಾಧ್ಯ ಎಂದು ತಿಳಿಸಿದರು.

    ದೇವರು ಮತ್ತು ಧರ್ಮದಲ್ಲಿ ಶ್ರದ್ಧೆ ಇದ್ದರೆ ಜೀವನದಲ್ಲಿ ತೃಪ್ತಿ, ಸಮಾಧಾನ ಇರುತ್ತದೆ. ದೇವರನ್ನು ನಂಬುವ ಆಸ್ತಿಕರು, ದೇವರನ್ನು ನಂಬದ ನಾಸ್ತಿಕರೂ ಈ ಜಗದಲ್ಲಿ ಇದ್ದಾರೆ. ಭಗವಂತನ ಸ್ಮರಣೆ, ಅರ್ಚನೆ, ಆರಾಧನೆಯಿಂದ ಮನುಷ್ಯನ ಬಾಳು ಉಜ್ವಲಗೊಳ್ಳಲು ಪ್ರೇರೇಪಣೆ ನೀಡುತ್ತದೆ ಎಂದರು,

    ರೈತರ ಸಮಸ್ಯೆಗಳನ್ನು ಪರಿಹರಿಸಿ, ಅವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ-ರಾಜ್ಯ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರಕಿಸಿಕೊಡಬೇಕು ಎಂದರು.

    ದೇವಾಲಯ ನಿರ್ವಣಕ್ಕೆ ಭೂಮಿ ದಾನ ಮಾಡಿದ ಜಯಶ್ರೀ -ಗಿರೀಶಗೌಡ ಗದಿಗೆಪ್ಪಗೌಡರ ಅವರಿಗೆ ಜಗದ್ಗುರುಗಳು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆಶೀರ್ವದಿಸಿದರು.

    ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಶಿರಕೋಳ ಹಿರೇಮಠದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪದೇಶ ನೀಡಿದರು.

    ಬಸನಗೌಡ ನಾಗನಗೌಡ್ರ, ಗುರುನಾಥಗೌಡ ಮಾದಾಪುರ, ತುಬಾಕದ ಸಹೋದರರು, ಉಮೇಶಗೌಡ ಪಾಟೀಲ, ಉಮೇಶ ಹೊಸಮನಿ ಮತ್ತಿತರರು ಪಾಲ್ಗೊಂಡಿದ್ದರು.

    ಗಂಗಾಧರ ಮೇಟಿ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts