More

    ಮದ್ಯದ ಅಂಗಡಿ ಸ್ಥಗಿತಗೊಳಿಸಲು ಪ್ರತಿಭಟನೆ

    ಸಂಶಿ: ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಆಗ್ರಹಿಸಿ ಗ್ರಾಮದ ಮಹಿಳೆಯರು ಪರಸ್ಪರ ಅಂತರ ಕಾಯ್ದುಕೊಂಡು ಬಾರ್, ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

    ಲಾಕ್​ಡೌನ್​ನಿಂದ ಕೆಲಸವಿಲ್ಲ, ದಿನಸಿಯಿಲ್ಲದೇ ಜೀವನ ನಡೆಸá-ವುದು ಕಷ್ಟವಾಗಿದೆ. ಇಂಥ ಸ್ಥಿತಿಯಲ್ಲಿ ಸರ್ಕಾರ ಮದ್ಯದ ಅಂಗಡಿ ತೆರೆದು ಕೌಟುಂಬಿಕ ನೆಮ್ಮದಿ ಕಸಿದಿದೆ. ಪುರá-ಷರು ಮದ್ಯ ಸೇವಿಸಿ ಬಂದು ಪತ್ನಿ, ಮಕ್ಕಳನ್ನು ಹೊಡೆಯá-ತ್ತಿದ್ದಾರೆ. ಕೂಡಲೆ ಮದ್ಯದ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಮಹಿಳೆಯರು ಪಟ್ಟು ಹಿಡಿದರು.

    ಗ್ರಾಪಂ ಅಧ್ಯಕ್ಷ ಶೇಖರಪ್ಪ ಹರಕುಣಿ, ಸದಸ್ಯ ಪ್ರಕಾಶಗೌಡ ಪಾಟೀಲ ಮಹಿಳೆಯರ ಪ್ರತಿಭಟನೆಗೆ ಸಾಥ್ ನೀಡಿದರು. ಮಹಿಳೆಯರ ಅಹವಾಲು ಸ್ವೀಕರಿಸಿ ಮಾತನಾಡಿದ ಸಿಪಿಐ ಬಸವರಾಜ ಕಲ್ಲಮ್ಮನವರ, ಹಿರಿಯ ಅಧಿಕಾರಿಗಳಿಗೆ ನಿಮ್ಮ ಸಮಸ್ಯೆ ತಿಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ರೈತ ಸಂಘದ ಅಧ್ಯಕ್ಷ ಪರಮೇಶಪ್ಪ ನಾಯ್ಕರ ಮಾತನಾಡಿ, ಮದ್ಯದಂಗಡಿಗಳನ್ನು ಸಂಪೂರ್ಣ ಬಂದ್ ಮಾಡದಿದ್ದರೆ ಮಕ್ಕಳೊಂದಿಗೆ ಗ್ರಾಪಂ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲಾಗá-ವುದು ಎಂದು ಎಚ್ಚರಿಕೆ ನೀಡಿದರು.

    ಗ್ರಾಪಂ ಮಾಜಿ ಅಧ್ಯಕ್ಷ ಯಲ್ಲಪ್ಪಗೌಡ ಪಾಟೀಲ ಮಾತನಾಡಿ, ಸಾರಾಯಿ ಮುಕ್ತ ಗ್ರಾಮವಾಗಿಸಲು ನಿಮ್ಮೊಂದಿಗೆ ಕೈಜೋಡಿಸುತ್ತೇವೆ. ಮೇ 6ರಂದು ಗ್ರಾಪಂ ಸದಸ್ಯರು, ರೈತ ಸಂಘದೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ ಬಳಿಕ ಮಹಿಳೆಯರು ಪ್ರತಿಭಟನೆ ಹಿಂಪಡೆದರು.

    ಗ್ರಾಪಂ ಅಧ್ಯಕ್ಷರು, ಉಪ ತಹಸೀಲ್ದಾರ್, ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸ ಲಾಯಿತು. ಗೌರಮ್ಮ ಚಳ್ಳೆಪ್ಪನವರ, ಪುಷ್ಪಾ ಗುಡಗೇರಿ, ಮಲ್ಲವ್ವ ಚವಣ್ಣವರ, ನೀಲವ್ವ ಹೊನ್ನಳ್ಳಿ, ಲಕ್ಷ್ಮೀ ಜಟ್ಟೆಪ್ಪನವರ, ಗೀತಾ ಹೊಸಮನಿ, ಲಕ್ಷ್ಮವ್ವ ಯಳವತ್ತಿ, ಅಕ್ಕಮ್ಮ ಲಮಾಣಿ, ನೀಲವ್ವ ಗಜೇಂದ್ರಗಡ ಸೇರಿ 60ಕ್ಕೂ ಹೆಚ್ಚು ಮಹಿಳೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts