More

    ಮದುವೆ ಮನೆಯಲ್ಲಿ ಮತದಾನದ ಜಾಗೃತಿ

    ಚಾಮರಾಜನಗರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ವಿಶೇಷವಾಗಿ ಮದುವೆ ಮಂಟಪಗಳಲ್ಲಿ ನೂತನ ವಧು-ವರರಿಂದ ಜಾಗೃತಿ ಮೂಡಿಸಲಾಗುತ್ತಿದೆ.

    ಬುಧವಾರ ನಗರದಲ್ಲಿರುವ ಮದುವೆ ಮಂಟಪಗಳಲ್ಲಿ ಎಲ್ಲಿ ಮದುವೆ ಸಮಾರಂಭ ನಡೆಯುತ್ತಿದೆಯೋ ಅಲ್ಲಿಗೆ ಜಿಲ್ಲಾ ಸ್ವೀಪ್ ಸಮಿತಿ ತಂಡದವರು ಭೇಟಿ ನೀಡಿ ನೂತನ ವಧುವರರಿಂದ ಮತದಾನದ ಜಾಗೃತಿ ಸಾರುವ ಭಿತ್ತಿ ಪತ್ರಗಳನ್ನು ವಧು-ವರರಿಂದ ಪ್ರದರ್ಶಿಸಿ ಮದುವೆಯಲ್ಲಿ ಭಾಗಿಯಾಗುವ ಜನರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿವಳಿಕೆ ನೀಡಲಾಯಿತು.

    ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಪಿ.ಲಕ್ಷ್ಮೀ ಮಾತನಾಡಿ, ಮತದಾರರನ್ನು ಸೆಳೆಯುವ ಉದ್ದೇಶದಿಂದ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದರಂತೆ ನಗರದ ಕಲ್ಯಾಣ ಮಂಟಪಗಳಲ್ಲಿ ನಡೆಯುತ್ತಿರುವ ಮದುವೆಗಳಲ್ಲೂ ನಮ್ಮ ತಂಡ ಭಾಗಿಯಾಗಿ ವಧು-ವರರಿಂದ ಮತದಾನದ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.

    ಜಿಲ್ಲೆಯಲ್ಲಿರುವ ಎಲ್ಲ ಕಲ್ಯಾಣ ಮಂಟಪಗಳಿಗೆ ತೆರಳಿದ ಸಂದರ್ಭದಲ್ಲಿ ನೂತನ ವಧುವರರು ಹಾಗೂ ಕುಟುಂಬದವರು ಅಭೂತಪೂರ್ವ ಬೆಂಬಲವನ್ನು ನೀಡುತ್ತಿದ್ದಾರೆ. ಮದುವೆ ಮಂಟಪದಲ್ಲಿ ಮತದಾನದ ಜಾಗೃತಿ ಗೀತೆಯನ್ನು ಪ್ರಸಾರ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಒಟ್ಟಾರೆಯಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಗುರಿ ನಮ್ಮದಾಗಿದೆ ಎಂದು ತಿಳಿಸಿದರು.

    ಜಿಲ್ಲಾ ವಾರ್ತಾ ಅಧಿಕಾರಿ ಎಂ.ಜುಂಜಣ್ಣ, ಸಹಾಯಕ ವಾರ್ತಾಧಿಕಾರಿ ಸುರೇಶ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts