More

    ಮದುವೆಗಳಲ್ಲಿ ನಿಯಮ ಪಾಲನೆ ಆಗ್ತಿಲ್ಲ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಗ್ರಾಮೀಣ ಭಾಗದಲ್ಲೇ ಜನಸಂದಣಿ

    ಆರ್.ಪ್ರದೀಪ್‌ಕುಮಾರ್ ದೊಡ್ಡಬಳ್ಳಾಪುರ: ಕರೊನಾ ಸಂಕಷ್ಟದ ನಡುವೆ ಗ್ರಾಮೀಣ ಭಾಗದಲ್ಲಿ ಅದ್ದೂರಿಯಾಗಿ ಮದುವೆಗಳು ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.

    ಲಾಕ್‌ಡೌನ್‌ನಲ್ಲಿ 50 ಜನ ಸೇರುತ್ತಿದ್ದರೆ ಲಾಕ್‌ಡೌನ್ ನಂತರ ನೂರಾರು ಜನ ಮದುವೆ ಕಾರ್ಯ ಮಾಡುತ್ತಿದ್ದಾರೆ.
    ಮದುವೆಗೂ ಮೊದಲು ತಹಸೀಲ್ದಾರ್ ಅನುಮತಿ ಪಡೆದು, ನಿಯೋಜಿತ ಅಧಿಕಾರಿಯ ಕಣ್ಗಾವಲಿನಲ್ಲಿ ವಿವಾಹ ನಡೆಯಬೇಕು ಎಂದು ಸರ್ಕಾರ ಆದೇಶಿಸಿದೆ.

    ಆದರೆ ಪ್ರಸ್ತುತ ನಡೆಯುತ್ತಿರುವ ಬಹುತೇಕ ಮದುವೆಗಳಲ್ಲಿ ಈ ನಿಯಮಗಳು ಪಾಲನೆಯಾಗುತ್ತಿಲ್ಲ. ಗ್ರಾಮೀಣ ದೇಗುಲ, ಸಭಾಭವನಗಳಲ್ಲಿ ನಿರಾತಂಕವಾಗಿ ನೆರವೇರುತ್ತಿದ್ದು, ನೂರಾರು ಜನ ಭಾಗವಹಿಸುತ್ತಿದ್ದಾರೆ. ಪರಸ್ಪರ ಅಂತರವಿಲ್ಲ, ಮಾಸ್ಕ್, ಸ್ಯಾನಿಟೈಸರ್ ಬಳಕೆಯೂ ಇಲ್ಲವಾಗಿದೆ. ಇದರಿಂದ ಕರೊನಾ ಭೀತಿ ಇದ್ದು, ಅನುಮತಿ ಇಲ್ಲದೆ ನಡೆಯುತ್ತಿರುವ ವಿವಾಹಗಳ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

    ಗ್ರಾಮೀಣ ಭಾಗದಲ್ಲಿ ಹೆಚ್ಚು ಮದುವೆ: ಅಧಿಕಾರಿಗಳಿಗೆ, ಪೊಲೀಸರಿಗೆ ಮಾಹಿತಿ ಸಿಗದಂತೆ ಬಹುತೇಕ ಮದುವೆಗಳು ದೇವಸ್ಥಾನ, ಸಮುದಾಯಭವನ, ಮನೆಗಳಲ್ಲಿ ನಡೆಯುತ್ತಿವೆ. ಕೆಲ ದೇಗುಲದ ಆಡಳಿತ ಮಂಡಳಿ ಹೆಚ್ಚಿನ ಆದಾಯ ನಿರೀಕ್ಷಿಸಿ ಇದಕ್ಕೆ ಅವಕಾಶ ನೀಡುತ್ತಿವೆ.

    ನಗರದ ಒಳರಸ್ತೆಗಳಲ್ಲಿ ಮದುವೆ ಕಾರ್ಯ: ನಗರ ಪ್ರದೇಶದ ಕೆಲ ಬಡಾವಣೆಗಳ ಒಳ ರಸ್ತೆಗಳಲ್ಲೇ ಪೆಂಡಾಲ್ ಹಾಕಿ ನಡೆಯುತ್ತಿರುವ ಮದುವೆ ಕಾರ್ಯ, ಬೀಗರ ಔತಣಕೂಟಗಳಿಗೆ ಅಪಾರ ಜನ ಸೇರುತ್ತಿದ್ದು, ಅಧಿಕಾರಿಗಳಿಗೆ ಮಾಹಿತಿ ಸಿಕ್ಕರೂ ಮೌನವಾಗಿದ್ದಾರೆ.

    ಮದುವೆ ಇನ್ನಿತರ ಸಭೆ ಸಮಾರಂಭಗಳಲ್ಲಿ ನಿಯಮ ಮೀರಿ ಜನ ಕಂಡು ಬಂದರೆ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಲಾಗುವುದು.
    ಅರಳ್‌ಕುಮಾರ್, ಉಪವಿಭಾಗಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts