More

    ಮದಗದ ಕೆರೆ ಅಚ್ಚುಕಟ್ಟು ಅಭಿವೃದ್ಧಿಗೆ ಮುಂದಾಗಿ

    ಬೀರೂರು: ತಾಲೂಕಿನ ಜೀವನಾಡಿಯಾಗಿರುವ ಮದಗದ ಕೆರೆ ಅಭಿವೃದ್ಧಿ ಹಾಗೂ ಬೀರೂರು ಪುರಸಭೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೆ ಕ್ರಮವಹಿಸಬೇಕು ಎಂದು ಅಡಕೆ ಬೆಳೆಗಾರರ ಸಂಘ ಶಾಸಕ ಬೆಳ್ಳಿ ಪ್ರಕಾಶ್ ಅವರಿಗೆ ಮನವಿ ಮಾಡಿತು.

    ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶಾಸಕರನ್ನು ಅಭಿನಂದಿಸಿದ ಅಡಕೆ ಬೆಳೆಗಾರರ ಸಂಘ, ಕೆರೆಯ ಏರಿ ಬಿರುಕು ಬಿಟ್ಟು ಅಪಾಯದ ಅಂಚಿನಲ್ಲಿದ್ದು ಆದ್ಯತೆ ಮೇರೆಗೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಅಚ್ಚುಕಟ್ಟಿನ ಮಡುಬಾವಿಗಳಿಗೆ ಗೇಟ್ ಅಳವಡಿಕೆ, ದೇವನಕೆರೆ 4 ತೂಬುಗಳಿಗೆ ಗೇಟ್, ರಾಯಗಾಲುವೆಯ ಮಡುಬಾವಿಗಳಿಗೆ ಒಳಗಡೆ ಪ್ಲಾಟ್​ಫಾರಂ ನಿರ್ವಿುಸುವುದು, ಮದಗದಕೆರೆ ಚಾನಲ್ ರಸ್ತೆ ನಿರ್ಮಾಣ ಸೇರಿದಂತೆ ಹಲವು ಸಮಸ್ಯೆಗಳನ್ನು ಶಾಸಕರ ಗಮನ ಸೆಳೆಯಿತು.

    ಗೌರವ ಸ್ವೀಕರಿಸಿ ಮಾತನಾಡಿದ ಬೆಳ್ಳಿಪ್ರಕಾಶ್, ಅಡಕೆ ಬೆಳೆಗಾರರ ಸಂಘ ನೈಜ ಮತ್ತು ಹಾಯುವಳಿ ಸಮಸ್ಯೆಯನ್ನು ಗಮನಕ್ಕೆ ತಂದಿದ್ದು, ಮದಗದ ಕೆರೆಯಲ್ಲಿ ಖುದ್ದು ಸ್ಥಳ ಪರಿಶೀಲನೆ ನಡೆಸಿ ಕೆರೆಯ ಅಭಿವೃದ್ಧಿಗೆ ಪ್ರಯತ್ನ ನಡೆಸಿದ್ದೇನೆ. 2.50 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು ಪ್ರವಾಸಿ ತಾಣವನ್ನಾಗಿಸಲು ಈಗಾಗಲೇ ತಜ್ಞರೊಂದಿಗೆ ರ್ಚಚಿಸಲಾಗಿದೆ. ಇನ್ನೂ 3 ಕೋಟಿ ರೂ. ಅಗತ್ಯವಿದೆ. ಜತೆಗೆ ನಗರೋತ್ಥಾನ ಯೋಜನೆಯಡಿ ಬೀರೂರು ಪಟ್ಟಣಕ್ಕೆ ಸದ್ಯದಲ್ಲೆ ರೂ.10 ಕೋಟಿ ಮಂಜೂರಾಗಲಿದೆ ಎಂದರು.

    ಬೆಳೆಗಾರರು ಪರಿಸರ ಸಂರಕ್ಷಣೆ ಮತ್ತು ಕೃತಕ ಅರಣ್ಯ ಸೃಷ್ಟಿಯಂತಹ ಕಾರ್ಯಕ್ರಮಗಳಿಗೆ ಒತ್ತು ನೀಡಿ ಜಾಗತಿಕ ತಾಪಮಾನ ಸಮತೋಲನ ಕಾಪಾಡುವಲ್ಲಿ ಸಹಕಾರ ನೀಡಬೇಕು. ರಸ್ತೆಗಳಲ್ಲಿ ಅಡಕೆ ಸಿಪ್ಪೆ ಹಾಕಿ ನೈರ್ಮಲ್ಯ, ಅಪಘಾತಗಳು ಹೆಚ್ಚಾಗಲು ಕಾರಣವಾಗುವ ಬದಲು ಅದನ್ನು ಸಾವಯವ ಕೃಷಿಗೆ ಬಳಕೆ ಮಾಡಿಕೊಳ್ಳಬೇಕೆಂದು ಶಾಸಕರು ಮನವಿ ಮಾಡಿದರು.</p>

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts