More

    ಮತ್ತೆ 13 ಜನರಲ್ಲಿ ಕರೊನಾ ಪಾಸಿಟಿವ್

    ಕಲಬುರಗಿ: ಜಿಲ್ಲೆಯಲ್ಲಿ ಮಂಗಳವಾರ 13 ಮಂದಿಗೆ ಕರೊನಾ ಪಾಸಿಟಿವ್ ದೃಢಪಡುವ ಮೂಲಕ ದಿನೇದಿನೆ ಮಹಾಮಾರಿ ಆತಂಕ ಹೆಚ್ಚಾಗತೊಡಗಿದೆ. ಇಂದಿನ ಎಲ್ಲ ಪ್ರಕರಣಗಳಿಗೆ ಮುಂಬೈ ನಂಟಿರುವುದು ಸ್ಪಷ್ಟವಾಗಿದೆ.
    ಆರೋಗ್ಯ ಇಲಾಖೆಯ ಬೆಳಗ್ಗಿನ ಹೆಲ್ತ್ ಬುಲೆಟಿನ್ ಪ್ರಕಾರ 11, ಸಂಜೆ 2 ಸೇರಿ 13 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ನಗರದ ಮಿಲನ್ ಚೌಕ್ ಪ್ರದೇಶದ 35 ವರ್ಷದ ಮಹಿಳೆ (ಪಿ-609) ಮತ್ತು ಮೋಮಿನಪುರ ಪ್ರದೇಶದ 36 ವರ್ಷದ ಮಹಿಳೆ (ಪಿ-641) ಮಂಗಳವಾರ ಡಿಸ್ಚಾಚಾಜರ್ ಆಗಿರುವವರು ಸೇರಿ ಇದುವರೆಗೆ 55 ಗುಣಮುಖರಾಗಿದ್ದಾರೆ. ಏಳು ಜನ ಮೃತಪಟ್ಟಿದ್ದು, 65 ಜನರಿಗೆ ಚಿಕಿತ್ಸೆ ಮುಂದುವರಿದಿದೆ.
    ಮುಂಬೈ ಪ್ರವಾಸ ಹಿನ್ನೆಲೆಯ ಕಾಳಗಿ ತಾಲೂಕಿನ ಕೋಡ್ಲಿ ತಾಂಡಾ ಮೂಲದ 7 ವರ್ಷದ ಬಾಲಕ (ಪಿ-1257), 32 ವರ್ಷದ ಯುವಕ (ಪಿ-1262), 30 ವರ್ಷದ ಯುವತಿ (ಪಿ-1266) ಮತ್ತು ಬುಗಡಿ ತಾಂಡಾ ಮೂಲದ 42 ವರ್ಷದ ಪುರುಷ (ಪಿ-1258) ಹಾಗೂ 18 ವರ್ಷದ ಯುವತಿ (ಪಿ-1259), ಅರಣಕಲ್ ತಾಂಡಾ ಮೂಲದ 8 ವರ್ಷದ ಬಾಲಕಿ (ಪಿ-1260), 21 ವರ್ಷದ ಯುವತಿ(ಪಿ-1263) ಹಾಗೂ 32 ವರ್ಷದ ಯುವಕನಿಗೆ (ಪಿ-1267) ಸೋಂಕು ದೃಢವಾಗಿದೆ.
    ಚಿತ್ತಾಪುರ ತಾಲೂಕಿನ ನಾಲವಾರ ಮೂಲದ (ಕುಂಬಾರ ಹಳ್ಳಿ) 35 ವರ್ಷದ ಮಹಿಳೆ (ಪಿ-1261) ಮತ್ತು 40 ವರ್ಷದ ಪುರುಷ (ಪಿ-1264)ರಲ್ಲೂ ಕೋವಿಡ್-19 ದೃಢಪಟ್ಟಿದೆ. ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಆಳಂದ ತಾಲೂಕು ಧಂಗಾಪುರ ಗ್ರಾಮದ ಆರು ವರ್ಷದ ಬಾಲಕಿ (ಪಿ-1376) ಮತ್ತು 35 ವರ್ಷದ ಮಹಿಳೆ (ಪಿ-1377)ಯಲ್ಲಿ ಪಾಸಿಟಿವ್ ಬಂದ ನಂತರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
    ನಗರದ ಹಳೇ ಜೇವರ್ಗಿ ರಸ್ತೆಯ ಪಂಚಶೀಲ ನಗರದ 30 ವರ್ಷದ ಮಹಿಳೆಗೂ (ಪಿ-1265) ಸೋಂಕು ಅಂಟಿದೆ. ಈಕೆ ಮುಂಬೈನಲ್ಲಿರುವ ನೆಂಟರ ಮನೆಗೆ ಹೋಗಿ ಮೂರು ದಿನ ಹಿಂದೆ ವಾಪಸಾಗಿದ್ದಳು. ಮುಂಬೈನಿಂದ ಬಂದ ಸುದ್ದಿ ಅರಿತ ಜಿಲ್ಲಾಡಳಿತದ ಅಧಿಕಾರಿಗಳು, ಪೊಲೀಸರು ಆಕೆ ಮನೆಗೆ ತೆರಳಿ ಟೆಸ್ಟ್ ಮಾಡಿಸಿದ ಬಳಿಕ ಪಾಸಿಟಿವ್ ವರದಿ ಬಂದಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
    13 ಸೋಂಕಿತರ ಪೈಕಿ ಪಂಚಶೀಲ ನಗರದ ಮಹಿಳೆ ಹೊರತುಪಡಿಸಿ ಉಳಿದವರೆಲ್ಲರೂ ಕ್ವಾರಂಟೈನ್ ಸೆಂಟರ್ಗಳಲ್ಲಿ ಇದ್ದವರು. ಸೋಂಕು ದೃಢವಾದ ನಂತರ ಎಲ್ಲರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts