More

    ಮತ್ತೆ ಏಳು ಹೊಸ ಪ್ರಕರಣ

    ಕಲಬುರಗಿ: ಜಿಲ್ಲೆಯಲ್ಲಿ ದಿನೇದಿನೆ ಕರೊನಾ ಕೆನ್ನಾಲಿಗೆ ವ್ಯಾಪಕವಾಗಿ ಚಾಚುತ್ತಿದ್ದು, ಬುಧವಾರ ಮತ್ತೆ ಏಳು ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 134ಕ್ಕೇರಿದೆ.
    ಇಂದಿನ ಪ್ರಕರಣಗಳಲ್ಲಿ ಯಡ್ರಾಮಿ ತಾಲೂಕಿನ ಸುಂಬಡದಲ್ಲಿ ಎರಡು, ಅರಳಗುಂಡಗಿ, ಹಂಗರಗಾ(ಕೆ), ಜೇವರ್ಗಿ ತಾಲೂಕಿನ ಯಾಳವಾರ ಹಾಗೂ ಚಿತ್ತಾಪುರ ತಾಲೂಕಿನ ಬಳವಡಗಿ, ಯಾಗಾಪುರದ ತಲಾ ಒಬ್ಬರಿಗೆ ಸೋಂಕು ತಗುಲಿದ್ದು, ಈ ಎಲ್ಲರಿಗೆ ಮಹಾರಾಷ್ಟ್ರ ನಂಟಿದೆ.
    ಹಂಗರಗಾ(ಕೆ)ದ 22 ವರ್ಷದ ಯುವಕ (ಪಿ-1423), ಸುಂಬಡದ 35 ವರ್ಷದ ಯುವಕ (ಪಿ-1424) ಮತ್ತು 46 ವರ್ಷದ ಪುರುಷ (1427), ಅರಳಗುಂಡಗಿಯ 25 ವರ್ಷದ ಯುವಕ (ಪಿ-1425), ಬಳವಡಗಿಯ 26 ವರ್ಷದ ಯುವಕ (ಪಿ-1428) ಮತ್ತು ಯಾಗಾಪುರದ 50 ವರ್ಷದ ವ್ಯಕ್ತಿ (ಪಿ-1429)ಗೆ ಕರೊನಾ ದೃಢಪಟ್ಟಿದೆ. ಯಾಳವಾರದ 22 ವರ್ಷದ ಯುವತಿ (1426)ಗೂ ಸೋಂಕು ತಗುಲಿದ್ದರಿಂದ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ.
    ಯಡ್ರಾಮಿ ತಾಲೂಕಿನ ನಾಲ್ವರು ಯಾಳವಾರ್ ಕ್ರಾಸ್ ಹತ್ತಿರದ ಮುರಾರ್ಜಿ ದೇಸಾಯಿ ವಸತಿ ಶಾಲೆ ಕ್ವಾರಂಟೈನ್ ಕೇಂದ್ರದಲ್ಲಿದ್ದವರು. ಯುವತಿ ಮುಂಬೈನಿಂದ ಬಂದಿರಲಿಕ್ಕಿಲ್ಲ ಎನ್ನಲಾಗುತ್ತಿದ್ದು, ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಬೇಕಿದೆ. ಮುರಾರ್ಜಿ ದೇಸಾಯಿ ಶಾಲೆಯನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಇಲ್ಲಿರುವ ಎಲ್ಲ 40 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸೋಂಕಿತರೆಲ್ಲರಿಗೂ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
    ಇದುವರೆಗೆ 134 ಜನರಿಗೆ ಸೋಂಕು ತಗುಲಿದ್ದು, ಇವರಲ್ಲಿ ಏಳು ಜನ ಮೃತಪಟ್ಟಿದ್ದಾರೆ. 55 ಜನ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಉಳಿದ 72 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts