More

    ಮತಹಕ್ಕು ಮಹತ್ವ ಅರಿವು ಅಗತ್ಯ

    ಚಿತ್ರದುರ್ಗ: ಎಲ್ಲ ಅರ್ಹ ನೋಂದಾಯಿತ ಮತದಾರರು ಏಪ್ರಿಲ್ 26ರಂದು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಬೇಕೆಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಮತದಾರರಿಗೆ ಮನವಿ ಮಾಡಿದರು.
    ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ನಗರಸಭೆ ಮತ್ತಿತರ ಇಲಾಖೆಗಳ ಸಹಯೋಗದೊಂದಿಗೆ ನಗರ ವ್ಯಾಪ್ತಿಯಲ್ಲಿ ಶೇ.70ಕ್ಕಿಂತ ಕಡಿಮೆ ಮತದಾನವಾಗಿದ್ದ ಮತಗಟ್ಟೆ ಪ್ರದೇಶಗಳಲ್ಲಿ ಬುಧವಾರ ಏರ್ಪಡಿಸಿದ್ದ ವಾಕ್‌ಥಾನ್‌ನಲ್ಲಿ ಭಾಗವಹಿಸಿ ಮಾತನಾಡಿದರು.
    ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನಿರ್ಭಿತಿಯಿಂದ ಮತ ಚಲಾಯಿಸಬೇಕು. ಆ ಮೂಲಕ ಸಮರ್ಥ ಜನನಾಯಕನ ಆಯ್ಕೆಯಲ್ಲಿ ಭಾಗಿಯಾಗಬೇಕು. ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕಡ್ಡಾಯವಾಗಿ ಹಕ್ಕನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವ ಎನ್ನುವುದು ಆಡಳಿತ ವ್ಯವಸ್ಥೆಯ ವಿಧಾನವೊಂದೇ ಅಲ್ಲ, ಅದೊಂದು ಒಗ್ಗೂಡಿ ಬಾಳುವ ವಿಧಾನ ಎಂದರು.
    ಹಕ್ಕು ಚಲಾಗಯಿಸುವ ಮೂಲಕ ಸಂವಿಧಾನನ್ನು ಗೌರವಿಸುವ, ಅದನ್ನು ಸಂರಕ್ಷಿಸುವ ನಾಯಕನನ್ನು ಆರಿಸಬೇಕಾದ ಅಗತ್ಯವನ್ನು ಅರಿಯಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗೆ ಎಲ್ಲರೂ ಸಹಕರಿಸಬೇಕು. ಒಂದು ಮತಕ್ಕೆ ದೇಶದ ಭವಿಷ್ಯವನ್ನೇ ಬದಲಾಯಿಸುವ ಶಕ್ತಿ ಇದೆ. ಮತಗಟ್ಟೆಗೆ ತೆರಳುವ ಮುನ್ನ ಮತಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
    ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಕೃಷಿ ಇಲಾಖೆ ಡಿಡಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಡಿಡಿ ಪರಮೇಶ್ವರಪ್ಪ, ನಗರಸಭೆ ಆಯುಕ್ತೆ ಎಂ.ರೇಣುಕಾ, ಕಂದಾಯಾಧಿಕಾರಿ ಜಯಣ್ಣ, ಪರಿಸರ ಇಂಜಿನಿಯರ್ ಜಾಫರ್, ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಸುಬ್ರನಾಯಕ ಮತ್ತಿತರರು ಇದ್ದರು.
    ನಗರದ ಮಹಾತ್ಮ ಗಾಂಧಿಸರ್ಕಲ್‌ನಿಂದ ಆರಂಭಗೊಂಡ ವಾಕಥಾನ್ ಸಂತೆಹೊಂಡ, ಅಂಜುಮನ್, ಗೋಪಾಲಪುರ ರಸ್ತೆ ಹಾಗೂ ಜೆಸಿಆರ್, ವಿ.ಪಿ.ಬಡಾವಣೆ ಮತ್ತಿತರ ಕಡೆ ಸಂಚರಿಸಿ ಒನಕೆ ಓಬವ್ವ ವೃತ್ತದಲ್ಲಿ ಸಂಪನ್ನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts