More

    ಮತಯಾಚನೆ ವೇಳೆ ತೆಂಗಿನ ಕಾಯಿ,ಸೊಪ್ಪು ಖರೀದಿಸಿದ ಕಾರಜೋಳ

    ಚಿತ್ರದುರ್ಗ: ಲೋಕಸಭಾ ಚುನಾವಣೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಗೋವಿಂದ ಎಂ.ಕಾರಜೋಳ ಅವರು ನಗರದ ಸಂತೆಹೊಂಡ ಮಾರುಕಟ್ಟೆ ಪ್ರ ದೇಶದಲ್ಲಿ ಸೋಮವಾರ ಬೆಳಗ್ಗೆ ಮತಯಾಚಿಸಿದರು. ಗ್ರಾಹಕರು,ಅಂಗಡಿ-ಮುಂಗಟ್ಟು,ಹೂವು,ತರಕಾರಿ ವ್ಯಾಪಾರಿಗಳು,ನಾಗರಿಕರನ್ನು ಭೇಟಿ ಮಾಡಿ ಮತ ಯಾಚಿಸಿದರು.
    ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ದೇಶಕ್ಕೆ ಒಬ್ಬ ಸಮರ್ಥ ಪ್ರಧಾನಿ ನರೇಂದ್ರ ಮೋದಿ ಅವರ ರೂಪದಲ್ಲಿ ದೊರಕಿದ್ದಾರೆ. ಭಾರತವನ್ನು ವಿಶ್ವಗುರು ಆಗಿಸುವ ಏಕೈಕ ಧ್ಯೇಯದೊಂದಿಗೆ ಕಾರ‌್ಯನಿರ್ವಹಿಸುತ್ತಿರುವ ಅವರನ್ನು ಮತದಾರರು ಬೆಂಬಲಿಸಬೇಕಿದೆ.ಹಿಂ ದಿನ ಕಾಂಗ್ರೆಸ್-ಯುಪಿಎ ಸರ್ಕಾರಗಳು ದೇಶದ ಸುರಕ್ಷತೆಗೂ ಒತ್ತು ನೀಡಿರಲಿಲ್ಲ.
    ಆದರೆ ಮೋದಿ ಅವರ ಕಠಿಣ ನಿಲುವಿನಿಂದಾಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಶತ್ರು ರಾಷ್ಟ್ರಕ್ಕೆ ನಡುಕವುಂಟಾಗಿದೆ ಎಂದ ಅವರು,ಜನಧನ,ಉಜ್ವಲಾ ಮೊದಲಾದ ಕೇಂದ್ರದ ಹತ್ತು ಹಲವು ಯೋಜನೆಗಳ ತಿಳಿಸಿ ಮತಯಾಚಿಸಿದರು. ವೀರ ವನಿತೆ ಒನಕೆ ಓಬವ್ವಳ ಪವಿತ್ರ ನೆಲ ಚಿತ್ರದುರ್ಗದ ಪ್ರಗತಿ ನನ್ನ ಗುರಿ,ನಾನು ನಿಮ್ಮ ಮನೆ ಸದಸ್ಯ,ಹೊರಗಿನವನಲ್ಲ. ನಿಮ್ಮ ಸೇವೆಗೆ ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು.
    ಸಿದ್ದರಾಮಯ್ಯ ಲೂಟಿ ಆರೋಪವನ್ನು ತಳ್ಳಿ ಹಾಕಿದ ಅವರು,ನಾನು ಹೊರಗಿನವರು ಎನ್ನುವ ಸಿದ್ದರಾಮಯ್ಯ ಯಾಕೆ ಬದಾಮಿಗೆ ಬಂದಿದ್ದರೆಂದು ಪ್ರಶ್ನಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ಸಮಸ್ಯೆಗಳು ಚರ್ಚೆಯಾದರೆ,ದೇಶದ ಭದ್ರತೆ,ಆರ್ಥಿಕತೆ ವಿ ಚಾರ ಆಧರಿಸಿ ಲೋಕಸಭೆಗೆ ಚುನಾವಣೆ ನಡೆಯಲಿದೆ ಎಂದು ಅಭಿಪ್ರಾಯಪಟ್ಟರು.
    ಜೋಡಿ ಕಾಯಿ ಖರೀದಿ
    ಅಮವಾಸೆ ಪೂಜೆಗೆಂದು 50 ರೂ.ಕೊಟ್ಟು ಜೋಡಿ ತೆಂಗಿನ ಕಾಯಿ ಹಾಗೂ 100 ರೂ.ಕೊಟ್ಟು ಸೊಪ್ಪು ಖರೀದಿಸಿದ ಕಾರಜೋಳ ಅ ವರು,ಪ್ರಚಾರದ ವೇಳೆ ಟಿ-ಸ್ಟಾಲ್‌ವೊಂದರಲ್ಲಿ ಕಾರ‌್ಯಕರ್ತರೊಡಗೂಡಿ ಚಹಾಸೇವಿಸಿದರು. ಮಾಧುರಿಗಿರೀಶ್,ಸಂಪತ್‌ಕುಮಾರ್,ವೆಂ ಕಟೇಶ್‌ಯಾದವ್,ರಾಮು,ನಾಗರಾಜಬೇಂದ್ರೆ,ದಗ್ಗೆ ಶಿವಪ್ರಕಾಶ,ಶೈಲಜಾರೆಡ್ಡಿ,ಕಿಟ್ಟಿ,ಆದರ್ಶ,ಶಿವಣ್ಣಾಚಾರ್,ಬಸಮ್ಮ ಮತ್ತಿತರರು ಇದ್ದ ರು.
    ಯೋಗ ಶಿಬಿರಗಳಲ್ಲಿ ಮತಯಾಚನೆ
    ನಗರದ ವಿವಿಧ ಯೋಗ ಶಿಬಿರಗಳಿಗೆ ಸೋಮವಾರ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಪ್ರಧಾನ ಕಾರ್ಯದರ್ಶಿ ಹಾಗೂ ಕಾರ ಜೋ ಳರ ಪುತ್ರ ಉಮೇಶ್‌ಕಾರಜೋಳ ಅವರು ಭೇಟಿ ನೀಡಿ ತಂದೆ ಪರ ಮತಯಾಚಿಸಿದರು. ಜಲಸಂಪನ್ಮೂಲ,ಲೋಕೋಪಯೋಗಿ, ಆಹಾ ರ ಮೊದಲಾದ ಇಲಾಖೆಗಳಲ್ಲಿ ಸಚಿವರಾಗಿ ಅನುಭವವಿರುವ ಕಾರಜೋಳ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.ಬಾಲುಯಾ ದವ,ಬಸವರಾಜ ಯಾದವ,ಧನಂಜಯ ಮತ್ತಿತರರು ಹಾಗೂ ಯೋಗ ಸಮಿತಿ ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts