More

    ಮತದಾರರ ಪಟ್ಟಿಗೆ ಆಧಾರ್ ಜೋಡಿಸಿ

    ಹುಲಸೂರು: ಚುನಾವಣೆಗಳು ಪಾರದರ್ಶಕ ನಡೆಯಲು ಮತ್ತು ಅಡ್ಡ ಮತದಾನ ತಡೆಯಲು ಸಾರ್ವಜನಿಕರು ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು ಎಂದು ತಹಸೀಲ್ದಾರ್ ಶಿವಾನಂದ ಮೇತ್ರೆ ಕೋರಿದರು.

    ಗಡಿಗೌಂಡಗಾಂವ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಡಿಸಿ ನಡೆ-ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಯ 57 ಅಜರ್ಿ ಬಂದಿದ್ದು, ಕೆಲವು ಸ್ಥಳದಲ್ಲಿಯೇ ಬಗೆಹರಿಸಲಾಗಿದೆ ಎಂದರು.

    ಊರ ಹೊರವಲಯದಲ್ಲಿದ್ದ ಸಾರ್ವಜನಿಕ ಸ್ಮಶಾನಭೂಮಿ ಬೇರೆಯವರ ಅಧೀನದಲ್ಲಿದ್ದು, ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರ ಮಾಡಲು ತುಂಬ ತೊಂದರೆ ಆಗುತ್ತಿದೆ ಎಂಬ ಅಹವಾಲಿಗೆ ಸ್ಪಂದಿಸಿದ ಮೇತ್ರೆ, ಒತ್ತುವರಿಯಾದ 1.17 ಎಕರೆ ಸ್ಥಳವನ್ನು ಸ್ಮಶಾನಭೂಮಿ ಎಂದು ಗುರುತಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.

    ಅನೀಲಕುಮಾರ ತಾಂಬೊಳೆ ಊರಿನ ಸಮಸ್ಯೆಗಳನ್ನು ಹೇಳಿದರು. ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ದಿಲೀಪ, ಉಪಾಧ್ಯಕ್ಷ ದೀಪಕ ಪಾಟೀಲ್, ಬಿಇಒ ಸೂರ್ಯಕಾಂತ ಪಾಟೀಲ್, ಗ್ರಾಪಂ ಸದಸ್ಯರಾದ ಸಂತೋಷ ಭರಮಶೆಟ್ಟೆ, ಯಶವಂತ ದತ್ತಾ, ಸಂತೋಷ ಫುಲೆ, ದಿಲಶುಕ್ ತಾತೇರಾವ, ದಶರಥ ಜಮಾದಾರ ಇತರರಿದ್ದರು.

    ಹೋಟೆಲ್ಗಳಲ್ಲಿ ಅಸ್ಪಶ್ಯರಿಗೆ ತಾರತಮ್ಯ: ಗ್ರಾಮದ ಸವಣರ್ೀಯರ ಹೋಟೆಲ್ಗಳಲ್ಲಿ ಅಸ್ಪಶ್ಯರಿಗೆ ಚಹಾ ಕುಡಿಯುವ ಗ್ಲಾಸ್ ಪ್ರತ್ಯೇಕವಾಗಿ ಇಡಲಾಗಿದೆ. ನಾವು ಸಹ ಮನುಷ್ಯರಾಗಿದ್ದು, ತಾರತಮ್ಯ ಮಾಡದೆ ಎಲ್ಲರಂತೆ ನೋಡಬೇಕು ಎಂದು ದಲಿತ ಸಮುದಾಯದ ಪ್ರಮುಖರು ಕೋರಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ತಹಸೀಲ್ದಾರ್ ಮೇತ್ರೆ, ಅಸ್ಪಶ್ಯ ಆಚರಣೆ ಕಾನೂನು ಪ್ರಕಾರ ಅಪರಾಧ. ತಾರತಮ್ಯ ನಡೆಯದಂತೆ ಎಲ್ಲ ಸಮುದಾಯದವರನ್ನು ಒಂದೆಡೆ ಸೇರಿಸಿ ಜನಜಾಗೃತಿ ಕಾರ್ಯಕ್ರಮ ಮಾಡಬೇಕು ಎಂದು ಸ್ಥಳದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಎಡಿ ಗಿರೀಶ ರಂಜೋಳಕರ್ಗೆ ಸೂಚಿಸಿದರು. ನಂತರ ಸವಣರ್ೀಯರ ಹೋಟೆಲ್ಗಳಿಗೆ ತೆರಳಿ ಊರಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಬಾರದು ಎಂದು ತಿಳಿವಳಿಕೆ ಮೂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts