More

    ಮತದಾನ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಿ


    ಯಾದಗಿರಿ: ಬರುವ ವಿಧಾನಸಭಾ ಚುನಾವಣೆ ಪ್ರಯುಕ್ತ ಜಿಲ್ಲೆಯ ಮತದಾನ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗುವಂತೆ ಸಂಬಂಸಿದ ಅಧಿಕಾರಿಗಳಿಗೆ
    ಜಿಲ್ಲಾಧಿಕಾರಿ ಸ್ನೇಹಲ್ ಆರ್., ನಿದರ್ೇಶನ ನೀಡಿದರು.
    ಸೋಮವಾರ ಇಲ್ಲಿನ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಈಗಾಗಲೇ ಚುನಾವಣೆಗೆ ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ. ಅದರಂತೆ ಜಿಲ್ಲೆಯ 1135 ಮತದಾನ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಬೇಸಿಗೆ ಇರುವುದರಿಂದ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸೌಲಭ್ಯ, ಶೌಚಗೃಹ ವ್ಯವಸ್ಥೆ , ವಿದ್ಯುತ್ ಸೌಲಭ್ಯ, ಪೀಠೋಪಕರಣಗಳ ವ್ಯವಸ್ಥೆ ಹಾಗೂ ಎಲ್ಲೆಲ್ಲಿ ದುರಸ್ತಿ ಮಾಡುವ ಕಾರ್ಯಗಳಿದ್ದರೆ ಶೀಘ್ರದಲ್ಲೇ ಮುಗಿಸಬೇಕು ಎಂದರು.

    ಜಿಪಂ ಸಿಇಒ ಅಮರೇಶ ಆರ್. ನಾಯ್ಕ್, ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಶಾ ಆಲಂ ಹುಸೇನ್, ಚುನಾವಣಾ ತಹಶೀಲ್ದಾರ ಸಂತೋಷಿರಾಣಿ, ನಗರಾಭಿವೃದ್ಧಿಕೋಶ ಯೋಜನಾ ನಿದರ್ೇಶಕ ಶಿವಶರಣಪ್ಪ ನಂದಗಿರಿ, ಪೌರಾಯುಕ್ತ ಶರಣಪ್ಪ, ತಹಸೀಲ್ದಾರರಾದ ಅಣ್ಣರಾವ್ ಪಾಟೀಲ್, ಸುಬ್ಬಣ್ಣ ಜಮಖಂಡಿ,ಜಗದೀಶ ಚೌರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts