More

    ಮತಕ್ಷೇತ್ರದ ಅಭಿವೃದ್ಧಿಗೆ 1,250 ಕೋಟಿ ರೂ.

    ಅಥಣಿ ಗ್ರಾಮೀಣ: ರಸ್ತೆ, ಕುಡಿಯುವ ನೀರು, ಸಮುದಾಯ ಭವನ, ಒಳ ಚರಂಡಿ, ವಸತಿ ಯೋಜನೆಗೆ ಒಟ್ಟು 1,250 ಕೋಟಿ ರೂ. ಗಿಂತ ಹೆಚ್ಚು ಅನುದಾನ ತಂದಿದ್ದೇನೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.

    ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ 3.1 ಕೋಟಿ ರೂ. ಹಾಗೂ ಯಲಿಹಡಲಗಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಅಮ್ಮಾಜೇಶ್ವರಿ ಕೊಟ್ಟಲಗಿ ನೀರಾವರಿ ಯೋಜನೆಗೆ 1448.81 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ೆಬ್ರವರಿಯಲ್ಲಿ ಆಗಮಿಸಲಿದ್ದಾರೆ ಎಂದರು. ಅಮಿತ ಷಾ ಅವರು ಬೆಳಗಾವಿ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿ 2023ರ ವಿಧಾನಸಭಾ ಚುನಾವಣೆಯಲ್ಲಿ 150 ರ ಟಾಸ್ಕ್ ನೀಡಿದ್ದು, ಜಿಲ್ಲೆಯ ಎಲ್ಲ ನಾಯಕರು ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷೆ ಬಸವ್ವ ನಾಯಿಕ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ಪಾಂಡು ಭೋಸಲೆ, ಶಿವಪುತ್ರ ನಾಯಿಕ, ರಾಜು ಮರಡಿ, ಬಸವರಾಜ ಮಗದುಮ, ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಚನ್ನಾಪುರ, ಚಂದ್ರಶೇಖರ ಬೆಳ್ಳಂಕಿ, ಅಶ್ವಿನಿ ಕೊಟ್ಟಲಗಿ, ದುರಂದರ ಭೋಸಲೆ, ಈರಣ್ಣ ವಾಲಿ, ಪ್ರವೀಣ ಪಾಟೀಲ, ಮುಕೇಶ ಭೋಸಲೆ, ಜಿಪಂ ಮಾಜಿ ಸದಸ್ಯ ಶ್ರೀಶೈಲ ಗಸ್ತಿ, ಮಹಾದೇವ ಮಾದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts