More

    ಮಣ್ಣಿನ ಪರೀಕ್ಷೆಯಿಂದ ಸಮೃದ್ಧ ಬೆಳೆ

    ಶಿರಹಟ್ಟಿ: ರೈತರು ತಮ್ಮ ಹೊಲಗಳಲ್ಲಿನ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿಕೊಂಡು ಬೆಳೆ ಬೆಳೆದರೆ ಯಾವುದೇ ಸಂಕಷ್ಟ ಪಡುವ ಅಗತ್ಯವಿಲ್ಲ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಹೇಳಿದರು.

    ಮಾಗಡಿ ಗ್ರಾಮದ ರೈತ ಗೋಪಿನಾಥ ಗಾಣಿಗೇರ ಅವರ ಹೊಲದಲ್ಲಿ ಮಣ್ಣು ಪರೀಕ್ಷಿಸಿ ಅವರು ಮಾತನಾಡಿದರು.

    ‘ಮಣ್ಣಿನ ಪರೀಕ್ಷೆ ಮಾಡಿಸುವುದರಿಂದ ಅದರಲ್ಲಿನ ಪೋಷಕಾಂಶಗಳ ಕೊರತೆ ತಿಳಿಯುತ್ತದೆ. ಮಣ್ಣಿನ ಫಲವತ್ತತೆ ಕಾಪಾಡಿಕೊಂಡಾಗ ಯಾವುದೇ ಬಹುವಾರ್ಷಿಕ ಬೆಳೆ ಬೆಳೆದು ಉತ್ತಮ ಆದಾಯ ಪಡೆಯಬಹುದು’ ಎಂದರು.

    ಹಾಗೆಯೇ ನೀರಿನ ಗುಣಧರ್ಮ ತಿಳಿಯುವುದು ಅಗತ್ಯ. ವಿಶೇಷವಾಗಿ ಮಳೆಯ ನೀರನ್ನು ಸಂಗ್ರಹಿಸುವುದರಿಂದ ಉತ್ತಮ ಫಸಲು ಬೆಳೆಯಬಹುದು. ನೀರಿನ ಸದ್ಬಳಕೆ ಮತ್ತು ಮಣ್ಣಿನ ರಕ್ಷಣೆಯತ್ತ ರೈತರು ಗಮನ ಹರಿಸಬೇಕು. ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿ ಪರೀಕ್ಷಾ ಕೇಂದ್ರದಿಂದ ವರದಿ ಬಂದ ನಂತರ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂರ್ಪಸಿ ಅವರ ಸಲಹೆ ಮೇರೆಗೆ ಬೆಳೆ ಬೆಳೆಯಬೇಕು. ಆಗ ರೈತರು ನಿರೀಕ್ಷಿಸಿದ ಫಸಲು ಮತ್ತು ಆದಾಯ ಪಡೆಯಲು ಸಾಧ್ಯವಾಗುತ್ತದೆ ಎಂದರು.

    ಪ್ರಗತಿಪರ ರೈತ ಗೋಪಿನಾಥ ಗಾಣಿಗೇರ, ಬಸವರಾಜ ಶಿರಹಟ್ಟಿ, ಎಚ್.ಎಲ್. ಬಾಲರಡ್ಡಿ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts