More

    ಮಣ್ಣಿನ ಗುಣಕ್ಕೆ ತಕ್ಕ ಶಿಕ್ಷಣ ನೀತಿ

    ಹುಬ್ಬಳ್ಳಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಅಧ್ಯಯನ ಮಾಡುವುದು ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಕರ್ತವ್ಯ. ಈ ದೇಶದ ಮಣ್ಣಿನ ಗುಣಕ್ಕೆ ತಕ್ಕಂತಹ ಶಿಕ್ಷಣ ನೀತಿಯ ಅವಶ್ಯಕತೆ ಇತ್ತು. ಅಂತಹ ನೀತಿ ರೂಪಿಸುವಲ್ಲಿ ಕರ್ನಾಟಕದ ಪಾತ್ರ ಬಹು ದೊಡ್ಡದಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶಕುಮಾರ ಅಭಿಪ್ರಾಯಪಟ್ಟರು.

    ಇಲ್ಲಿಯ ಭಾರತೀಯ ಶಿಕ್ಷಣ ಮಂಡಲ, ಕೇಂದ್ರ ಸರ್ಕಾರದ ನೀತಿ ಆಯೋಗ ಮತ್ತು ಉತ್ತರ ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಸಂಘಟನೆ (ಎನ್​ಕೆಯುಎಸ್​ಎಂಎ) ಸಹಯೋಗದಲ್ಲಿ ನಗರದ ಭೈರಿದೇವರಕೊಪ್ಪದ ಗುರುಮಹಾ ವಿದ್ಯಾಪೀಠ ಆವರಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದವರೇ ಆದ ಖ್ಯಾತ ವಿಜ್ಞಾನಿ ಹಾಗೂ ಶಿಕ್ಷಣ ತಜ್ಞ ಡಾ. ಕಸ್ತೂರಿ ರಂಗನ್, ವಿ.ವಿ. ಉಪಕುಲಪತಿ ಎಂ.ಜಿ. ಶ್ರೀಧರ, ಅಜೀಂ ಪ್ರೇಮ್ ಫೌಂಡೇಷನ್​ನ ಅನುರಾಗ್ ಬೆಹ್ರಾ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ನಿರೂಪಣೆೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

    ಸಂಶೋಧನೆ, ಪ್ರತಿಯೊಂದು ಅಂಶಗಳನ್ನು ಅಧ್ಯಯನ ಮಾಡಿ ಸಂಪೂರ್ಣ ದೇಶ ಪ್ರವಾಸ ಮಾಡಿ ತಜ್ಞರು ನೀತಿ ರೂಪಿಸಿದ್ದಾರೆ. ಹೊಸ ಶಿಕ್ಷಣ ನೀತಿ ಜಾರಿಯಾಗುವುದರಿಂದ ಭಾರತ ಮತ್ತೆ ವಿಶ್ವಗುರು ಆಗಲು ಸಾಧ್ಯ. ವಿದ್ಯಾರ್ಥಿಗಳಿಗೂ ಪುಸ್ತಕಗಳ ಹೊರೆ ಕಡಿಮೆಯಾಗಲಿದೆ ಎಂದರು.

    ಮೊದಲಿನ ಹಾಗೆ 10+2 ಅನುಪಾತದ ಶಿಕ್ಷಣ ಇರುವುದಿಲ್ಲ. ಬದಲಾಗಿ 5+3+3+4 ಅನುಪಾತದಲ್ಲಿ ಇರಲಿದೆ. ಶಿಕ್ಷಣ ನೀತಿಯಿಂದ ಒಬ್ಬ ವಿದ್ಯಾರ್ಥಿ ತನ್ನ ಶಿಕ್ಷಣದೊಂದಿಗೆ ಸಾಮಾಜಿಕ ಜವಾಬ್ದಾರಿ ಕಲಿಯುತ್ತಾನೆ. ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದಿಟಛಿಯಲ್ಲಿ ಮಹತ್ವದ ಜವಾಬ್ದಾರಿ ಶಿಕ್ಷಕರಿಗೆ ಇರುತ್ತದೆ ಎಂದು ಸಚಿವರು ಹೇಳಿದರು.

    ಇಂದಿನ ವ್ಯವಸ್ಥೆಯಲ್ಲಿ ಶಿಕ್ಷಣ ಮಾರಾಟದ ಸರಕಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಚಿವ ಸುರೇಶಕುಮಾರ, ತಮಗೂ ಕೂಡ ಒಬ್ಬರು ಡಾಕ್ಟರೇಟ್ ನೀಡುತ್ತೇವೆ. 70 ಸಾವಿರ ರೂ. ಕೊಡಿ ಎಂದು ಪತ್ರ ಬರೆದಿದ್ದರು. ಕೊನೆಗೆ ಅವರ ವಿರುದಟಛಿ ಕ್ರಮ ಕೈಗೊಳ್ಳಬೇಕಾಯಿತು ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿದರು. ಎನ್​ಕೆಯುಎಸ್​ಎಂಎ ಅಧ್ಯಕ್ಷ ಅರವಿಂದ ಮೇಟಿ ಉಪನ್ಯಾಸ ನೀಡಿದರು. ಭಾರತೀಯ ಶಿಕ್ಷಣ ಮಂಡಲದ ಅಧ್ಯಕ್ಷ ಡಾ. ಬಸವರಾಜ ಅನಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಿರೀಶ ಬಿದರಳ್ಳಿ, ಅವಳಿನಗರದ ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಪಾಲ್ಗೊಂಡಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ- 2020ರ ಅಧ್ಯಯನ ಹಾಗೂ ಅನುಷ್ಠಾನ ಕೇಂದ್ರವನ್ನು ಇದೇ ಸಂದರ್ಭದಲ್ಲಿ ಗುರುಮಹಾ ವಿದ್ಯಾಪೀಠದಲ್ಲಿ ಉದ್ಘಾಟಿಸಲಾಯಿತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts