More

    ಮಣಿಪುರ ಹಿಂಸಾಚಾರ ವಿರೋಧಿಸಿ ಪ್ರತಿಭಟನೆ

    ಚಿತ್ರದುರ್ಗ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ,ಗಲಭೆ,ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ವಿಫಲವಾಗಿರುವ ಅಲ್ಲಿನ ಮುಖ್ಯಮಂತ್ರಿ ಎನ್.ಬಿರೇನ್‌ಸಿಂಗ್‌ಹಾಗೂ ಪ್ರಧಾನಿ ನರೇಂದ್ರಮೋದಿ ಅವರು ಕೂಡಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡ ಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ‌್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟಿಸಿದರು.

    ಕಳೆದ ಮೂರು ತಿಂಗಳಿಗೂ ಅಧಿಕ ಕಾಲದಿಂದ ಮಣಿಪುರದಲ್ಲಿ ಸಮುದಾಯಗಳ ನಡುವೆ ಸಂಘರ್ಷ,ಹಿಂಸೆ,ಕೊಲೆ,ಸುಲಿಗೆ,ಅತ್ಯಾ ಚಾರ,ಮಹಿಳೆಯರ ಬೆತ್ತಲೆ ಮೆರವಣಿಗೆಯಂಥ ಅವಮಾನವೀಯ ಘಟನೆಗಳನ್ನು ನಿಯಂತ್ರಿಸಲು ವಿಫಲವಾಗಿವೆ ಎಂದು ಆರೋಪಿಸಿ ಮಣಿಪುರ ಸರ್ಕಾರ ಮತ್ತು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು.

    ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಬಂಧಿಸಬೇಕು.ಅಕ್ರಮ ಗಸಗಸೆ ಕೃಷಿ,ವಲಸೆ ತಡೆದು ಸೂಕ್ತ ಬಂದೋಬಸ್ತ್ ಒದಗಿಸ ಬೇ ಕು. ಸಂಚಾರಕ್ಕೆ ಹೆದ್ದಾರಿ ಮುಕ್ತಗೊಳಿಸಿ ಜನರಿಗೆ ಅಗತ್ಯ ಆಹಾರ ಪದಾರ್ಥ ಮತ್ತು ಔಷಧಗಳನ್ನು ಪೂರೈಸ ಬೇಕು. ಸಂತ್ರಸ್ತ ಕುಟುಂಬ ಗಳಿಗೆ ಸೂಕ್ತ ಪರಿಹಾರ ನೀಡಬೇಕು.

    ಕಾರ್ಪೊರೇಟ್ ಕಂಪನಿಗಳಿಗೆ ಗಣಿಗಾರಿಕೆ ನಡೆಸಲು 65 ಸಾವಿರ ಎಕರೆ ಅರಣ್ಯಭೂಮಿ ಕೊಡುವ ಪ್ರಸ್ತಾಪವನೆಯನ್ನು ಅಲ್ಲಿನ ಸರ್ಕಾ ರ ಕೈಬಿಡಬೇಕು. ಎನ್‌ಎಫ್‌ಐಡಬ್ಲ್ಯೂನಾಯಕಿಯರ ಮೇಲೆ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸ ಬೇಕೆಂದು ಪ್ರತಿಭಟನಾ ನಿರತ ರು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಸಿಪಿಐ ಜಿಲ್ಲಾ ಕಾರ‌್ಯದರ್ಶಿ ಜಿ.ಸಿ.ಸುರೇಶ್‌ಬಾಬು,ಟಿ.ಆರ್.ಉಮಾಪತಿ,ಇ.ಸತ್ಯಕೀರ್ತಿ,ಬಿ.ಬಸವರಾಜಪ್ಪ,ರಾಜಪ್ಪ,ತಿಪ್ಪೇಸ್ವಾಮಿ, ಎಂ. ಬಿ.ಜಯದೇವಮೂರ್ತಿ,ರವಿಕುಮಾರ್,ಸಾವಿತ್ರಮ್ಮ,ಆಶಾರಾಣಿ,ಭಾಗ್ಯಮ್ಮ,ವಿನೋದಮ್ಮ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts