More

    ಮಠಗಳೆಲ್ಲ ಮಹಾಮನೆಗಳಾಗಲಿ

    ಬಸವಕಲ್ಯಾಣ: ಹನ್ನೆರಡನೇ ಶತಮಾನದಲ್ಲಿ ಬಸವಾದಿ ಪ್ರಮಥರು ಮಹಾಮನೆ ಸ್ಥಾಪಿಸಿದರೆ ಹೊರತು, ಮಠಗಳನ್ನಲ್ಲ. ಮಠಗಳೆಲ್ಲ ಮಹಾಮನೆಯಾದಾಗ ಮಾತ್ರ ಬಸವತತ್ವ ಆಚರಣೆಗೆ ಬರಲು ಸಾಧ್ಯ ಎಂದು ಶ್ರೀ ಡಾ.ಸಿದ್ಧರಾಮ ಶರಣರು ಬೆಲ್ದಾಳ ಅಭಿಪ್ರಾಯಪಟ್ಟರು.

    ಗುಣತೀರ್ಥವಾಡಿ ಕಲ್ಯಾಣ ಮಹಾಮನೆ ಮಹಾಮಠದಲ್ಲಿ ಮಂಗಳವಾರ ಹಮ್ಮಿಕೊಂಡ 889ನೇ ಬಸವ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಮಹಾಮನೆಯನ್ನು ಕಟ್ಟಿ ಅಲ್ಲಿ ಅನುಭವ ಮಂಟಪದ ಚರ್ಚೆಗಳನ್ನು ನಡೆಸುತ್ತಿದ್ದರು. ಅವರ ಮಹಾಮನೆ ಪರಿಕಲ್ಪನೆ ಕಾಲಾತೀತವಾದದ್ದು ಎಂದು ವಿಶ್ಲೇಷಿಸಿದರು.

    ಬಸವಕಲ್ಯಾಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಶರಣರ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವ ಕಾರ್ಯ ನಡೆಯಬೇಕು. ಗುಣತೀರ್ಥ ಮತ್ತು ನಾರಾಯಣಪುರ ಈ ಊರುಗಳು ದಾನಮ್ಮ, ಒಕ್ಕಲಿಗ ಮುದ್ದಣ್ಣ, ಘಟ್ಟಿವಾಳಯ್ಯ, ತುರುಗಾಹಿ ರಾಮಣ್ಣ, ಕುರುಬ ಗೊಲ್ಲಾಳ ಅವರು ಲಿಂಗಾನುಷ್ಠಾನ ಮಾಡಿದ ಪುಣ್ಯಸ್ಥಳಗಳು. ಇಲ್ಲಿ ಬೃಹತ್ತಾದ ಗವಿಗಳು ಇವೆ. ಬಸವಕಲ್ಯಾಣದ ಬಿಕೆಡಿಬಿ ಈ ಬಗ್ಗೆ ಚಿಂತನೆ ನಡೆಸಬೇಕು ಎಂದರು.

    ಗೋರಚಿಂಚೋಳಿ ಮಠದ ಶ್ರೀ ಸಿದ್ಧರಾಮೇಶ್ವರ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರನ್ನು ನಗರ ಪ್ರದೇಶಕ್ಕೆ ಸೀಮಿತಗೊಳಿಸದೆ ಗ್ರಾಮೀಣ ಪ್ರದೇಶಕ್ಕೆ ಅವರ ತತ್ವಗಳನ್ನು ಕೊಂಡೊಯ್ದಾಗಲೇ ಸಮಾಜದಲ್ಲಿ ಪರಿವರ್ತನೆ ತರಲು ಸಾಧ್ಯ ಎಂದರು.

    ಶ್ರೀ ಬಸವಪ್ರಭು ಸ್ವಾಮೀಜಿ ಮಾತಾನಾಡಿ, ಮುಂದಿನ ದಿನಗಳಲ್ಲಿ ಕಲ್ಯಾಣ ಮಹಾಮನೆ ವತಿಯಿಂದ ಬಸವ ಜಯಂತಿ ನಿಮಿತ್ತ ವರ್ಷಪೂರ್ತಿ ಬಸವಜ್ಯೋತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಎಐಸಿಸಿ ಸದಸ್ಯ ಆನಂದ ದೇವಪ್ಪ ಮಾತನಾಡಿ, ಬಸವಣ್ಣನವರು ದೇಶದ ಸಂಸ್ಕೃತಿಯ ನಾಯಕ ಎಂದು ಬಣ್ಣಿಸಿದರು.

    ನಿವೃತ್ತ ಅಧಿಕಾರಿ ಎಸ್.ದಿವಾಕರ್, ಪೂಜ್ಯ ಲಲಿತಾ ಮಾತೆ ಮಾತನಾಡಿದರು. ಸಿಡಿಪಿಒ ಶಾರದಾ ಕಲ್ಮಲಕರ್ ಬಸವಧರ್ಮ ಧ್ವಜಾರೋಹಣ ನೆರವೇರಿಸಿದರು. ಶ್ರೀ ನಿಜಲಿಂಗ ಸ್ವಾಮೀಜಿ, ಮುಖಂಡರಾದ ಅರ್ಜುನ ಕನಕ, ದಿಲೀಪ ಶಿಂದೆ, ಭೋಜಪ್ಪ ಪಾಟೀಲ್, ಶ್ರೀದೇವಿ ಉಜಳಂಬೆ, ರಾಮ ಮೇತ್ರೆ, ಬಸವರಾಜ ಹೊನ್ನಾ, ಸಂಜೀವಕುಮಾರ ನಿರಗುಡಿ, ನಾಗಶೆಟ್ಟಿ ದಾಡಗಿ, ಮಲ್ಲಿಕಾಜರ್ುನ ಮಾಳಿ, ಮಹಾದೇವ ಮೇತ್ರೆ, ಲಕ್ಷ್ಮಣ ಮೇತ್ರೆ, ವಿಜಯಕುಮಾರ ಕವಡಿಯಾಳ, ಜಗದೇವಿ ಪಾಟೀಲ್, ಸೋನಾಳಿ ನೀಲಕಂಠೆ, ಸವಿತಾ ಸಜ್ಜನಶೆಟ್ಟಿ, ಗುರುದೇವಿ, ಅನುಸೂಯಾ ಇದ್ದರು. ಶಕುಂತಲಾ ಸ್ವಾಗತಿಸಿದರು. ಸಂಗಮೇಶ ತೊಗರಖೇಡ ನಿರೂಪಣೆ ಮಾಡಿದರು. ಸುಮಿತ್ರಾ ದಾವಣಗಾವೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts