More

    ಮಗುವಿಗೆ ಹಾಲುಣಿಸುವದರಿಂದ ಸೌಂದರ್ಯ ವೃದ್ಧಿ : ಡಾ.ಸ್ನೇಹಾ

    ಗದಗ: ಬಾಣಂತಿಯರು ಮಗುವಿಗೆ ಹಾಲುಣಿಸುವದರಿಂದ ತಾಯಿಯ ಸೌಂದರ್ಯದ ಮೇಲೆ ಪರಿಣಾಮ ಬೀರುವದು ಎಂಬುದು ತಪ್ಪು ಕಲ್ಪನೆ ಎಂದು ಡಾ.ಸ್ನೇಹಾ ಶಶಾಂಕ ಶಿರೋಳ ಹೇಳಿದರು.
    ಗದುಗಿನ ಸರಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಆವರಣದಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರ ಸಂಖ್ಯೆ ೨೧೬ ರಲ್ಲಿ ಗರ್ಭಿಣಿ ಮಹಿಳೆಯರಿಗೆ ಹಾಗೂ ಬಾಣಂತಿಯರಿಗೆ ಗದಗ-ಬೆಟಗೇರಿ ಲೈನ್ಸ್ ಕ್ಲಬ್ ಎರ್ಪಡಿಸಿದ್ದ ಸ್ತನಪಾನ ಜಾಗ್ರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಬಾಣಂತಿಯರು ಮಗುವಿಗೆ ಎದೆಹಾಲು ಉಣಿಸಿದಷ್ಟು ಮಗು ಶಸಕ್ತವಾಗಿ ಹಾಗೂ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತದೆ, ತಾಯಿಯ ಸೌಂದರ್ಯಕ್ಕೆ ತೊಂದರೆ ಇಲ್ಲ ಬದಲಾಗಿ ಸೌಂದರ್ಯ ವೃದ್ಧಿಸುವದು. ಸತ್ವಯುತ ಆಹಾರ ಸೇವನೆ, ಸರಿಯಾದ ಸಮಯಕ್ಕೆ ವಿಶ್ರಾಂತಿ, ಊಟೋಪಚಾರ ಮಾಡಬೇಕೆಂದರು.
    ಲೈನ್ಸ್ ಲೇಡಿಜ್ ಕ್ಲಬ್ ಅಧ್ಯಕ್ಷೆ ಸಾವಿತ್ರಿ ಶಿಗ್ಲಿ ಮಾತನಾಡಿ ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ. ಮಗುವಿನ ಸಂಪೂರ್ಣ ಆರೋಗ್ಯ ವೃದ್ಧಿಗೆ ಇದು ಸಹಕಾರಿ ಸರಿಯಾದ ಕ್ರಮದಲ್ಲಿ ಮಗುವಿಗೆ ಬಾಣಂತಿಯರು ಹಾಲುಣಿಸುವದರಿಂದ ತಾಯಿ ಮಗು ಇಬ್ಬರೂ ಆರೋಗ್ಯವಂತಾಗಿರುತ್ತಾರೆ ಎಂದರು.
    ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಲಿತಾ ಎಸ್.ಅಳವಂಡಿ, ಅಂಗನವಾಡಿ ಮೇಲ್ವಿಚಾರಕಿ ವಿಜಯಲಕ್ಷಿö್ಮà ಗುರುಬಸನಗೌಡ್ರ, ಅಂಗನವಾಡಿ ಕಾರ್ಯಕರ್ತೆ ರತ್ನಾ ಎಲ್.ವಜ್ರೇಶ್ವರಿ, ಅಂಗನವಾಡಿ ಸಹಾಯಕಿ ನೂರಜಾನ್ ಮಕಾನದಾರ, ರಾಜೇಶ್ವರಿ ಕೊಣ್ಣೂರ, ನಿವೇದಿತಾ ಕೊಣ್ಣೂರ, ದೇವಮ್ಮ ಕೋಳಿವಾಡ, ಭಾಗ್ಯಶ್ರೀ ಪಂಪಣ್ಣವರ ಸೇರಿದಂತೆ ಲೈನ್ಸ್ ಲೇಡಿಜ್ ಕ್ಲಬ್ ಕಾರ್ಯದರ್ಶಿ ಅಮೃತಾ ವಾರಕರ, ಖಜಾಂಚಿ ಸುರೇಖಾ ಮಲ್ಲಾಡದ, ವೀಣಾ ಸುಲಾಖೆ, ಅನುರಾಧಾ ಸಾಲಿ, ಅಶ್ವಿನಿ ನೀಲಗುಂದ, ಗದಗ-ಬೆಟಗೇರಿ ಲೈನ್ಸ್ ಕ್ಲಬ್ ಅಧ್ಯಕ್ಷ ರಮೇಶ ಶಿಗ್ಲಿ, ಕಾರ್ಯದರ್ಶಿ ಪ್ರವೀಣ ವಾರಕರ, ಖಜಾಂಚಿ ರಾಜು ಮಲ್ಲಾಡದ, ಕ್ಲಬ್‌ನ ಡಿಸ್ಟಿçÃಕ್ಟ್ ಚೇರ್‌ಪರಸನ್ ಅಶ್ವಥ್ ಸುಲಾಖೆ, ಡಾ.ಜಗದೀಶ ಶಿರೋಳ, ಎಸ್.ಡಿ.ಪಾಟೀಲ, ನಿತೀಶ್ ಸಾಲಿ, ರತನ್ ದೇಸಾಯಿ, ಶಿವಪ್ರಭು ನೀಲಗುಂದ, ಪ್ರಕಾಶ ರಾಯ್ಕರ್ ರಾಜು ವೇರ್ಣೆಕರ ಮುಂತಾದವರು ಪಾಲ್ಗೋಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts