More

    ಅಕ್ಕಮಹಾದೇವಿ ಕದಳಿ ವೇದಿಕೆಯ ಅಮೃತ ಭೋಜನಕ್ಕೆ ಚಾಲನೆ

    ವಿಜಯವಾಣಿ ಸುದ್ದಿಜಾಲ ಗದಗ
    ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಿ ಮಕ್ಕಳಲ್ಲಿ ಪ್ರೋತ್ಸಾಹ ತುಂಬಿ ಅವರ ಭವಿಷ್ಯವನ್ನು ಉನ್ನತಕ್ಕೇರಿಸಲು ಸಮುದಾಯಗಳ ಸಹಭಾಗಿತ್ವ ಅವಶ್ಯವಾಗಿದೆ ಎಂದು ಗದಗ ರೋಟರಿ ಸೆಂಟ್ರಲ್​ ಅಧ್ಯ ವಿಜಯಕುಮಾರ ಹಿರೇಮಠ ಹೇಳಿದರು.
    ಬುಧವಾರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 11 ರಲ್ಲಿ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ಅಮೃತ ಭೋಜನ ಜ್ಞಾನ ಸಿಂಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಬಡ ಹಾಗೂ ಕೂಲಿಕಾಮಿರ್ಕರ ಮಕ್ಕಳು ಪ್ರತಿಭಾನ್ವಿತರಾಗಿದ್ದಾರೆ. ಈ ಮಕ್ಕಳ ಶೈಣಿಕ ಅಭಿವೃದ್ಧಿಗಾಗಿ ನಾವೆಲ್ಲರೂ ಸಹಾಯ ಸಹಕಾರ ನೀಡಬೇಕು. ಪ್ರತಿ ವರ್ಷ ಕದಳಿ ವೇದಿಕೆಯಿಂದ ನಡೆದು ಬಂದ ಈ ಕಾರ್ಯ ಪ್ರಯೋಜನಕಾರಿಯೂ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
    ಕ್ಲಬ್​ ಕಾರ್ಯದಶಿರ್ ಸಂತೋಷ ತೋಟಗಂಟಿಮಠ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಓದು ಬರಹದೊಂದಿಗೆ ಶರಣರ ನಡೆ, ನುಡಿ ಕುರಿತು ತಿಳುವಳಿಕೆ ನೀಡುವುದರಿಂದ ಮಕ್ಕಳು ಸಹ ಅವುಗಳನ್ನು ಅಳವಡಿಸಿಕೊಂಡು ಸುಸಂಸತರಾಗುತ್ತಾರೆ ಎಂದರು.
    ಶಿವಾಚಾರ್ಯ ಹೊಸಳ್ಳಿಮಠ, ಕವಿತಾ ದಂಡಿನ, ಎಂ. ಆರ್​. ಕರಮುಡಿ, ಭಾರತಿ ಕುಲಕಣಿರ್, ಸ್ನೇಹಾ ಹಿರೇಮಠ, ರೇಷ್ಮಾ ಬೆಣಗಿ, ಅನಿತಾ ತೋಟಗಂಟಿಮಠ, ಎ. ಎಚ್​.ನದಾ ಹಲವರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts