More

    ಬುದ್ಧಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

    ಗದಗ: ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಗರದ ಪ್ರತಿಷ್ಠಿತ ಸೆಕ್ಯೂರ ಆಸ್ಪತ್ರೆಯ ವತಿಯಿಂದ ಮಾಡಲಾಯಿತು.
    ಮಂಜು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಂಕರ ಎಸ್. ರಜಪೂತರವರು ಈ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದುಬಾರಿ ಜೀವನದಲ್ಲಿ ನಮ್ಮ ಸಂಸ್ಥೆಯಲ್ಲಿ ಅಂಧ ಅನಾಥ ಮತ್ತು ಬಡ ಮತ್ತು ಮಧ್ಯಮ ವರ್ಗದ ಬುದ್ಧಿ ಮಾಂದ್ಯ ಮಕ್ಕಳಿದ್ದು ಆ ಮಕ್ಕಳಿಗೆ ಉಚಿತವಾಗಿ ಆರೋಗ್ಯ ಸೇವೆಯನ್ನು ಮಾಡುತ್ತಿರುವುದು ಸಂಸ್ಥೆಯ ಅಧ್ಯಕ್ಷರಾಗಿ ನಾನು ತುಂಬು ಹೃದಯದಿಂದ ಸೆಕ್ಯೂರ ಆಸ್ಪತ್ರೆಯ ಈ ಕಾರ್ಯವನ್ನು ತುಂಬಾ ಗೌರವದಿಂದ ಸ್ವಾಗತಿಸುತ್ತೇನೆ ಎಂದು ಬಹಳ ಭಾವುಕರಾಗಿ ಆಸ್ಪತ್ರೆಯ ಮುಖ್ಯಸ್ಥರಿಗೆ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
    ಈ ಉಚಿತ ಆರೋಗ್ಯ ಶಿಬಿರದಲ್ಲಿ ವೈದ್ಯರಾದ ಡಾ. ಸುಮನ್ ಮಕಾಂದಾರ ಎಲ್ಲ ಮಕ್ಕಳ ಆರೋಗ್ಯವನ್ನು ತಪಾಸನೆ ಮಾಡಿದರು. ಇವರಿಗೆ ಸಹಾಯಕರಾಗಿ ಶ್ರೀಮತಿ ದೀಪಾ ಕೊಟ್ಟೂರ, ಸ್ಟಾಪ್ ನರ್ಸರಾದ ಕರೀಶ್ಮಾಬಾನು ಬಳಗಾನೂರ ಸೇವೆಯನ್ನು ಮಾಡಿದರು.
    ಈ ಕಾಯಕ್ರಮದ ಪ್ರಾರಂಭದಲ್ಲಿ ವೀರೇಂದ್ರಸಿAಗ ರಜಪೂತ ಸರ್ವರನ್ನೂ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಪ್ರಧಾನ ಗುರುಗಳು ಮಾಡಿದರು. ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು ೫೬ ಜನ ಶಾಲೆಯ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಯಿತು.
    ವೈದ್ಯರಾದ ಶ್ರೀಮತಿ ಸುಮನ್ ಮಕಾನದಾರ ಮಾತನಾಡಿ ಈ ಶಾಲೆಯು ಸ್ವಚ್ಛತೆ ಮತ್ತು ಉತ್ತಮ ವಾತಾವರಣದಿಂದ ಕೂಡಿದ್ದು ಎಲ್ಲ ವಿದ್ಯಾರ್ಥಿಗಳು ಆರೋಗ್ಯಕರವಾಗಿದ್ದಾರೆ ಎಂದು ಹೇಳಿದರು.
    ಈ ಕಾರ್ಯಕ್ರಮದ ಕೊನೆಯಲ್ಲಿ ಎಸ್. ಟಿ. ಕೊಪ್ಪದ ವಂದನಾರ್ಪಣೆಗೈದರು. ಈ ಶಿಬಿರದಲ್ಲಿ ಮ್ಯಾನೇಜರರಾದ ಭರತ್ ವಿ. ಕಶ್ಯಪ್ ಮತ್ತು ಪಿ.ಆರ್.ಓ. ಶರಣಕುಮಾರ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts