More

    ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚಳ

    ಶಿವಾನಂದ ಹಿರೇಮಠ, ಗದಗ
    ಸರ್ಕಾರದ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ಜಿಲ್ಲೆಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಬಾಲ್ಯ ವಿವಾಹ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದೆ. ಪೋಷಕರಲ್ಲಿ ಜಾಗೃತಿ ಕೊರತೆ ಮತ್ತು ಜವಾಬ್ದಾರಿಗಳಿಂದ ಕಳಚಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳ ಬಾಲ್ಯ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಲೈಂಗಿಕ ದೌರ್ಜಜ್ಯ ಪ್ರಕರಣಗಳು ಅಧಿಕವಾಗುತ್ತಿದ್ದು, ಇದನ್ನು ನಿಯಂತ್ರಿಸಲು ಜಿಲ್ಲಾ ಮಕ್ಕಳ ರಕ್ಷಣಾ ಟಕಕ್ಕೆ ಸವಾಲಾಗಿ ಪರಿಣಮಿಸಿದೆ. 2021&22ರ ಕೋವಿಡ್​ ಅವಧಿಯಲ್ಲಿ ಪೋಷಕರು ಮಕ್ಕಳ ಬಾಲ್ಯ ವಿವಾಹಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಅಂಕಿ ಅಂಶಗಳಿಂದ ಈ ವಿಷಯ ಬೆಳಕಿಗೆ ಬಂದಿದ್ದು, ಆತಂಕಕಾರಿ ಬೆಳವಣಿಗೆಯೇ ಸರಿ.
    2022&23ನೇ ಸಾಲಿನಲ್ಲಿ 31 ಪೋಕ್ಸೋ ಪ್ರಕರಣಗಳು, 47 ಬಾಲ್ಯ ವಿವಾಹ ತಡೆ ಪ್ರಕರಣಗಳು ದಾಖಲಾಗಿದ್ದು, ಕಳವಳ ಉಂಟು ಮಾಡಿದೆ. 2023&24ನೇ ಸಾಲಿನ ಏಪ್ರಿಲ್​ ತಿಂಗಳು ಒಂದರಲ್ಲೇ 8 ಪೋಕ್ಸೊ, 3 ಬಾಲ್ಯ ವಿವಾಹ ತಡೆ ಪ್ರಕರಣ ದಾಖಲಾಗಿವೆ. ಮಕ್ಕಳ ಮೇಲೆ ಅತ್ಯಾಚಾರ, ಶೋಷಣೆ, ದೌರ್ಜನ್ಯ ಎಸಗಿದವರ ಮೇಲೆ ಶಿೆ ವಿಧಿಸಲು ಬಾಲ್ಯ ವಿವಾಹ ನಿಷೇಧ ಕಾಯಿದೆ ಮತ್ತು ಪೋಕ್ಸೋ ಕಾಯಿದೆ ಜಾರಿಯಲ್ಲಿದ್ದರೂ ಅತ್ಯಾಚಾರ, ಶೋಷಣೆ ಪ್ರಕರಣಗಳಲ್ಲಿ ಏರಿಕೆ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ.
    ಮಕ್ಕಳ ರಕ್ಷಣಾ ಟಕದಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಹಾಗಾಗಿ ಮಕ್ಕಳ ರಕ್ಷಣಾ ಕಾರ್ಯಗಳು ಸಮರ್ಪಕವಾಗಿ ಜರುಗುತ್ತಿಲ್ಲ ಎಂದು ಇಲಾಖಾ ಮೂಲಗಳು ಕಳವಳ ವ್ಯಕ್ತಪಡಿಸಿವೆ.

    ಬಾಕ್ಸ್​:
    ಬಾಗಶಃ ಇಂತಹ ಪ್ರಕರಣಗಳಲ್ಲಿ ಹುಡುಗ ಹುಡುಗಿಯರ ನಡುವಿನ ಪ್ರೇಮಪಾಶವೇ ಮುಂದೆ ಪೋಕ್ಸೊ ಪ್ರಕರಣಗಳತ್ತ ವಾಲುತ್ತಿವೆ ಎಂಬುದು ತನಿಖಾ ವರದಿಗಳಿಂದ ಬೆಳಕಿಗೆ ಬಂದಿವೆ. ಆದರೆ, 18 ವರ್ಷ ಮೀರದ ಹಿನ್ನೆಲೆ ಸಾಮಾನ್ಯವಾಗಿ ಪ್ರಕರಣ ದಾಖಲಿಸಲಾಗುತ್ತಿದೆ. ದೌರ್ಜನ್ಯ ಪ್ರಕರಣಗಳಲ್ಲಿ ತಲಾ ಪ್ರಕರಣಕ್ಕೆ ವೈದ್ಯಕಿಯ ವೆಚ್ಚಕ್ಕಾಗಿ ಸರ್ಕಾರ 5 ಸಾವಿರ ರೂ. ನಿಂದ 1 ಲಕ್ಷದ ವರೆಗೆ ಪರಿಹಾರ ಧನ ನೀಡುವ ನಿಯಮವಿದೆ. ಜಿಲ್ಲೆಯಲ್ಲಿ ಹೆಣ್ಣುಮಗುವಿನ ವೈದ್ಯಕಿಯ ಚಿಕಿತ್ಸೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದ್ದು, ಪ್ರತಿ ಪ್ರಕರಣದಲ್ಲಿ ಮಕ್ಕಳಿಗೆ 5 ಸಾವಿರ ರೂ, ನೀಡುವ ಮಿತಿಯನ್ನು ಜಿಲ್ಲಾಡಳಿತ ಮಕ್ಕಳ ಕಲ್ಯಾಣ ಇಲಾಖೆಗೆ ವಿಧಿಸಿದೆ.

    ಬಾಲ್ಯಾವಸ್ಥೆಯಲ್ಲಿ ಹೆರಿಗೆ:
    ಬಾಲ್ಯ ವಿವಾಹದಲ್ಲಿ ವಾಷಿರ್ಕವಾಗಿ ಸರಾಸರಿ 2 ರಿಂದ 3 ಬಾಲಕಿಯರಿಗೆ ಹೆರಿಗೆ ಆಗುತ್ತಿವೆ ಎಂದು ಇಲಾಖಾ ಮೂಲಗಳು ತಿಳಿಸಿವೆ. ಇಂತಹ ಪ್ರಕರಣದಲ್ಲಿ ಪೋಷಕರಿಗೆ ಬೇಡವಾದ ಮಕ್ಕಳನ್ನು “ಕಾನೂನು ದತ್ತು ಮುಕ್ತ ನಿಯಮ’ದಡಿ ಮಕ್ಕಳನ್ನು ಮತ್ತೊಬ್ಬರಿಗೆ ದತ್ತು ನೀಡಲಾಗುತ್ತಿದೆ.

    ಗರ್ಭಪಾತಕ್ಕೂ ಕಾನೂನು:
    ದೌಜ್ಯನ್ಯ ಪ್ರಕರಣಗಳಲ್ಲಿ ಗರ್ಭಪಾತಕ್ಕೂ ಅವಕಾಶವಿದೆ ಎಂಬುದು ಹಲವರಿಗೆ ತಿಳಿದಿಲ್ಲ. ವೈದ್ಯಕಿಯ ಗರ್ಭಪಾತ ಅಧಿನಿಯಮ ಪ್ರಕಾರ ಕೋರ್ಟ್​ ನಿರ್ದೇಶನ ಮೂಲಕ ಗರ್ಭಪಾತಕ್ಕೆ ಅನುಮತಿ ನೀಡಲಾಗುತ್ತಿದೆ. 18 ವರ್ಷದ ಒಳಗಿನ ಗರ್ಭಪಾತ ಹಾಗೂ 18 ವರ್ಷ ಮೀರಿದ ನಂತರ ಕೋರ್ಟ್​ ಅನುಮತಿ ಪಡೆದು ವಿವಾಹ ಜರುಗಿಸಬಹುದು.

    ವೈಲ್ಯತೆಗಳೇನು?

    • ಪಾಲಕ, ಪೋಷಕರಲ್ಲಿ ಜಾಗೃತಿ ವೈಲ್ಯ
    • ಸ್ಥಳಿಯ ಪಿಡಿಓಳಿಂದ ಕಾವಲು ಸಮಿತಿ ಸೃಜಿಸಲು ವೈಲ್ಯ
    • ಗ್ರಾಪಂ, ತಾಪಂ ಮಟ್ಟದಲ್ಲಿ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ವೈಲ್ಯತೆ.
    • ಪ್ರಕರಣದಲ್ಲಿ ಕಠಿಣ ಶಿೆಗೆ ಗುರಿಯಾಗುವ ಪ್ರಮಾಣ ಕಡಿಮೆ ಇರುವುದರಿಂದ ಪಾಲಕರಲ್ಲಿ ಜಾಗೃತಿ ಮೂಡುತ್ತಿಲ್ಲ.

    ಮುಖ್ಯಾಂಶಗಳು:

    • ವರ್ಷದಿಂದ ವರ್ಷಕ್ಕೆ ಪೋಕ್ಸೊ, ಬಾಲ್ಯ ವಿವಾಹ ತಡೆ ಪ್ರಕರಣ ಅಧಿಕ
    • ಕೋವಿಡ್​ ಸಂದರ್ಭದಲ್ಲಿ ಬಾಲ್ಯ ವಿವಾಹಕ್ಕೆ ಪೋಷಕರ ಆಸಕ್ತಿ.
    • ಕೋವಿಡ್​ ಸಂದರ್ಭದಲ್ಲಿ ಪೋಕ್ಸೊ ಪ್ರಕರಣ ಕಡಿಮೆ ದಾಖಲು
    • ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಲ್ಲಿ ದೌರ್ಜನ್ಯ ಮಕ್ಕಳಿಗೆ ಚಿಕಿತ್ಸಾ ಸೌಲಭ್ಯ.
    • ಗದಗ ತಾಲೂಕಿನಲ್ಲಿ ಬಾಲ್ಯ ವಿವಾಹ ತಡೆ ಪ್ರಕರಣಗಳು ಅಧಿಕ.

    ಕೋಟ್​:
    1098 ಸಹಾಯವಾಣಿ ಪರಿಣಾಮಕಾರಿಯಾದರೂ ಪ್ರಕರಣದ ದಾಕಲಾಗುತ್ತಿಲ್ಲ ಮತ್ತು ಕಠಿಣ ಶಿೆಗ ಗುರಿಯಾಗುತ್ತಿಲ್ಲ. ಕಠಿಣ ಶಿೆಯಾದೆ ಮಾತ್ರ ಸಮಾಜದಲ್ಲಿ ಜಾಗೃತಿಯಾಗುತ್ತದೆ. ಪೋಷಕರಲ್ಲಿ ತಿಳುವಳಿಕೆ ಮೂಡುತ್ತದೆ.
    – ರಾಧಾ ಮಣ್ಣೂರು, ಮಕ್ಕಳ ರಕ್ಷಣಾ ಅಧಿಕಾರಿ

    ಕೋಟ್​:
    ಪೋಷಕರಲ್ಲಿ ಕಾನೂನು ಅರಿವು ಮೂಡಬೇಕು. ಗ್ರಾಪಂ ಮಟ್ಟದ ಅಧಿಕಾರಿಗಳು ಮೊದಲ ಹಂತದ ಅಧಿಕಾರಿಗಳು ಆಗಿರುವುದರಿಂದ ಅವರ ಜವಾಬ್ದಾರಿ ಪ್ರಮುಖವಾಗಿರುತ್ತದೆ.
    – ಪರಶುರಾಮ ಶೆಟ್ಟಪ್ಪನ್ನವರ,
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts