More

    ಮಕ್ಕಳ ನಟನೆಗೆ ಅನುಮತಿ ಕಡ್ಡಾಯ

    ಕಲಬುರಗಿ: ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಮಕ್ಕಳು ನಟಿಸಬೇಕಾದರೆ ಆಯಾ ಜಿಲ್ಲೆ ಜಿಲ್ಲಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಾಲ ನಟರು ಇಲ್ಲವೆ ನಟಿಯರ ಪಾತ್ರಕ್ಕಾಗಿ ಮಕ್ಕಳನ್ನು ಬಳಸಲು ಇಚ್ಛಿಸುವ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ಆಯೋಜಕರು ಮೊದಲು ಡಿಸಿಯಿಂದ ಅನುಮತಿ ಪತ್ರ ಪಡೆಯಬೇಕು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆ ಅಧ್ಯಕ್ಷರೂ ಆದ ಡಿಸಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾರ್ಮಿಕ ಇಲಾಖೆ ಈ ಆದೇಶ ಹೊರಡಿಸಿದೆ. ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಬೇಕಾದರೆ ಮೊದಲು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದಿರಬೇಕು. ಸಿನಿಮಾ-ಸೀರಿಯಲ್ ತಂಡಗಳು ಮಕ್ಕಳನ್ನು ದಿನದಲ್ಲಿ ಐದು ಗಂಟೆ ಮಾತ್ರ ನಟನೆಗೆ ಬಳಸಿಕೊಳ್ಳಬೇಕು. ಈ ರೀತಿ ತಿಂಗಳಲ್ಲಿ ೨೭ ದಿನ ಮಾತ್ರ ಬಳಸಿಕೊಳ್ಳಬೇಕು ಎಂದು ಸರ್ಕಾರ ಷರತ್ತು ವಿಧಿಸಿದ್ದು, ನಿಯಮ ಉಲ್ಲಂಘಿಸಿದAತೆ ಎಚ್ಚರಿಕೆ ನೀಡಿದೆ ಎಂದು ಹೇಳಿದ್ದಾರೆ.
    ಫೋಟೋ-ಸಿಯುಕೆ
    ಕಲಬುರಗಿ ಸಿಯುಕೆನಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡೆ, ಸಾಂಸ್ಕೃತಿಕ, ನಾವಿನ್ಯತೆ ಫೆಸ್ಟ್ ಕಾರ್ಯಕ್ರಮದಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಪ್ರಮೋದ ಗಾಯ್, ಪ್ರೊ.ಆರ್.ಆರ್.ಬಿರಾದಾರ್, ಪ್ರೊ.ಆರ್.ಎಸ್.ಹೆಗಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts